ಬೆಳಗಾವಿ

ಬಸವಣ್ಣನವರ ಅವಹೇಳನ ಖಂಡಿಸಿ ಪೊಲೀಸ್ ಠಾಣೆಗೆ ಮನವಿ

ಬಸವಣ್ಣನವರ ಅವಹೇಳನ ಖಂಡಿಸಿ ಪೊಲೀಸ್ ಠಾಣೆಗೆ ಮನವಿ

ಲೋಕದರ್ಶನ ವರದಿ 

         ನೇಸರಗಿ 23 : ಇತ್ತಿಚೇಗೆ ಲೇಖಕರಾದ ರವಿ ಹಂಜ್  ಅವರು ಬಸವ ಮಂಟಪ ಕೃತಿಯಲ್ಲಿ ಸಾಂಸ್ಕೃತಿಕ ನಾಯಕ, ಮಹಾ ಮಾನವತಾವಾದಿ ಬಸವಣ್ಣವರ ಬಗ್ಗೆ ಅವಹೇಳನಕಾರಿಯಾಗಿ ಬರೆದಿರುವದನ್ನು ಖಂಡಿಸಿ ಸಮೀಪದ ಮತ್ತಿಕೊಪ್ಪ ಗ್ರಾಮದ ಬಸವ ಅಭಿಮಾನಿಗಳು ನೇಸರಗಿ ಪೋಲಿಸ್ ಠಾಣೆಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.

           ಮುಖಂಡ ಅಡಿವೆಪ್ಪ ಹೊಸಮನಿ ಮಾತನಾಡಿ, 12 ನೇ ಶತಮಾನದಲ್ಲಿ ವಚನಗಳ ಮೂಲಕ ಸಮಾನತೆ ಹುಟ್ಟು ಹಾಕಿದ ಬಸವಣ್ಣವರನ್ನು ಸಾಂಸ್ಕೃತಿಕ ನಾಯಕ ಎಂದು ಕರೆಯುತ್ತಾರೆ. ಅಂತಹ ಮಹಾನ್ ವ್ಯಕ್ತಿತ್ವ ವನ್ನು ಹೊಂದಿದವರನ್ನು ಅವಹೇಳನಕಾರಿಯಾಗಿ ಕೃತಿಯಲ್ಲಿ ಪರಿಚಯಿಸಿದ ರವಿ ಹಂಜ್ ಅವರನ್ನು ಕೂಡಲೇ ಬಂಧಿಸಬೇಕೆಂದು ಆಗ್ರಹಿಸಿದರು.

              ಸಿಪಿಐ ಗಜಾನನ ನಾಯ್ಕ ಮನವಿ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಮಹಾಂತೇಶ ಮೊಹರೆ, ಶಿವಲಿಂಗಯ್ಯ ವಿರಕ್ತಮಠ, ಅರುಣ ಸಿದ್ದನ್ನವರ, ಸೋಮಪ್ಪ ತಕ್ಕುನವರ, ಪ್ರಕಾಶ ಮೊಹರೆ, ಸೋಮಪ್ಪ ಹೊಸಮನಿ, ಹಣಮಂತ ದೊಡ್ಡನ್ನವರ, ಗಂಗಪ್ಪ ಕೊಳದೂರ, ಇನ್ನಿತರರು ಉಪಸ್ಥಿತರಿದ್ದರು. 


ಸುದ್ದಿ ಓದಿ