ಪೊಲೀಸ್ ಮತ್ತು ಪತ್ರಕರ್ತರ ಕ್ರಿಕೆಟ್ ಪಂದ್ಯಾವಳಿ ಕೆಯುಡಬ್ಲ್ಯೂ ಜೆ ಕೊಪ್ಪಳ ಜಿಲ್ಲಾ ಕಾರ್ಯನಿರತ ಪತ್ರ ಕರ್ತರ ಸಂಘದ ತಂಡಕ್ಕೆ ಭರ್ಜರಿ ಜಯ
ಕೊಪ್ಪಳ 23: ಪೊಲೀಸ್ ಕ್ರೀಡಾಕೂಟದ ಅಂಗವಾಗಿ ನಗರದ ತಾಲೂಕು ಕ್ರೀಡಾಂಗಣದಲ್ಲಿ ನಡೆದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಜಿಲ್ಲಾ ಘಟಕ (ಕೆ ಯು ಡಬ್ಲ್ಯೂ ಜೆ) ಕೊಪ್ಪಳ ತಂಡ ಅದ್ಭುತ ಪ್ರದರ್ಶನ ನೀಡಿ ಗಮನ ಸೆಳೆಯಿತು. ಬರೋಬ್ಬರಿ 12 ವರ್ಷಗಳ ಬಳಿಕ ಜಿಲ್ಲಾ ಪೊಲೀಸ್ ಇಲಾಖೆ ಅಧಿಕಾರಿಗಳ ತಂಡದ ವಿರುದ್ಧ ಗೆಲುವು ಸಾಧಿಸಿದ ಕೆ ಯು ಡಬ್ಲ್ಯೂತಂಡ, ಮೀಡಿಯಾ ಕ್ಲಬ್ ತಂಡದ ವಿರುದ್ಧವೂ ಭರ್ಜರಿ ಜಯ ದಾಖಲಿಸಿ ಸಂಭ್ರಮಿಸಿತು.
ಮೀಡಿಯಾ ಕ್ಲಬ್ ತಂಡದ ವಿರುದ್ಧ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಕೆಯುಡಬ್ಲ್ಯೂ ಜೆ ತಂಡ ನಿಗದಿತ 8 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 76 ರನ್ಗಳ ಉತ್ತಮ ಮೊತ್ತ ಕಲೆಹಾಕಿತು. ತಂಡದ ಪರ ಬ್ರಹ್ಮಾನಂದ 34 ರನ್, ಧರ್ಮಣ್ಣ 22 ರನ್ ಹಾಗೂ ಅತೀಕ್ 10 ರನ್ ಗಳಿಸಿದರು.
ಇತರೆ ಆಟಗಾರರು 10 ರನ್ಗಳ ಕೊಡುಗೆ ನೀಡಿದರು.76 ರನ್ಗಳ ಗುರಿ ಬೆನ್ನಟ್ಟಿದ ಮೀಡಿಯಾ ಕ್ಲಬ್ ತಂಡ ಆರಂಭದಿಂದಲೇ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ನಿಗದಿತ 8 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 56 ರನ್ ಗಳಿಸಲಷ್ಟೇ ಶಕ್ತವಾಯಿತು. ತಂಡದ ಪರ ಅನಿಲ್ 10 ಹಾಗೂ ವಿಠ್ಠಲ್ 14 ರನ್ ಗಳಿಸಿದರು. ಉಳಿದ ಆಟಗಾರರು ಒಂದಂಕಿ ಮೊತ್ತಕ್ಕೆ ಸೀಮಿತರಾದರು.
ಪರಿಣಾಮ ಕೆ ಯು ಡಬ್ಲ್ಯೂ ಜೆ ತಂಡ ಸುಲಭ ಗೆಲುವು ದಾಖಲಿಸಿತು.
ಕೊನೆಯ ಎಸೆತದವರೆಗೂ ಉಸಿರು ಬಿಗಿಹಿಡಿಸಿದ ಪಂದ್ಯ!ಜಿಲ್ಲಾ ಪೊಲೀಸ್ ಇಲಾಖೆ ಅಧಿಕಾರಿಗಳ ತಂಡದ ವಿರುದ್ಧ ನಡೆದ ಪಂದ್ಯ ಮಾತ್ರ ಕೊನೆಯ ಎಸೆತದವರೆಗೂ ರೋಚಕತೆಯಿಂದ ಕೂಡಿತ್ತು. ಪಂದ್ಯದ ಕೊನೆಯ ಓವರ್ನಲ್ಲಿ ಗೆಲುವಿಗೆ 6 ಎಸೆತಗಳಲ್ಲಿ 6 ರನ್ಗಳ ಅಗತ್ಯವಿತ್ತು. ಮೊದಲ ಎರಡು ಎಸೆತಗಳಲ್ಲಿ ರನ್ ಗಳಿಸಲು ಸಾಧ್ಯವಾಗದೆ ಡಬ್ಲ್ಯೂ ಜೆ ತಂಡ ಒತ್ತಡಕ್ಕೆ ಸಿಲುಕಿತು. ಮೂರನೇ ಎಸೆತದಲ್ಲಿ ಧರ್ಮಣ್ಣ ವಿಕೆಟ್ ಒಪ್ಪಿಸಿದಾಗ ಪಂದ್ಯ ಮತ್ತಷ್ಟು ಕುತೂಹಲ ಮೂಡಿಸಿತು.ನಂತರ ಕ್ರೀಸ್ಗೆ ಬಂದ ಮೌನೇಶ ಮಾಗಳದ ಒಂದು ರನ್ ಗಳಿಸಿ ಬ್ರಹ್ಮಾನಂದ ಅವರಿಗೆ ಬ್ಯಾಟಿಂಗ್ ಅವಕಾಶ ನೀಡಿದರು.
ಬ್ರಹ್ಮಾನಂದ ಕೂಡ ಒಂದು ರನ್ ಗಳಿಸಿದರು. ಕೊನೆಯ ಎಸೆತದಲ್ಲಿ ಗೆಲುವಿಗೆ ನಾಲ್ಕು ರನ್ಗಳ ಅಗತ್ಯವಿತ್ತು. ಈ ಸಂದರ್ಭದಲ್ಲಿ ಎಸೆತ ನೋಬಾಲ್ ಆಗುತ್ತಿದ್ದಂತೆ ಪಂದ್ಯದ ಚಿತ್ರಣವೇ ಬದಲಾಯಿತು.ಫ್ರೀಹಿಟ್ ಎಸೆತದಲ್ಲಿ ಗೆಲುವಿಗೆ ಒಂದು ರನ್ ಬೇಕಿದ್ದಾಗ ಮೂರು ರನ್ ಗಳಿಸಲು ಯತ್ನಿಸಿದ ಬ್ರಹ್ಮಾನಂದ ರನೌಟ್ ಆಗಿ ಪೆವಿಲಿಯನ್ಗೆ ಮರಳಿದರು. ಇದರಿಂದ ಮೈದಾನದಲ್ಲಿ ಮತ್ತೆ ಆತಂಕದ ವಾತಾವರಣ ನಿರ್ಮಾಣವಾಯಿತು.