ಮಾದಕ ದ್ರವ್ಯ ಸ್ವಾಸ್ಥ್ಯ ದಂತ ದುಶ್ಚಟಗಳಿಂದ ವಿದ್ಯಾರ್ಥಿಗಳು ದೂರ ಇರಬೇಕು- ಶಿವರಾಜ್ ಸಿಮೀಕೇರಿ
ಲಕ್ಷ್ಮೇಶ್ವರ " 23: ಯುವಕ ವಿದ್ಯಾರ್ಥಿಗಳು ಉತ್ತಮ ವಿದ್ಯಾಭ್ಯಾಸದೊಂದಿಗೆ ತಮ್ಮ ಉತ್ತಮ ಭವಿಷ್ಯದ ಕಡೆಗೆ ಹೆಚ್ಚು ಒಲವು ನೀಡಬೇಕು ಉತ್ತಮವಾದ ಆರೋಗ್ಯವನ್ನು ಕಾಪಾಡಿಕೊಂಡು ಮಾದಕ ದ್ರವ್ಯ ಸ್ವಾಸ್ಥ್ಯ ದಂತ ದುಶ್ಚಟಗಳಿಂದ ದೂರ ಇರಬೇಕು ಎಂದು ಶಿರಹಟ್ಟಿ ಲಕ್ಷ್ಮೇಶ್ವರ ತಾಲೂಕುಗಳ ಕ್ಷೇತ್ರ ಶಿಕ್ಷಣಾಧಿಕಾರಿ ಶಿವರಾಜ್ ಸಿಮೀಕೇರಿ ಹೇಳಿದರು.
ಅವರು ಪಟ್ಟಣದಲ್ಲಿ ತಾಲೂಕು ಆಡಳಿತ ತಾಲೂಕು ಪಂಚಾಯಿತಿ ಆರೋಗ್ಯ ಇಲಾಖೆ ಸಮಾಜ ಕಲ್ಯಾಣ ಇಲಾಖೆ ಕಾರ್ಮಿಕ ಇಲಾಖೆ ಪೊಲೀಸ್ ಇಲಾಖೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕಾನೂನು ಸೇವೆಗಳ ಸಮಿತಿ ವತಿಯಿಂದ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಮಾದಕ ದ್ರವ್ಯ ಸ್ವಾಸ್ಥ್ಯ ದಂತ ದುಕ್ಷಟಗಳಿಂದ ದೂರ ಮಾರ್ಗದರ್ಶನ ಜಾಗೃತಿ ಕಾರ್ಯಕ್ರಮದ ಅಂಗವಾಗಿ ಲಕ್ಷ್ಮೇಶ್ವರ ಪಟ್ಟಣದಲ್ಲಿ ವಿವಿಧಮಾದಕ ದ್ರವ್ಯ ವಸ್ತುಗಳ ಬಳಕೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಿ ವಿನಾಯಕ ನಗರದಲ್ಲಿ ಇರುವ ಬಿಸಿಎಲ್ ವಿದ್ಯಾ ಸಂಸ್ಥೆಯಲ್ಲಿ ನಡೆದ ಕಾರ್ಯಕ್ರಮವನ್ನು ಸಸಿ ಗಿಡಕ್ಕೆ ನೀರು ಹಾಕುವ ಮೂಲಕ ಉದ್ಘಾಟಿಸಿ ದುಶ್ಚಟಗಳಿಂದ ವಿದ್ಯಾರ್ಥಿಗಳು ದೂರ ಇರುವಂತೆ ಮಾರ್ಗದರ್ಶನ ನೀಡಿದರು.
ಈ ಸಮಯದಲ್ಲಿ ಆಹಾರ ಭದ್ರತಾ ಮತ್ತು ಆರೋಗ್ಯ ಇಲಾಖೆಯ ಡಾ.ಶುಭಾಷ ದಾಯಗೂಡ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೃತ್ಯುಂಜಯ ಗುಡ್ಡದನ್ನೇವೇರಿ ಕಾನೂನು ಇಲಾಖೆಯ ಪ್ರಕಾಶ್ ವಾಲಿ ಪೋಲಿಸ್ ಇಲಾಖೆಯ ಕ್ರೈಂ ಪಿಎಸ್ಐ ಟಿಕೆ ರಾರೋಡ ಸೇರಿದಂತೆ ವಿವಿಧ ಇಲಾಖೆಯ ತಾಲೂಕು ಮಟ್ಟದ ಅಧಿಕಾರಿಗಳು ಬಿಸಿಎನ್ ವಿದ್ಯಾ ಸಂಸ್ಥೆಯ ಶಿಕ್ಷಕರು ವಿದ್ಯಾರ್ಥಿಗಳು ಇದ್ದರು