ಗದಗ

ಚೆನ್ನಮ್ಮನ ಶೌರ್ಯ ಧೈರ್ಯ ದೇಶಪ್ರೇಮ ಅಜರಾಮರ ಮುಕ್ತಿಮಂದಿರ ಶ್ರೀ ವಿಮಲ ರೇಣುಕ ವೀರ ಮುಕ್ತಿಮುನಿ ಶಿವಾಚಾರ್ಯ ಮಹಾಸ್ವಾಮಿಗಳು

ಚೆನ್ನಮ್ಮನ ಶೌರ್ಯ ಧೈರ್ಯ ದೇಶಪ್ರೇಮ ಅಜರಾಮರ ಮುಕ್ತಿಮಂದಿರ ಶ್ರೀ ವಿಮಲ ರೇಣುಕ ವೀರ ಮುಕ್ತಿಮುನಿ ಶಿವಾಚಾರ್ಯ ಮಹಾಸ್ವಾಮಿಗಳು
Chennamma’s valor, courage, and patriotism are immortal. — Sri Vimala Renuka Veera Muktimuni Shivac

            ಲಕ್ಷ್ಮೇಶ್ವರ 22 ;  "ಕಿತ್ತೂರು ರಾಣಿ ಚೆನ್ನಮ್ಮನವರ ದೇಶಪ್ರೇಮವು ಭಾರತೀಯ ಇತಿಹಾಸದಲ್ಲಿಯೇ ಅತ್ಯಂತ ಶ್ರೇಷ್ಠವಾದದ್ದು.ಅವರ ದೇಶಭಕ್ತಿ ಮತ್ತು ಶೌರ್ಯ ಧೈರ್ಯ ಅಜರಾಮರ ಬ್ರಿಟಿಷರ ದಬ್ಬಾಳಿಕೆಗೆ ಎದೆಗುಂದದೆ, ’ಕಪ್ಪ ಕೊಡುವುದಿಲ್ಲ’ ಎಂದು ಸಿಂಹಿಣಿಯಂತೆ ಗರ್ಜಿಸಿದ ವೀರ ಮಹಿಳೆ ಕಿತ್ತೂರು ರಾಣಿ ಚೆನ್ನಮ್ಮ. ತಮ್ಮ ಸ್ವಂತ ಸುಖಕ್ಕಿಂತ ಮಾತೃಭೂಮಿಯ ಸ್ವಾತಂತ್ರ್ಯ ಮತ್ತು ಸ್ವಾಭಿಮಾನವೇ ದೊಡ್ಡದು ಎಂದು ಭೂಕೈಲಾಸ ಮುಕ್ತಿ ಮಂದಿರ ಧರ್ಮಕ್ಷೇತ್ರದ ಪಟ್ಟಾಧ್ಯಕ್ಷರಾದ  ವಿಮಲದೇನುಕ ವೀರ ಮುಕ್ತಿಮುನಿ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.

            ಅವರು ಲಕ್ಷ್ಮೇಶ್ವರ ಪಟ್ಟಣದ ಸೋಮೇಶ್ವರ ತೇರಿನ ಮನೆ ಆವರಣದಲ್ಲಿ ಶನಿವಾರ ಸಂಜೆ ನಡೆದ ಲಕ್ಷ್ಮೇಶ್ವರ ಹಾಗೂ ಶಿರಹಟ್ಟಿ ತಾಲೂಕು ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ವತಿಯಿಂದ ಹಮ್ಮಿಕೊಂಡಿದ್ದ ವೀರರಾಣಿ ಕಿತ್ತೂರು ಚೆನ್ನಮ್ಮನ 202 ನೇ ವಿಜಯೋತ್ಸವ ಹಾಗೂ 248ನೆಯ ಜಯಂತೋತ್ಸವ ಮತ್ತು ಲಕ್ಷ್ಮೇಶ್ವರ ತಾಲೂಕು ನೂತನ ಪದಾಧಿಕಾರಿಗಳ ಪದಗ್ರಹಣ ತಾಲೂಕು ಮಟ್ಟದ ಜಾಗೃತಿ ಸಮಾವೇಶ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿ.

            ಮಾತನಾಡಿದ ಅವರು ಭಾರತದ ಮೊದಲ ಸ್ವಾತಂತ್ರ್ಯ ಸಂಗ್ರಾಮಕ್ಕೂ ಮುನ್ನವೇ ಬ್ರಿಟಿಷರ ವಿರುದ್ಧ ರಣಕಹಳೆ ಮೊಳಗಿಸಿದ ಚೆನ್ನಮ್ಮ ತನ್ನ ಮಗನನ್ನು ಕಳೆದುಕೊಂಡ ನೋವಿದ್ದರೂ, ಇಡೀ ಕಿತ್ತೂರು ರಾಜ್ಯವನ್ನೇ ತನ್ನ ಕುಟುಂಬವೆಂದು ಭಾವಿಸಿ ಪ್ರಾಣದ ಹಂಗು ತೊರೆದು ಹೋರಾಡಿದ ಅವರ ದೇಶಪ್ರೇಮ ಅಜರಾಮರ. ಚೆನ್ನಮ್ಮನವರ ತ್ಯಾಗ, ಧೈರ್ಯ ಮತ್ತು ದೇಶಭಕ್ತಿ ಇಂದಿಗೂ ನಮಗೆಲ್ಲರಿಗೂ ಸ್ಫೂರ್ತಿಯ ಸೆಲೆಯಾಗಿದೆ.  

              ವೀರ ಮಹಿಳೆಯ ದೇಶಪ್ರೇಮವನ್ನು ಇಂದಿನ ಎಲ್ಲ ಸಮಾಜ ಬಾಂಧವರು ತಮ್ಮ ಜೀವನದಲ್ಲಿ ಹಂಚಿಕೊಂಡು ಸಮಾಜದ ಉನ್ನತ ಅಭಿವೃದ್ಧಿಗಾಗಿ ಶ್ರಮಿಸಬೇಕಾಗಿದೆ ಎಂದರುನಿರಂಜನ ಜಗದ್ಗುರು ಪಕೀರ ದಿಂಗಾಲೇಶ್ವರ ಮಹಾಸ್ವಾಮಿಗಳು ವೈಜನಾಥ ಶಿವಲಿಂಗೇಶ್ವರ ಮಹಾಸ್ವಾಮಿಗಳು ಚನ್ನವೀರ ಮಹಾಸ್ವಾಮಿಗಳು ಬಸವ ಜಯ ಮೃತ್ಯುಂಜಯ ಮಹಾಸ್ವಾಮಿಗಳು ವಚನಾನಂದ ಮಹಾ ಸ್ವಾಮಿಗಳು ಮಳೆ ಮಲ್ಲಿಕಾರ್ಜುನ ಮಹಾಸ್ವಾಮಿಗಳು ಮಾತನಾಡಿದರು.

            ಕಾರ್ಯಕ್ರಮವನ್ನು ಉದ್ಘಾಟಿಸಿದ ಮಾಜಿ ಸಚಿವರು ಹಾಗೂ ಶಾಸಕರಾದ ಸಿಸಿ ಪಾಟೀಲ್ ಅವರು ಮಾತನಾಡಿ ಪಂಚಮಸಾಲಿ ಸಮಾಜವು ಕೃಷಿಯನ್ನೇ ನಂಬಿರುವ ಸಮಾಜ ವಾಗಿದ್ದು ಕೃಷಿಯ ಜೊತೆಗೆ ಎಲ್ಲಾ ಸಮಾಜ ಬಾಂಧವರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ಕೊಡಿಸುವ ಮೂಲಕ ವಿವಿಧ ರಂಗದಲ್ಲಿ ಉತ್ತಮ ಬದುಕನ್ನು ಕಟ್ಟಿಕೊಳ್ಳಬೇಕು ಎಂದರು.

             ಶಾಸಕ ಡಾ ಚಂದ್ರು ಲಮಾಣಿ ವಿಧಾನ ಪರಿಷತ್ ಸದಸ್ಯರಾದ ಎಸ್ ವಿ ಸಂಕನೂರ ಮಾಜಿ ಶಾಸಕರಾದ ಗಂಗಣ್ಣ ಮಹಾಂತಶೆಟ್ಟರ ಆನಂದ ಸ್ವಾಮಿ ಗಡ್ಡದೇವರಮಠ ಚನ್ನಪ್ಪ ಜಗಲಿ ಸೇರಿದಂತೆ ಅನೇಕ ಮುಖಂಡರು ಮಾತನಾಡಿದರು.

                ಕಾರ್ಯಕ್ರಮದ ಅಧ್ಯಕ್ಷತೆಯನ್ನು ವೀರಶೈವ ಲಿಂಗಾಯತ ಪಂಚಮಸಾಲಿ ಲಕ್ಷ್ಮೇಶ್ವರ ತಾಲೂಕು ಅಧ್ಯಕ್ಷರಾದ ಶಂಕರ್ ರಾಗಿ ವಹಿಸಿದ್ದರು ಶಿರಹಟ್ಟಿ ತಾಲೂಕು ಅಧ್ಯಕ್ಷರಾದ ಬಸವರಾಜ ತುಳಿ ಮಾಜಿ ಶಾಸಕರಾದ ರಾಮಣ್ಣ ಲಮಾಣಿ ರಾಮಕೃಷ್ಣ ದೊಡ್ಡಮನಿ ಸುಜಾತ ದೊಡ್ಡಮನಿ ಚಂಬಣ್ಣ ಬಾಳಿಕಾಯಿ ಸಣ್ಣವೀರ​‍್ಪ ಹಳ್ಳೆಪ್ಪನವರ ಲೋಹಿತ್ ನೆಲವಿಗಿ ಸೋಮಣ್ಣ ಡಾಣಗಲ್ಲ ಶಿವಾನಂದ ದೇಸಾಯಿ ಪ್ರವೀಣ ಬಾಳಿಕಾಯಿ ಎಸ್ ಪಿ ಬಳಿಗಾರ ಮಹಿಳಾ ಘಟಕದ ಅಧ್ಯಕ್ಷರು ಸದಸ್ಯರು ಸೇರಿದಂತೆ ಎಲ್ಲಾ ಸಮಾಜದ ಗುರು ಹಿರಿಯರು ಮುಖಂಡರು ಮಹಿಳೆಯರು ಪಾಲ್ಗೊಂಡಿದ್ದರು. 


ಸುದ್ದಿ ಓದಿ