ಜೆ.ಎಸ್.ಎಸ್ ಸಿ.ಬಿ.ಎಸ್.ಸಿ ಶಿಕ್ಷಕಿ ಹಾಗೂ ವಿದ್ಯಾರ್ಥಿಯ ಸಾಧನೆ
ಲೋಕದರ್ಶನ ವರದಿ
ಧಾರವಾಡ 23 : ಆರ್. ಎನ್. ಶೆಟ್ಟಿ ಕ್ರೀಡಾಂಗಣದಲ್ಲಿ ನಡೆದ 45ನೇ ರಾಜ್ಯ ಮಟ್ಟದ ಮಾಸ್ಟರ್ಸ್ ಅಥ್ಲೆಟಿಕ್ ಚಾಂಪಿಯನ್‌ಶಿಪ್ 2026ರ ಜಾವೆಲಿನ್ ಥ್ರೋ (ಭರ್ಜಿ ಎಸೆತ) ಸ್ಪರ್ಧೆಯಲ್ಲಿ, ಹುಬ್ಬಳ್ಳಿಯ ಉಣಕಲ್ ನ ಜೆ.ಎಸ್.ಎಸ್ ಮಂಜುನಾಥೇಶ್ವರ ಸಿ.ಬಿಎಸ್.ಇ ಶಾಲೆಯ ಶಿಕ್ಷಕಿಯಾದ ಸವಿತಾ ಸೊಬಗಿನ್ ಅವರು ತೃತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ.
ಈ ಸಾಧನೆಯೊಂದಿಗೆ, ಅವರು ಮುಂಬರುವ ದಿನಗಳಲ್ಲಿ ಲಕ್ನೋದಲ್ಲಿ ನಡೆಯಲಿರುವ ರಾಷ್ಟ್ರ ಮಟ್ಟದ ಚಾಂಪಿಯನ್ ಶಿಪ್‌ನಲ್ಲಿ ನಮ್ಮ ಕರ್ನಾಟಕದಿಂದ ಪ್ರತಿನಿಧಿಸಲಿದ್ದಾರೆ. 8ನೇ ತರಗತಿಯ ವಿದ್ಯಾರ್ಥಿನಿ ಕು. ಶ್ರೀಯಾ ಅಮೀನ್ ಅವರು, ಹುಬ್ಬಳ್ಳಿಯ ಚೇತನ್ ಪಬ್ಲಿಕ್ ಶಾಲೆಯ ವತಿಯಿಂದ ಆಯೋಜಿಸಲಾಗಿದ್ದ ಚೇತನ್ ಚೆಸ್ ಚಾಂಪಿಯನ್ ಶಿಪ್ 2026' (14 ವರ್ಷದೊಳಗಿನವರ ವಿಭಾಗ) ಮುಕ್ತ ಚೆಸ್ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನವನ್ನು ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ.
ಸಾಧನೆಗೈದ ಇವರನ್ನು ಜೆ.ಎಸ್.ಎಸ್ ಕಾರ್ಯದರ್ಶಿಗಳಾದ ಡಾ. ಅಜಿತ ಪ್ರಸಾದರವರು ಅಭಿನಂದಿಸಿದರು. ಈ ಸಂದರ್ಭದಲ್ಲಿ ಆಡಳಿತಾಧಿಕಾರಿ ಅರಿಹಂತ ಪ್ರಸಾದ, ಪ್ರಾಚಾರ್ಯೆ ಪ್ರೇರಣಾ ಪಾತ್ರ, ಮಹಾವೀರ ಉಪಾದ್ಯೆ ಉಪಸ್ಥಿತರಿದ್ದರು.