ಅರಳಿಹಳ್ಳಿ ತಾಂಡದಲ್ಲಿ ನಡೆದ ಪ್ರತಿಭಾ ಕಾರಂಜಿ, ಕಲೋತ್ಸವ
ಲೋಕದರ್ಶನ ವರದಿ
ಕಂಪ್ಲಿ 23: ತಾಲೂಕಿನ ಸಣಾಪುರ ಗ್ರಾಪಂಯ ಅರಳಿಹಳ್ಳಿ ತಾಂಡದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಸ್ ಎನ್ ಪೇಟೆ ಸಮೂಹ ಸಂಪನ್ಮೂಲ ಕೇಂದ್ರದಿಂದ ಆಯೋಜಿಸಿದ್ದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಕಾರ್ಯಕ್ರಮ ಸೋಮವಾರ ನಡೆಯಿತು. ಕನ್ನಡ ಹಿತರಕ್ಷಕ ಸಂಘದ ಗೌರವಾಧ್ಯಕ್ಷ ಕೆ.ಎಂ.ಹೇಮಯ್ಯಸ್ವಾಮಿ ಉದ್ಘಾಟಿಸಿ ಮಾತನಾಡಿ, ಮಕ್ಕಳಲ್ಲಿ ಕಲೆ, ವಿಚಾರ, ಭಾವನೆ ಇರುತ್ತದೆ.
ಅಕ್ಷರ ಜೊತೆಗೆ ಕಲಾತ್ಮಕ ಕಲೆಗಳು ಅನಾವರಣಗೊಳ್ಳುತ್ತಿದೆ. ಪ್ರತಿಭೆಯ ಜ್ಞಾನವನ್ನು ಅನಾವರಣಗೊಳಿಸಲು ಸಜ್ಜಾಗಿದ್ದಾರೆ ಎಂದರು. ಸಿಆರ್‌ಪಿ ರೇಣುಕಾರಾಧ್ಯ ಪ್ರಾಸ್ತಾವಿಕವಾಗಿ ಮಾತನಾಡಿ, 23 ವರ್ಷಗಳ ಸುಧೀರ್ಘವಾಗಿ ನಡೆಯುತ್ತಿರುವ ಪ್ರತಿಭಾ ಕಾರಂಜಿ ಕಾರ್ಯಕ್ರಮವಾಗಿದೆ. ಕ್ಲಸ್ಡರ್ ನ ್ರ್ರಥಮ ಬಾರಿಗೆ ಗ್ರಾಮೀಣ ಭಾಗದ ಅರಳಿಹಳ್ಳಿ ತಾಂಡದಲ್ಲಿ ಆಯೋಜಿಸಲಾಗಿದೆ.
ಅಂಕಕ್ಕೆ ಸೀಮಿತವಾಗದೇ, ಕೌಶಲಗಳನ್ನು ಒಳಗೊಂಡಾಗ ಮಾತ್ರ ಮಕ್ಕಳ ಭವಿಷ್ಯ ಉಲ್ವಲವಾಗಿರುತ್ತದೆ. ಸಾಧನೆಗೆ ಬೆಲೆ ಸಿಕ್ಕೇ ಸಿಗುತ್ತದೆ ಎಂದರು. ಶಾಲೆಯ ಮುಖ್ಯಗುರು ಹನುಮನಗೌಡ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದರು. ನಂತರ ವಿವಿಧ ಛದ್ಮವೇಷದಲ್ಲಿ ಮಕ್ಕಳು ನೋಡುಗರ ಗಮನ ಸೆಳೆದರು. 43 ವೈಯಕ್ತಿಕ, 3 ಸಾಮೂಹಿಕ ಸ್ಪರ್ಧೆಗಳು ಜರುಗಿದವು.
ಈ ಸಂದರ್ಭದಲ್ಲಿ ಎಸ್ಡಿಂಎಸಿ ಉಪಾಧ್ಯಕ್ಷ ಬಸವರಾಜ, ಎನ್‌ಪಿಎಸ್ ರಾಜ್ಯಾಧ್ಯಕ್ಷ ನಾಗನಗೌಡ ಎಂ.ಎ, ಉಪ ಪ್ರಾಚಾರ್ಯೆ ಸುಜಾತ, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಹೆಚ್.ದೊಡ್ಡಬಸಪ್ಪ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಹನುಮಂತಪ್ಪ, ಪ್ರಧಾನ ಕಾರ್ಯದರ್ಶಿ ಜಡೆಪ್ಪ, ಸರ್ಕಾರಿ ಅಂಗವಿಕಲರ ನೌಕರರ ಸಂಘದ ತಾಲೂಕು ಅಧ್ಯಕ್ಷ ರುದ್ರ್ಪ ನಾಯಕ್,
ಖಾಸಗಿ ಶಾಲೆಗಳ ಸಂಘದ ಅಧ್ಯಕ್ಷ ಯುಗಾದಿ ಶಿವರಾಜ, ಇಸಿಒಗಳಾದ ಟಿ.ಎಂ.ಬಸವರಾಜ, ಎಂ.ರೇವಣ್ಣ, ಸಿಆರ್‌ಪಿಗಳಾದ ಎ.ಗಂಗಾಧರ, ಎ.ಎಸ್.ಭೂಮೇಶ್ವರ, ಪ್ರಭಾಕರ, ಕರುಣಾಕರ, ರಮೇಶ, ಬಡ್ತಿ ಮುಖ್ಯಗುರು ಬಾಗಲಿ ಖಲೀಲ್ ಸಾಬ್, ಶಿಕ್ಷಕರಾದ ಚಂದ್ರಶೇಖರ, ಚಂದ್ರಯ್ಯ ಜಿ.ಎಸ್ ಸೊಪ್ಪಿನಮಠ ಸೇರಿದಂತೆ 31 ಶಾಲೆಯ ಮಕ್ಕಳು ಭಾಗವಹಿಸಿದ್ದರು.