ಕಂಪ್ಲಿ

ಕವಿತೆ ಕಟ್ಟುವ ಮೊದಲು ಕವಿತೆ ಅಧ್ಯಯನ ಮಾಡಿ

ಕವಿತೆ ಕಟ್ಟುವ ಮೊದಲು ಕವಿತೆ ಅಧ್ಯಯನ ಮಾಡಿ



          ಕಂಪ್ಲಿ 22: ತಾಲೂಕಿನ ಎಮ್ಮಿಗನೂರಿನ ಸರ್ಕಾರಿ ಬಾಲಕರ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯದಲ್ಲಿ ಡಾ.ಅಬ್ದುಲ್ ಕಲಾಂ ಎಸ್‌.ಪಿ.ಚಾರಿಟಬಲ್ ಫೌಂಡೇಷನ್ ಶನಿವಾರ ಹಮ್ಮಿಕೊಂಡಿದ್ದ 71ನೇ ರಾಜ್ಯೋತ್ಸವ ನಿಮಿತ್ತ ಮಕ್ಕಳ ಕವಿತಾ ವಾಚನ ಕಾರ್ಯಕ್ರಮ ನಡೆಯಿತು. ಎಚ್‌.ವೀರಾಪುರದ ಜ್ಞಾನಜ್ಯೋತಿ ಶಿವಲಿಂಗಮಂದಿರದ ಪೀಠಾಧಿಪತಿ ಜಡೇಶತಾತ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಮಕ್ಕಳಿಗೆ ಶಿಕ್ಷಣದೊಂದಿಗೆ ಸಂಸ್ಕಾರ ನೀಡುವಂತಾಗಬೇಕಿದೆ.

          ಕನ್ನಡ ಶಾಲೆಗಳ ಕುರಿತು ಜಾಗೃತಿ ಅಗತ್ಯವಿದೆ. ಮನೇಲಿ ದೇವರ ಜಗುಲಿಗೆ ಜಾಗ ಮೀಸಲಿರಿಸುವಂತೆ ಮನೆಗಳಲ್ಲಿ ಪುಸ್ತಕಗಳನ್ನು ಇಡಲು ಜಾಗ ಮೀಸಲಿಡಬೇಕು. ಕನ್ನಡ ಶಾಲೆಗಳನ್ನು ಉಪೇಕ್ಷಿಸಬಾರದು ಎಂದರು. ಮಕ್ಕಳ ಕವಿತಾ ವಾಚನ ಗೋಷ್ಠಿಯ ಅಧ್ಯಕ್ಷತೆವಹಿಸಿದ್ದ ಲೇಖಕ ಬಂಗಿ ದೊಡ್ಡ ಮಂಜುನಾಥ ಮಾತನಾಡಿ, ಯಾವುದೇ ಮಾಧ್ಯಮದಲ್ಲಿ ಓದಿದರೂ ಕನ್ನಡ ಭಾಷೆಯನ್ನು ನಿತ್ಯ ಸಂವಹನದಲ್ಲಿ ಬಳಸಿಕೊಳ್ಳಬೇಕು.

               ಕವಿತೆ ಕಟ್ಟುವ ಮೊದಲು ಕವಿತೆಗಳ ಅಧ್ಯಯನ ಅಗತ್ಯ ಎಂದರು. 59ಮಕ್ಕಳು ನಾಡಿನ ಖ್ಯಾತ ಕವಿಗಳ ಕವಿತೆ, ಸ್ವರಚಿತ ಕವಿತೆಗಳನ್ನು ವಾಚಿಸಿದರು.  ಫೌಂಡೇಷನ್ ಅಧ್ಯಕ್ಷ ಬಿ.ಸಬೀನಾ ಪೀರಾವಲಿ, ನಿಲಯ ಪಾಲಕ ಕೆ.ವಿರುಪಾಕ್ಷಪ್ಪ, ಪಶು ವೈದ್ಯಾಧಿಕಾರಿ ಡಾ.ದೇವೇಂದ್ರ​‍್ಪ, ಸ್ವಸಹಾಯ ಸಂಘದ ಅಧ್ಯಕ್ಷೆ ರೇಣುಕಾ, ಎಸ್‌ಡಿಎಂಸಿ ಅಧ್ಯಕ್ಷ ರಮೇಶ, ಪ್ರಮುಖರಾದ ಮಾರೆಮ್ಮ, ವಿನಯ, ಸಾದಕಲಿಸಾಬ್, ಭೀಮೇಶ್, ಎಸ್‌.ರಾಮು, ಗಾದಿಲಿಂಗ ಇತರರಿದ್ದರು. 


ಸುದ್ದಿ ಓದಿ