ಶಿಕ್ಷಕರು ಮಕ್ಕಳ ಸಾಮರ್ಥ್ಯಕ್ಕೆ ಪೂರಕವಾದ ವಾತಾವರಣ ಕಲ್ಪಿಸಿ : ದೊಡ್ಡಬಸಪ್ಪ
ಲೋಕದರ್ಶನ ವರದಿ
ಕಂಪ್ಲಿ 20 : ತಾಲೂಕಿನ ಮೆಟ್ರಿ ಗ್ರಾಮ ಪಿಎಂ ಸರ್ಕಾರಿ ಹಿರಿಯ ಮತ್ತು ಪ್ರೌಢಶಾಲೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಮೆಟ್ರಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಕಾರ್ಯಕ್ರಮ ನಡೆಯಿತು. ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಹೆಚ್.ದೊಡ್ಡ ಬಸಪ್ಪ ಉದ್ಘಾಟಿಸಿ ಮಾತನಾಡಿ,
ಪಾಲಕರು ಹಾಗೂ ಶಿಕ್ಷಕರು ಮಕ್ಕಳ ಸಾಮರ್ಥ್ಯಕ್ಕೆ ಪೂರಕವಾದ ವಾತಾವರಣ ಕಲ್ಪಿಸಿದರೆ ಅವರು ಉತ್ತಮ ಪ್ರಜೆಯಾಗುತ್ತಾರೆ ಎಂದರು. ಮಕ್ಕಳು ಮುಕ್ತವಾಗಿ ಭಾಗವಹಿಸಿ, ಪ್ರತಿಭೆ ತೋರಿ್ಡಸಿ. ಸರ್ಕಾದದ ಸೌಲಭ್ಯಗಳನ್ನು ಪಡೆದು ಶಿಕ್ಷಣದೊಂದಿಗೆ ಉತ್ತಮ ಪ್ರಜೆಗಳಾಗಬೇಕು. ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳು ಕ್ರಿಯಾತ್ಮಕ, ಮತ್ತು ಚುರುಕಾಗಿರುತ್ತಾರೆ ಎಂದರು.
ಸಿಆರ್‌ಪಿ ಪ್ರಭಾಕರ ಪ್ರಾಸ್ತಾವಿಕವಾಗಿ ಮಾತನಾಡಿ, ಮಕ್ಕಳ ಭವಿಷ್ಯ ಉತ್ತಮವಾಗಿ ರೂಪಿಸುವ ನಿಟ್ಟಿನಲ್ಲಿ ಪಾಲಕರು ತಮ್ಮ ಹಳೆಯ ಮೌಲ್ಯಗಳೊಂದಿಗೆ ಆಧುನಿಕ ಸಂದರ್ಭಕ್ಕೆ ತಕ್ಕಂತೆ ಮೌಲ್ಯಗಳನ್ನು ಬದಲಿಸಿಕೊಳ್ಳಬೇಕು. ಬರೀ ಮೊಬೈಲ್, ಇಂಟರ್‌ನೆಟ್ ಅಂತಹ ಜ್ಞಾನದೊಂದಿಗೆ ಮುಕ್ತ ಸಮಾಜದ ಅನುಭವ ಸಹ ಅವರಿಗೆ ಕೊಡಬೇಕು ಎಂದರು.
ಎಸ್ಡಿಎಂಸಿ ಅಧ್ಯಕ್ಷ ಹೆಚ್.ನಾಗರಾಜ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿ, ಮಕ್ಕಳಿಗೆ ಚಿಕ್ಕಂದಿನಿಂದಲೇ ಶಿಕ್ಷಣದ ಮೌಲ್ಯಗಳ ತಿಳಿವಳಿಕೆ ನೀಡಬೇಕು. ಮತ್ರು ಶಿಕ್ಷಕರು ಮಕ್ಕಳಿಗೆ ಒಳ್ಳೆಯ ಶಿಕ್ಷಣ ನೀಡುವ ಜೊತೆಗೆ ಅವರ ಪ್ರತಿಭೆಗಳನ್ನು ಹೊರ ತರಬೇಕು ಎಂದರು. ಛದ್ಮವೇಷ, ನಾಟಕ, ನೃತ್ಯ ಸೇರಿದಂತೆ ವಿವಿಧ ಸ್ಪರ್ಧೆಗಳು ನಡೆದವು.
ಈ ಸಂದರ್ಭದಲ್ಲಿ ಸರ್ಕಾರಿ ನೌಕರರ ಸಂಘದ ರಾಜ್ಯ ಪ್ರಚಾರ ಸಮಿತಿ ಸದಸ್ಯ ಎಚ್.ಪಿ.ಸೋಮಶೇಖರ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಹನುಮಂತಪ್ಪ, ಜಿಪಿಟಿ ಅಧ್ಯಕ್ಷ ಮಂಜುನಾಥ, ಉಪ ಪ್ರಾಚಾರ್ಯೆ ಸುಜಾತ, ಇಸಿಒ ಎಂ.ರೇವಣ್ಣ, ಸಿಆರ್‌ಪಿಗಳಾದ ಎ.ಗಂಗಾಧರ, ಎ.ಎಸ್.ಭೂಮೇಶ್ವರ,
ಕರುಣಾಕರ, ರೇಣುಕಾರಾಧ್ಯ, ಪ್ರಭಾರಿ ಮುಖ್ಯಗುರು ರೇಖಾ, ಸಹ ಶಿಕ್ಷಕ ಮಡಿವಾಳಪ್ಪ, ಅನುಸೂಯ, ಕಾವ್ಯ, ಶಿಲ್ಪ, ರಾಜೇಶ್ವರಿ, ಅತಿಥಿ ಶಿಕ್ಷಕರಾದ ಡಿ.ಬಸವರಾಜ, ಕವಿತಾ, ಶಂಕ್ರಮ್ಮ, ಎಂ,ಕವಿತಾ, ಸಂಗೀತ, ಸಿದೇಶ್ವರಿ, ನಶ್ರೀನ್, ಮುಖಂಡರಾದ ಹೆಚ್.ಕುಮಾರಸ್ವಾಮಿ, ಶಂಕರ್, ಹರಿಜನ ಜಗದೀಶ, ಮಲ್ಲಯ್ಯ ಸೇರಿದಂತೆ ಮುಖ್ಯಗುರುಗಳು, ಶಿಕ್ಷಕರು, ಪೋಷಕರು, ಮಕ್ಕಳು ಪಾಲ್ಗೊಂಡಿದ್ದರು.