ಕಂಪ್ಲಿ

ಕಂಪ್ಲಿಯ ಎಚ್‌.ಗಿರಿಧರ್‌ಗೆ ಕರುನಾಡು ಕನ್ನಡ ಕಣ್ಮಣಿ ರಾಜ್ಯ ಪ್ರಶಸ್ತಿ ಪ್ರದಾನ

ಕಂಪ್ಲಿಯ ಎಚ್‌.ಗಿರಿಧರ್‌ಗೆ ಕರುನಾಡು ಕನ್ನಡ ಕಣ್ಮಣಿ ರಾಜ್ಯ ಪ್ರಶಸ್ತಿ ಪ್ರದಾನ

ಲೋಕದರ್ಶನ ವರದಿ 


ಕಂಪ್ಲಿ 17: ಇತ್ತೀಚೆಗೆ ದಾವಣಗೆರೆಯ ವಿರೂಪಾಕ್ಷಪ್ಪ ಕಲ್ಯಾಣ ಮಂಟಪದಲ್ಲಿ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯಿಂದ 71ನೇ ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ಆಯೋಜಿಸಿದ್ದ ಕರುನಾಡು ಕನ್ನಡ ಕಣ್ಮಣಿ ರಾಜ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕಂಪ್ಲಿ ನಗರದ ಗೃಹ ರಕ್ಷಕದಳದ ಸೇವೆ ಜೊತೆಗೆ ಸಮಾಜಮುಖಿ ಸಾಧನೆಗಳನ್ನು ಗುರುತಿಸಿ ಘಟಕಾಧಿಕಾರಿ ಎಚ್‌.ಗಿರಿಧರ್ ಅವರಿಗೆ  ಕರುನಾಡು ಕನ್ನಡ ಕಣ್ಮಣಿ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.   

ನಂತರ ಪ್ರಶಸ್ತಿ ಸ್ವೀಕರಿಸಿ ಎಚ್‌.ಗಿರಿಧರ್ ಮಾತನಾಡಿ, ಹಲವು ವರ್ಷಗಳಿಂದ ನಿರಂತರವಾಗಿ ಗೃಹ ರಕ್ಷಕದಳದ ಸೇವೆ ಜೊತೆಗೆ ಸಮಾಜಮುಖಿ ಕಾರ್ಯಗಳನ್ನು ಮೈಗೂಡಿಸಿಕೊಂಡು ಬರಲಾಗಿದೆ. ನಮ್ಮ ಸೇವೆ ಎಲೆಮರೆ ಕಾಯಿಯಂತೆ ಇದೆ. ಆದರೆ, ಈಗ ಈ ಎಲೆಮರೆ ಸಾಧನೆಯನ್ನು ಗುರುತಿಸಿ, ನಮಗೆ ಕರುನಾಡು ಕನ್ನಡ ಕಣ್ಮಣಿ ರಾಜ್ಯ ಪ್ರಶಸ್ತಿ ನೀಡಿರುವುದು ಮತ್ತಷ್ಟು ಸೇವೆಗೆ ಪುಷ್ಠಿ ನೀಡಿದೆ. ಇಂತಹ ಪ್ರಶಸ್ತಿಗಳು ಯುವ ಸೇವಾ ಸಾಧಕರಿಗೂ ದೊರೆಯುವ ಮೂಲಕ ಸಮಾಜಮುಖಿ ಕಾರ್ಯಗಳಿಗೆ ಅನುವು ಮಾಡಿಕೊಡಬೇಕೆಂದು ತಿಳಿಸಿದರು.

ಈ ಸಂದರ್ಭದಲ್ಲಿ ಮಂಗಳೂರಿನ ಅನಂತ ಪ್ರಕಾಶದ ಪ್ರಧಾನ ಸಂಪಾದಕ ಕೊಡೆತ್ತೂರು ಸಚ್ಚಿದಾನಂದ ಉಡುಪ, ಕಲಾಕುಂಚ ಸಾಂಸ್ಕೃತಿಕ ಸಂಸ್ಥೆ ಅಧ್ಯಕ್ಷ ವಾಸುದೇವ ರಾಯ್ಕರ್,  ಭರಮಸಾಗರದ ಪತ್ರಕರ್ತ ಬಿ. ಜೆ.ಅನಂತ ಪದ್ಮನಾಭರಾವ್, ಕಲಾಕುಂಚ ಸಂಸ್ಥೆ ಸಂಸ್ಥಾಪಕ ಸಾಲಿಗ್ರಾಮ ಗಣೇಶ್ ಶೆಣೈ, ಗೌರವಾಧ್ಯಕ್ಷ ಕೆ.ಎಚ್‌. ಮಂಜುನಾಥ, ಮಹಿಳಾ ವಿಭಾಗದ ಸಂಸ್ಥಾಪಕರಾದ ಜ್ಯೋತಿ ಗಣೇಶ ಶೆಣೈ, ಕಲಾಕುಂಚ ಮಹಿಳಾ ವಿಭಾಗದ ಅಧ್ಯಕ್ಷೆ ಹೇಮಾ ಶಾಂತಪ್ಪ ಪೂಜಾರಿ, ಪ್ರಧಾನ ಕಾರ್ಯದರ್ಶಿ ಕೆ.ಸಿ. ಉಮೇಶ್, ವಸಂತಿ ಮಂಜುನಾಥ, ಶಿಲ್ಪಾ ಉಮೇಶ, ಚನ್ನಬಸವ ಶೀಲವಂತ್, ಪುಷ್ಪಾ ಮಂಜುನಾಥ, ಅಡಿಗ, ವೀರೇಶ, ಗುರುಪಾದಪ್ಪ, ಮುಕ್ತಾ ಶ್ರೀನಿವಾಸ, ಭಾಗ್ಯ ಪಿಸಾಳೆ, ರಾಜೇಶ್ವರಿ, ಸುಮ, ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. . 


ಸುದ್ದಿ ಓದಿ