ನವ ವಸಂತಕ್ಕೆ ಕಾಲಿಟ್ಟ 21 ಜೋಡಿಗಳು
ಲೋಕದರ್ಶನ ವರದಿ
ಕಂಪ್ಲಿ 22: ತಾಲೂಕಿನ ರಾಮಸಾಗರ ಗ್ರಾಮದ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಡಿ.ಜಿ.ಸಾಗರ ಬಣ) ಯ ತಾಲೂಕು ಸಂಚಾಲಕ ಮತ್ತು ಗ್ರಾಪಂ ಮಾಜಿ ಉಪಾಧ್ಯಕ್ಷ ಆರ್.ಎಂ.ರಾಮಯ್ಯ ನೇತೃತ್ವದಲ್ಲಿ ಗೌರಿ ಹಬ್ಬದ ಪ್ರಯುಕ್ತ ಭಾನುವಾರ ಆಯೋಜಿಸಿದ್ದ ಸತತ 13ನೇ ಬಾರಿಯ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ 21 ಜೋಡಿಗಳು ನವ ವಸಂತಕ್ಕೆ ಕಲಿಟ್ಟರು. ನಂತರ ಶಾಸಕ ಜೆ.ಎನ್.ಗಣೇಶ ಉದ್ಘಾಟಿಸಿ ಮಾತನಾಡಿ,
ಬಡವರ ಹಾಗೂ ಹಿಂದುಳಿದವರ ಹಿತಕ್ಕಾಗಿ ಆರ್.ಎಂ.ರಾಮಯ್ಯ ಸತತ 13 ವರ್ಷಗಳಿಂದ ಸಾಮೂಹಿಕ ವಿವಾಹಗಳನ್ನು ಮಾಡುವ ಮೂಲಕ ಸಮಾಜಮುಖಿ ಕಾರ್ಯಗಳೊಂದಿಗೆ ಸೈ ಎನ್ನಿಸಿಕೊಂಡಿದ್ದಾರೆ. ಆದ್ದರಿಂದ ರಾಮಯ್ಯಗೆ ಇನ್ನಷ್ಟು ಶಕ್ತಿ ನೀಡಿ, ಮತ್ತಷ್ಟು ಸೇವೆಗೆ ಮುಂದಾಗಲಿ. ಪಕ್ಷಕ್ಕಾಗಿ ದುಡಿದ ಸಮಾಜದವರಿಗೆ ಒಳ್ಳೆಯ ಸ್ಥಾನಮಾನ ನೀಡಿ, ಬರುವ ಜಿಪಂಯಲ್ಲಿ ಗೆಲ್ಲಿಸಿಕೊಂಡು ಬರಲಾಗುವುದು. ನವ ದಂಪತಿಗಳು ತಂದೆ, ತಾಯಿ, ಅತ್ತೆ, ಮಾನನನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಸಂಸಾರವನ್ನು ಸುಖದ ಸಂಸಾರವನ್ನಾಗಿ ನೋಡಿಕೊಳ್ಳಬೇಕು ಎಂದರು. ಜಿಪಂ ಮಾಜಿ ಸದಸ್ಯ ಹಾಗೂ ಕೆಆರ್‌ಡಿಎಸ್‌ಎಸ್ ರಾಜ್ಯ ಸಂಘಟನಾ ಸಂಚಾಲಕ ಎ.ಮಾನಯ್ಯ ಮಾತನಾಡಿ, ಸತತ ಹದಿಮೂರು ವರ್ಷ ಉಚಿತ ಸಾಮೂಹಿಕ ವಿವಾಹದೊಂದಿಗೆ ಜಿಲ್ಲೆಯಲ್ಲಿ ಒಳ್ಳೆಯ ಹೆಸರನ್ನು ಆರ್.ರಾಮಯ್ಯ ಪಡೆದು, ರಾಮಸಾಗರ ಕೀರ್ತಿ ಹೆಚ್ಚಿಸಿದ್ದಾರೆ. ನೂತನ ದಾಂಪತ್ಯಕ್ಕೆ ಅಣಿಯಾದ ವಧು ವರರು ಒಳ್ಳೆಯ ಜೀವನ ನಡೆಸಬೇಕು ಎಂದರು.
ಗ್ರಾಪಂ ಮಾಜಿ ಉಪಾಧ್ಯಕ್ಷ ಹಾಗೂ ಕೆಆರ್‌ಡಿಎಸ್‌ಎಸ್ ತಾಲೂಕು ಸಂಚಾಲಕ ಆರ್.ಎಂ.ರಾಮಯ್ಯ ಪ್ರಾಸ್ತಾವಿಕವಾಗಿ ಮಾತನಾಡಿ, ಪ್ರತಿಯೊಬ್ಬರ ಸಹಕಾರದಿಂದಾಗಿ ಸಾಮೂಹಿಕ ವಿವಾಹ ಮಾಡಲಾಗಿದೆ. ಇದರಿಂದ ಬಡವರ, ಮಧ್ಯಮ ವರ್ಗದವರಿಗೆ ಬಹಳಷ್ಟು ಅನುಕೂಲವಾಗಿದೆ ಎಂದರು. 21 ಜೋಡಿ ವಧು-ವರರು ನವ ವಸಂತಕ್ಕೆ ಕಾಲಿಟ್ಟರು.
ಈ ಸಂದರ್ಭದಲ್ಲಿ ಛಲುವಾದಿ ಮಹಾಸಭಾದ ರಾಜ್ಯಾಧ್ಯಕ್ಷ ನರಸಪ್ಪ, ಗುಲ್ಬರ್ಗಾ ವಿದ್ಯುತ್‌ಚ್ಛಕ್ತಿ ಸರಬರಾಜ ಕಂಪನಿ (ಜೆಸ್ಕಾಂ) ಯ ನಿರ್ದೇಶಕ ಕೆ.ಷಣ್ಮುಖಪ್ಪ, ಮುಖಂಡರಾದ ಹೆಚ್.ಶಿವಶಂಕರಗೌಡ, ಬಿ.ನಾರಾಯಣಪ್ಪ, ಶೇಖಣ್ಣ, ಜಿ.ರಾಮಣ್ಣ, ಹೊನ್ನಳ್ಳಿ ಗಂಗಾಧರ, ಸಿ.ಆರ್.ಹನುಮಂತ, ಸಿದ್ದಪ್ಪ, ಎ.ಸಿ.ದಾನಪ್ಪ, ಬಸವರಾಜ ಸೇರಿದಂತೆ ಅನೇಕರಿದ್ದರು. ನಂತರ ಅನ್ನ ಸಂತಾರೆ್ಣ ನಡೆಯಿತು.