ಎಸ್.ಎಸ್.ಎಲ್.ಸಿ. ಫಲಿತಾಶ ಸುಧಾರಣೆ-ಕಾರ್ಯಾಗಾರ
ಲೋಕದರ್ಶನ ವರದಿ
ಹಾವೇರಿ:ನ.25 : ಪ್ರತಿಯೊಬ್ಬ ಶಿಕ್ಷಕರೂ ಒಂದು ಕ್ರಿಯಾಯೋಜನೆ ತಯಾರಿಸಿಕೊಂಡು ಬೋಧನೆ ಮಾಡಬೇಕು. ಎಸ್ಎಸ್ಎಲ್ಸಿ ಪರೀಕ್ಷೆಯ ಫಲಿತಾಂಶ ಉತ್ತಮಪಡಿಸಲು ಇಲಾಖೆ ನೀಡಿರುವ ಎಲ್ಲಾ ಯೋಜನೆಗಳನ್ನು ತರಗತಿಯಲ್ಲಿ ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು ಎಂದು ಡಿಡಿಪಿಐ ಮೋಹನ ದಂಡಿನ ಸಲಹೆ ನೀಡಿದರು.
ನಗರದ ವೈಭವಲಕ್ಷ್ಮೀ ಪಾರ್ಕ್ಇಲ್ಲಿ ಎಸ್ಎಸ್ಎಲ್ಸಿ ಫಲಿತಾಂಶ ಸುಧಾರಣೆಗಾಗಿ ಹಮ್ಮಿಕೊಡಿದ್ದ ಮಿಷನ್ 60+ ಕಾರ್ಯಾಗಾರದಲ್ಲಿ ಮಾತನಾಡಿ, ಫಲಿತಾಂಶ ಸುಧಾರಣೆಗೆ ಪ್ರತಿಯೊಬ್ಬ ಶಿಕ್ಷಕರ ಕಠಿಣ ಪರಿಶ್ರಮ ಅವಶ್ಯವಾಗಿದೆ. ಮಕ್ಕಳು ಭವಿಷ್ಯ ಕಟ್ಟಿಕೊಳ್ಳಲು ಎಸ್ಎಸ್ಎಲ್ಸಿ ಒಂದು ಮೆಟ್ಟಿಲು. ಹಾಗಾಗಿ ಪ್ರತಿ ವಿದ್ಯಾರ್ಥಿಯೂ ಉತ್ತೀರ್ಣರಾಗುವಂತೆ ಎಲ್ಲಾ ಶಿಕ್ಷಕರು ಪ್ರಯತ್ನ ಮಾಡಬೇಕೆಂದು ಅಭಿಪ್ರಾಯಪಟ್ಟರು.
ಸಮಾಜ ವಿಜ್ಞಾನ ವಿಷಯ ಪರೀವೀಕ್ಷಕಿ ಕವಿತಾ ಮಠದ ಮಾತನಾಡಿ, ಶಾಲೆಯಲ್ಲಿ ಎಲ್ಬಿಎ, ಬೋರ್ಡ್ನ ಪ್ರಶ್ನೆಪತ್ರಿಕೆಗಳು, ಪೂರ್ವಸಿದ್ಧತಾ ಪರೀಕ್ಷೆಯ ತಯಾರಿ ಇವುಗಳನ್ನು ಉತ್ತಮವಾಗಿ ಬಳಸಿಕೊಂಡು ಮಕ್ಕಳನ್ನು ಪರೀಕ್ಷೆಗಾಗಿ ಉತ್ತಮವಾಗಿ ತಯಾರು ಮಾಡಬೇಕೆಂದು ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಮುಖ್ಯೋಪಾಧ್ಯಾಯ ಡಾ.ಬಿ.ಎಂ.ಬೇವಿನಮರದ ಮಾತನಾಡಿ, ಶಾಲೆಯ ಭೌತಿಕ ಪರಿಸರದೊಂದಿಗೆ ಶೈಕ್ಷಣಿಕ ವಾತಾವರಣವನ್ನು ಉತ್ತಮಪಡಿಸಿಕೊಳ್ಳುವಲ್ಲಿ ಪ್ರತಿಯೊಬ್ಬ ಶಿಕ್ಷಕರು ಪ್ರಯತ್ನಿಸಬೇಕು. ಉತ್ತಮ ಫಲಿತಾಂಶ ಬಂದರೆ ಜಿಲ್ಲೆಗೆ ಹೆಮ್ಮೆ. ಹಾಗಾಗಿ ಎಲ್ಲರೂ ಉತ್ತಮ ಪ್ರಯತ್ನದ ಮೂಲಕ ಮಕ್ಕಳ ಫಲಿತಾಂಶವನ್ನು ಉತ್ತಮಗೊಳಿಸೋಣ ಎಂದು ಮನವಿ ಮಾಡಿದರು.
ಎಪಿಸಿಓ ಜಮೀರ್ಅಬ್ಬಾಸ ಶಿರಳ್ಳಿ, ಉರ್ದು ಇಸಿಓ ಅಮೀರ್ಬಾಷಾ, ಇಸ್ಮಾಯಿಲ್ ಕಡೆಮನಿ, ಇಮ್ತಿಯಾಜ್ ಹಂಚಿನಮನಿ, ನಾಗರಾಜ ನಡುವಿನಮಠ, ಕರಬಸಪ್ಪ ಹಳೇಮನಿ, ಯೂನಸ್ ನದಾಫ್, ರಹಮಾನ್ಖಾನ್ ಉಪಸ್ಥಿತರಿದ್ದರು.