ಹಾವೇರಿವಸತಿ ನಿಲಯಕ್ಕೆ ಮೂಲಭೂತ ಸೌಕರ್ಯಗಳ ವಿತರಣೆ: ಎಸ್‌ಎಫ್‌ಐ ನೇತೃತ್ವದಲ್ಲಿ ಹಾಸ್ಟೆಲ್ ವಿದ್ಯಾರ್ಥಿನಿಯರು ಹೋರಾಟಕ್ಕೆ ಸಂದ ಜಯ
ಹಾವೇರಿ 24 : ತಾಲ್ಲೂಕಿನ ಕೆರಿಮತ್ತಿಹಳ್ಳಿ ಹಾವೇರಿ ವಿಶ್ವವಿದ್ಯಾಲಯದ ಕ್ಯಾಂಪಸ್ ನಲ್ಲಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿದ್ಯಾರ್ಥಿನಿಯರ ವಸತಿ ನಿಲಯಕ್ಕೆ ಇತ್ತಿಚೆಗೆ ಅಪರಿಚಿತ ವ್ಯಕ್ತಿಯೋರ್ವ ಅನುಚಿತ ವರ್ತನೆ ತೋರಿದ ಘಟನೆಯಿಂದ ಭಯಬೀತರಾದ ವಿದ್ಯಾರ್ಥಿನಿಯರು ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್‌ಎಫ್‌ಐ) ನೇತೃತ್ವದಲ್ಲಿ ಹಾಸ್ಟೆಲ್ ಎದುರು ಧರಣಿ ನಡೆಸಿ ಕಿಡಿಗೇಡಿ ಆರೋಪಿಯನ್ನು ಬಂಧನಕ್ಕಾಗಿ,
ಸೂಕ್ತ ರಕ್ಷಣೆಗಾಗಿ ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ಒತ್ತಡ ಹಾಕಲಾಗಿತ್ತು.ವಿದ್ಯಾರ್ಥಿನಿಯರು ಹೋರಾಟದ ಒತ್ತಡಕ್ಕೆ ಸ್ಥಳಕ್ಕೆ ಧವಿಸಿ ಪೋಲಿಸ್ ಇಲಾಖೆಯ ಅಧಿಕಾರಿಗಳು ಪರೀಶೀಲನೆ ನಡೆಸಿ ಎಫ್‌ಐಆರ್ ದಾಖಲಿಸಿದರು. ಬೀಟ್ ಪೋಲಿಸ್ ಸಿಬ್ಬಂದಿಗಳನ್ನು ನೇಮಕ ಮಾಡಲಾಗುತ್ತದೆ. ಸೂಕ್ತ ರಕ್ಷಣೆಯನ್ನು ಒದಗಿಸುತ್ತೇವೆ ಭರವಸೆ ನೀಡಿದರು. ಬಿಎಸಿಎಮ್ ಇಲಾಖೆಯ ಅಧಿಕಾರಿಗಳು ಮೂಲಭೂತ ಸೌಕರ್ಯಗಳನ್ನು ಒದಗಿಸುವದಾಗಿ ಭರವಸೆ ನೀಡಿದರು.
ಮೂಲಭೂತ ಸೌಕರ್ಯಗಳ ವಂಚನೆ ಕುರಿತು ಮಾಧ್ಯಮಗಳಲ್ಲಿ ವಿಶೇಷ ವರದಿಗಳು ಬಂದಿದ್ದು. ಎಚ್ಚೆತ್ತ ಅಧಿಕಾರಿಗಳು ವಸತಿ ನಿಲಯಕ್ಕೆ ಮೂಲಭೂತ ಸೌಲಭ್ಯಗಳನ್ನು ಒದಗಿಸಿದ್ದಾರೆ. ಮೆಟ್ರಿಕ್ ನಂತರ ಮಹಿಳಾ ವಸತಿ ನಿಲಯ ಕೆರೆಮತ್ತಿಹಳ್ಳಿ ಇಲ್ಲಿಗೆ ಮೂಲಭೂತ ಸೌಲಭ್ಯ ಒದಗಿಸಲು ವಿದ್ಯಾರ್ಥಿಗಳ ಬೇಡಿಕೆಯಂತೆ ಮೂಲಭೂತ ಸೌಲಭ್ಯಗಳನ್ನು ಒದಗಿಸಲಾಗಿರುತ್ತದೆ ಎಂದು ತಿಳಿಸಿದ್ದಾರೆ.