ನೂತನ ಸಮುದಾಯ ಭವನಗಳ ನಿರ್ಮಾಣ ಕಾಮಗಾರಿಗೆ ಚಾಲನೆ
ಲೋಕದರ್ಶನ ವರದಿ
ಯರಗಟ್ಟಿ 28: ತಾಲೂಕಿನ ಬೋಳಕಡಬಿ ಗ್ರಾಮದಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ 40 ಲಕ್ಷ ಅಂದಾಜು ವೆಚ್ಚದ ಬೀರ್ಪನ ದೇವಸ್ಥಾನದ ಬಳಿ ನೂತನ ಸಮುದಾಯ ಭವನ ನಿರ್ಮಾಣ ಕಾಮಗಾರಿ' ಶಾಸಕ ವಿಶ್ವಾಸ ವೈದ್ಯ ಭೂಮಿ ಪೂಜೆ ಸಲ್ಲಿಸಿದರು.
ಕಾರ್ಯಕ್ರಮ ಉದ್ದೇಸಿಶಿ ಶಾಸಕ ವಿಶ್ವಾಸ ವೈದ್ಯ ಮಾತನಾಡಿ ಗ್ರಾಮೀಣ ಭಾಗದ ಸಾರ್ವಜನಿಕರ ಸಾಮಾಜಿಕ, ಸಾಂಸ್ಕೃತಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳಿಗೆ ಸುಸಜ್ಜಿತ ಸಮುದಾಯ ಭವನಗಳ ಅವಶ್ಯಕತೆ ಬಹಳಷ್ಟಿತ್ತು.
ಗ್ರಾಮಸ್ಥರ ಬಹುದಿನಗಳ ಬೇಡಿಕೆಗೆ ಸ್ಪಂದಿಸಿ ಈ ಅನುದಾನವನ್ನು ಮಂಜೂರು ಮಾಡಲಾಗಿದ್ದು, ಈ ಭವನ ನಿರ್ಮಾಣದಿಂದ ಸ್ಥಳೀಯ ಜನರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದರು.
ಕಾಮಗಾರಿಗಳನ್ನು ಅತ್ಯುತ್ತಮ ಗುಣಮಟ್ಟದೊಂದಿಗೆ ನಿಗದಿತ ಕಾಲಮಿತಿಯೊಳಗೆ ಪೂರ್ಣಗೊಳಿಸುವಂತೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಗೆ ಸೂಚಿಸಿದರು.
ಯಲ್ಲಾಲಿಂಗೇಶ್ವರ ಸ್ವಾಮಿಗಳು, ಬೆಮುಲ್ ನಿರ್ದೇಶಕ ಶಂಕರ ಇಟ್ನಾಳ, ಎಪಿಎಂಸಿ ಅಧ್ಯಕ್ಷ ನೀಲಕಂಠ ಸಿದ್ದಬಸನ್ನವರ, ಮಾಜಿ ಗ್ರಾ. ಪಂ. ಅಧ್ಯಕ್ಷ ಲಕ್ಷ್ಮಣ ಕುಂಟಿರ್ಪಗೋಳ, ಗ್ರಾ. ಪಂ. ಅಧ್ಯಕ್ಷ ಪ್ರಕಾಶ ಸುಣಧೋಳಿ, ಚಾಯಪ್ಪ ಹುಂಡೇಕರ, ಲಕ್ಷ್ಮಣ ಹಟ್ಟಿ, ವಿಠ್ಠಪ್ಪ ಬಬ್ಬಣ್ಣವರ, ವಿಠ್ಠಲ ಚುಂಚನುರ, ಚಿದಾನಂದ ಮುಕ್ಕಣ್ಣವರ, ಹಣಮಂತ ಮಾಳಕ್ಕನವರ,
ಗಂಗಪ್ಪ ಮೀಶಿ, ನಿಂಗಪ್ಪ ಮಾಳಕ್ಕನವರ. ಸಿದ್ದಪ್ಪ ಮುಕ್ಕನ್ನವರ, ಭೀಮಶಿ ದಳವಾಯಿ, ಲಕ್ಷ್ಮಣ ಚಿಕ್ಕೊಡಿ, ಬಾಳಪ್ಪ ಬಾಗೋಡಿ, ಮಹಾದೇವ ರೆಬ್ಬನವರ, ತಿಪ್ಪನ್ಣ ಉದಗಟ್ಟಿ, ಮಹಾವೀರ ಹುಕ್ಕೇರಿ, ಲವಿತ ಮಾಲೈನವರ, ದೇಮಣ್ಣಾ ಹನಮೈನವರ ಸೇರಿದಂತೆ ದೇವಸ್ಥಾನ ಕಮಿಟಿಯ ಪದಾಧಿಕಾರಿಗಳು, ಗ್ರಾಮದ ಹಿರಿಯರು, ಸ್ಥಳೀಯ ಜನಪ್ರತಿನಿಧಿಗಳು, ಮುಖಂಡರು ಉಪಸ್ಥಿತರಿದ್ದರು.