ಗದಗ

ಅವಳಿ ನಗರದಲ್ಲಿ ಹೈಟೆಕ್ ತಂತ್ರಜ್ಞಾನದ ಸದ್ಭಳಕೆಯೊಂದಿಗೆ ಶುದ್ಧ ನೀರು ಪೂರೈಕೆ : ಎಮ್ ಸಿ ಶೇಖ್

ಅವಳಿ ನಗರದಲ್ಲಿ ಹೈಟೆಕ್ ತಂತ್ರಜ್ಞಾನದ ಸದ್ಭಳಕೆಯೊಂದಿಗೆ ಶುದ್ಧ ನೀರು ಪೂರೈಕೆ : ಎಮ್ ಸಿ ಶೇಖ್
Supply of clean water in the twin cities through the effective use of high-tech technology: M. C. Sh

ಗದಗ 29:   ಅವಳಿ ನಗರವಾದ ಗದಗ ಬೆಟಗೇರಿ ನಗರದಲ್ಲಿನ ನಾಗರಿಕರಿಗೆ ಶುದ್ಧ ಕುಡಿಯುವ ನೀರು ದೊರಕುವಂತಾಗಲು ಎಚ್ ಕೆ ಪಾಟೀಲ್ ಸೇವಾ ತಂಡವು ನಿರಂತರ ಅವಿರತ ಪರಿಶ್ರಮ ವಹಿಸುತ್ತಿರುವದು. ಆ ಪ್ರಯುಕ್ತ ಇಂದು ದಿನಾಂಕ 28/11/2026 ಶನಿವಾರ ದಂದು ಬೆಳಿಗ್ಗೆ 11:30 ಕ್ಕೆ ಎಚ್ ಕೆ ಪಾಟೀಲ್ ಸೇವಾ ತಂಡದ ಕಚೇರಿಯಲ್ಲಿ ಸನ್ಮಾನ್ಯ  ಅಧ್ಯಕ್ಷರಾದ ಪ್ರಭು ಎಲ್ ಬುರಬುರೆ ರವರ ಮಾರ್ಗದರ್ಶನದಲ್ಲಿ ಎಚ್ ಕೆ ಪಾಟೀಲ್ ಸೇವಾ ತಂಡದ ಉಪಾಧ್ಯಕ್ಷರು ಹಾಗೂ ಕೋಆರ್ಡಿನೆಟರರಾದ  ಎಮ್‌. ಸಿ ಶೇಖ್ ರವರ ನೇತೃತ್ವದಲ್ಲಿ ಶುದ್ಧ ನೀರಿನ ಘಟಕದ ಸಭೆ ಜರುಗಿತು. 

ಈ ಒಂದು ಮಹತ್ವಪೂರ್ಣ ಸಭೆಯಲ್ಲಿ ಗಂಗಿಮಡಿ, ಕಳಸಾಪೂರ, ಜೋಡ ಮಾರುತಿ, ಹಾಗೂ ಕಮತರ ಪ್ಲಾಟ್ ನ ಶುದ್ಧ ನೀರಿನ ಘಟಕಗಳ ನಿರ್ವಹಣೆ, ಹಾಗೂ ಸಮಸ್ತ ನಾಗರಿಕರಿಗೆ ಈ ಒಂದು ಘಟಕಗಳಿಂದ ನಿರಂತರ ಶುದ್ಧ ನೀರಿನ ಪೂರೈಸುವ ಕುರಿತು ಗಂಭೀರ ಚರ್ಚೆ ಮಾಡಿ ಆ ಕುರಿತು ಸೇವಾ ತಂಡದ ವತಿಯಿಂದ ಅಗತ್ಯ ಕ್ರಮ ಕೈಗೊಳ್ಳಲು ನಿರ್ಣಯ ಕೈಗೊಳ್ಳಲಾಯಿತು.ಈ ಸಂಧರ್ಭದಲ್ಲಿ ಸೇವಾ ತಂಡದ ಸ್ವಯಂ ಸೇವಕರಾದ ಶಿವಪ್ಪ ಬಳ್ಳಾರಿ, ಸಾಗರ ಬಳ್ಳಾರಿ, ನವೀನ ಜಾಲಿಹಾಳ, ದೇವೇಂದ್ರ ಕಳಸಾಪೂರ, ದಾದಾಪೀರ ಮುಂಡರಗಿ, ಎಚ್ ಕೆ ಪಾಟೀಲ್ ಸೇವಾ ತಂಡದ ವ್ಯವಸ್ಥಾಪಕರಾದ ರಾಘವೇಂದ್ರ ಪಾಲನಕರ, ಶುದ್ಧ ನೀರಿನ ಘಟಕದ ನಿರ್ವಾಹಕ ದಾವಲಸಾಬ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು. 


ಸುದ್ದಿ ಓದಿ