ಗದಗ

ಅಗಡಿ ಕಾಲೇಜಿನಲ್ಲಿ ’ನಶಾ ಮುಕ್ತ ಕ್ಯಾಂಪಸ್‌’ ಜಾಗೃತಿ ಅಭಿಯಾನ: ಮಾದಕ ವ್ಯಸನದಿಂದ ದೂರವಿರಲು ವಿದ್ಯಾರ್ಥಿಗಳಿಗೆ ಕರೆ

ಅಗಡಿ ಕಾಲೇಜಿನಲ್ಲಿ ’ನಶಾ ಮುಕ್ತ ಕ್ಯಾಂಪಸ್‌’ ಜಾಗೃತಿ ಅಭಿಯಾನ: ಮಾದಕ ವ್ಯಸನದಿಂದ ದೂರವಿರಲು ವಿದ್ಯಾರ್ಥಿಗಳಿಗೆ ಕರೆ
'Drug-Free Campus' Awareness Campaign at Agadi College: Students Urged to Stay Away from Substance

               ಲಕ್ಷ್ಮೇಶ್ವರ 28 : ಪಟ್ಟಣದ ಅಗಡಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಶನಿವಾರ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಹಾಗೂ ಅಗಡಿ ಪದವಿಪೂರ್ವ ಕಾಲೇಜ್ ಸಂಯೋಗದಲ್ಲಿ ನಶಾ ಮುಕ್ತ ಕ್ಯಾಂಪಸ್‌’ (ಮಾದಕ ವ್ಯಸನ ಮುಕ್ತ ಆವರಣ) ಅಭಿಯಾನದ ಅಂಗವಾಗಿ ವಿಶೇಷ ಜಾಗೃತಿ ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಯಾಗಿ ಆಯೋಜಿಸಲಾಗಿತ್ತು.

              ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಜಿಲ್ಲಾ ಸಂಚಾಲಕರಾದ ಅಭಿಷೇಕ ಉಮುಚಗಿ ಅವರು ಇಂದಿನ ಯುವಜನತೆ ದೇಶದ ಭವಿಷ್ಯ. ಆದರೆ, ಮಾದಕ ವಸ್ತುಗಳ ವ್ಯಸನವು ವಿದ್ಯಾರ್ಥಿಗಳ ಜೀವನ ಮತ್ತು ಭವಿಷ್ಯವನ್ನು ಹಾಳುಮಾಡುತ್ತಿದೆ. ವಿದ್ಯಾರ್ಥಿಗಳು ಕೆಟ್ಟ ಚಟಗಳಿಂದ ದೂರವಿದ್ದು, ಆರೋಗ್ಯಕರ ಜೀವನಶೈಲಿ ಮತ್ತು ವಿದ್ಯಾಭ್ಯಾಸದ ಕಡೆಗೆ ಹೆಚ್ಚಿನ ಗಮನ ಹರಿಸಬೇಕು" ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

                  ಕಾಲೇಜಿನ ಉಪ ಪ್ರಾಚಾರ್ಯರಾದ ಪ್ರಕಾಶ್ ಹೊಂಗಲ್ ಅವರು ಮಾತನಾಡಿ ನಮ್ಮ ಕಾಲೇಜು ಆವರಣವನ್ನು ಸಂಪೂರ್ಣವಾಗಿ ಮಾದಕ ವ್ಯಸನ ಮುಕ್ತವಾಗಿಸುವುದು ನಮ್ಮೆಲ್ಲರ ಗುರಿಯಾಗಿದೆ. ವಿದ್ಯಾರ್ಥಿಗಳು ಯಾವುದೇ ಆಮಿಷಗಳಿಗೆ ಒಳಗಾಗದೆ, ತಮ್ಮ ಸುತ್ತ ಮುತ್ತಲಿನವರಲ್ಲೂ ಈ ಬಗ್ಗೆ ಅರಿವು ಮೂಡಿಸಬೇಕು" ಎಂದು ವಿದ್ಯಾರ್ಥಿಗಳಿಂದ ಪ್ರತಿಜ್ಞಾ ವಿಧಿ ಕಾಲೇಜಿನ ಎಲ್ಲಾ ವಿದ್ಯಾರ್ಥಿಗಳು ಹಾಗೂ ಬೋಧಕ ವರ್ಗದವರು ’ನಾವು ಎಂದಿಗೂ ಮಾದಕ ವಸ್ತುಗಳನ್ನು ಸೇವಿಸುವುದಿಲ್ಲ ಮತ್ತು ನಮ್ಮ ಕ್ಯಾಂಪಸ್ ಅನ್ನು ನಶಾ ಮುಕ್ತವಾಗಿರಿಸುತ್ತೇವೆ’ ಎಂದು ಸಾಮೂಹಿಕವಾಗಿ ಪ್ರತಿಜ್ಞಾ ವಿಧಿ ಸ್ವೀಕರಿಸಿದರು.

               ಈ ಸಮಯದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ರಾಜ್ಯ ಸಹ ಕಾರ್ಯದರ್ಶಿಗಳಾದ ಅಭಿಷೇಕ ದೊಡ್ಡಮನಿ ತಾಲೂಕು ಸಹ ಸಂಚಾಲಕಿಯಾದ ಸವಿತಾ ಕರೆಯತ್ತಿನ ಕಾಲೇಜಿನ ಇತರೆ ಶಿಕ್ಷಕ ವೃಂದದವರು ಸಿಬ್ಬಂದಿ ವರ್ಗ ಮತ್ತು ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. 


ಸುದ್ದಿ ಓದಿ