ಗದಗ

ಸೇವೆಯೇ ಜೀವನ ಮಾನವೀಯತೆಯೇ ನಿಜವಾದ ಧರ್ಮ: ಉಮಾ ಎನ್‌.ಜೆ

ಸೇವೆಯೇ ಜೀವನ ಮಾನವೀಯತೆಯೇ ನಿಜವಾದ ಧರ್ಮ: ಉಮಾ ಎನ್‌.ಜೆ

                  ಗದಗ  28; ಹಿರಿಯರ ಮುಖದಲ್ಲಿ ಮಂದಹಾಸ ಮೂಡಿಸುವುದು, ಅವರೊಂದಿಗೆ ಪ್ರೀತಿಯಿಂದ ಬೆರೆಯುವುದು ಮತ್ತು ಅವರ ಯೋಗಕ್ಷೇಮ ವಿಚಾರಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ.  ಪರರ ನೋವಿಗೆ ಸ್ಪಂದಿಸುವ ಹೃದಯವೇ ನಿಜವಾದ ಮಾನವೀಯತೆ. ಸೇವೆಯ ಮೂಲಕವೇ ಸಮಾಜದಲ್ಲಿ ಪ್ರೀತಿ, ವಿಶ್ವಾಸ ಮತ್ತು ಸದೃಢತೆಯನ್ನು ಬೆಳೆಸಬಹುದು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತಾಲ್ಲೂಕು ಯೋಜನಾಧಿಕಾರಿ ಶ್ರೀಮತಿ ಉಮಾ ಎನ್‌. ಜೆ. ಅವರು ಹೇಳಿದರು.

              ಅವರು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಪೂಜ್ಯಶ್ರೀ ವೀರೇಂದ್ರ ಹೆಗ್ಡೆಯವರ ಜನ್ಮ ದಿನಾಚರಣೆ ಅಂಗವಾಗಿ ಹುಲಕೋಟಿಯ ಸುರಭಿ ವೃದ್ಧಾಶ್ರಮಕ್ಕೆ ಭೇಟಿ ನೀಡಿ  ಆಶ್ರಮದಲ್ಲಿರುವ ಹಿರಿಯ ನಾಗರಿಕರಿಗೆ ಹಣ್ಣು-ಹಂಪಲು ವಿತರಿಸುವ ಮೂಲಕ ಪ್ರೀತಿ, ಕಾಳಜಿ, ಗೌರವ ಹಾಗೂ ಮಾನವೀಯತೆಯ ಸೇವೆಯನ್ನು ಸಲ್ಲಿಸಿಮಾತನಾಡಿದ ಅವರು,

                 ಮನುಕುಲದ ಒಳಿತಿಗಾಗಿ, ಸದೃಢ ಸಮಾಜದ ನಿರ್ಮಾಣಕ್ಕಾಗಿ ಹಾಗೂ ಸಮಾಜದ ಸರ್ವತೋಮುಖ ಅಭಿವೃದ್ಧಿಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿರುವ ಪರಮಪೂಜ್ಯ ಪದ್ಮವಿಭೂಷಣ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಜನ್ಮದಿನದ ಪ್ರಯುಕ್ತ ಸೇವಾ ದಿನಾಚರಣೆ ಎಂಬ ವಿಶೇಷ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ ಎಂದು ಹೇಳಿದರು.

               ಈಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಚಂದ್ರ​‍್ಪ ಕರಿಕಟ್ಟಿ, ಸದಸ್ಯ ಉಮೇಶ ರೊಳ್ಳಿ,   ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ಅಧ್ಯಕ್ಷೆ ಶಾರದಾ ಕಿತ್ತೂರ, ವಲಯದ ಮೇಲ್ವಿಚಾರಕರಾದ ಹೇಮಣ್ಣ ಬಂಡಿವಡ್ಡರ,  ಸಿದ್ದರಾಮಯ್ಯ,  ಪ್ರಮೋದ ಹೂಗಾರ, ನವಜೀವನ ಸಮಿತಿ ಸದಸ್ಯರು, ಸಂಘದ ಸದಸ್ಯರು, ಸುರಭಿ ವೃದ್ಧಾಶ್ರಮದ ಮೇಲ್ವಿಚಾರಕರಾದ ರಾಜೇಸಾಬ ಯಾಕ್ಲಾಸಪುರ ಹಾಗೂ ಆಶ್ರಮದ ಹಿರಿಯ ನಾಗರಿಕರು ಉಪಸ್ಥಿತರಿದ್ದರು. 


ಸುದ್ದಿ ಓದಿ