ವಿಧಾನ ಸಭಾದ್ಯಕ್ಷರಾದ ಜಿ.ಎಸ್ ಪಾಟೀಲ ಉಪಸ್ಥಿತಿಯಲ್ಲಿ ತ್ರೈಮಾಸಿಕ ಕೆಡಿಪಿ ಸಭೆ
ಗದಗ 28 : ಜಿಲ್ಲೆಯ 1.79 ಲಕ್ಷ ರೈತರಿಗೆ ಬರ ಪರಿಹಾರವಾಗಿ ಪ್ರತಿ ರೈತರ ಖಾತೆಗೆ 5000 ರೂ. ಜಮೆ ಮಾಡಲು ಸಿದ್ಧತೆ ನಡೆದಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ರಾಯರಡ್ಡಿ ಹೇಳಿದರು.ಜಿಲ್ಲಾಡಳಿತ ಭವನದಲ್ಲಿ ನಡೆದ ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಚಿವರು, ಮೊದಲ ಹಂತವಾಗಿ ಜಿಲ್ಲೆಯ 59 ಸಾವಿರ ರೈತರ ಖಾತೆಗೆ 2500 ಪರಿಹಾರ ಜಮೆ ಆಗಿದೆ. ಡಿಸೆಂಬರ್ ಒಳಗಾಗಿ ಇನ್ನೂಳಿದ ಪರಿಹಾರ ಮೊತ್ತ ರೈತರ ಖಾತೆಗೆ ಜಮೆ ಮಾಡಲಾಗುವುದು ಎಂದು ತಿಳಿಸಿದರು.
ರಾಜ್ಯದಲ್ಲಿ ಬರದಿಂದಾಗಿ 60 ಸಾವಿರ ಕೋಟಿ ರೂ. ನಷ್ಟವಾಗಿದೆ. ಕೇಂದ್ರ ಸರ್ಕಾರವು ಎನ್ ಡಿ ಆರ್ ಎಫ್ ಮೂಲಕ ಬೆಳೆ ಪರಿಹಾರವನ್ನು ಆದಷ್ಟು ಬೇಗ ಬಿಡುಗಡೆ ಮಾಡುವಂತೆ ಆಗ್ರಹಿಸುತ್ತೇನೆ ಎಂದು ತಿಳಿಸಿದರು.ಶಾಸಕ ಎಚ್.ಕೆ. ಪಾಟೀಲ ಮಾತನಾಡಿ, 2025-26 ನೇ ಸಾಲಿನ ಹಿಂಗಾರು ಹಂಗಾಮಿನ ಬೆಳೆ ವಿಮೆ ಪರಿಹಾರ ವಿತರಣೆಯಲ್ಲಿ ಗೊಂದಲ ಸೃಷ್ಟಿಯಾಗಿದೆ. ಗದಗ ಮುಂಡರಗಿ ಮತ್ತು ರೋಣ ತಾಲೂಕಿಗೆ ಇನ್ನೂ ಬೆಳೆ ವಿಮೆ ಪರಿಹಾರವೇ ಬಂದಿಲ್ಲ. ಬೆಳೆ ವಿಮೆ ಪರಿಹಾರ ಬಿಡುಗಡೆಗೆ ಉಸ್ತುವಾರಿ ಸಚಿವ ಬಸವರಾಜ ರಾಯರೆಡ್ಡಿ ಗಮನ ಹರಿಸಬೇಕು ಎಂದರು.
ಕೃಷಿ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿ 2025-26 ನೇ ಸಾಲಿನ ಹಿಂಗಾರು ಹಂಗಾಮಿನ ಬೆಳೆ ವಿಮೆ ಪರಿಹಾರದ 183 ಕೋಟಿ ರೂ. ನಲ್ಲಿ ಈ ವರೆಗೆ 50.8 ಕೋಟಿ ಮಾತ್ರ ಬಿಡುಗಡೆ ಆಗಿದೆ ಎಂದು ಮಾಹಿತಿ ನೀಡಿದರು. ಬರ ನಿರ್ವಹಣೆಗೆ ಅಂದಾಜು 30 ಕೋಟಿ ರೂ. ಜಿಲ್ಲೆಯ ಪಿಡಿ ಖಾತೆಗಳಲ್ಲಿ ಇರುವುದಾಗಿ ಜಿಲ್ಲಾಧಿಕಾರಿಗಳು ತಿಳಿಸಿದರುಇದಕ್ಕೆ ಪ್ರತಿಕ್ರಿಯಿಸಿದ ಎಸ್ ವಿ ಸಂಕನೂರು ಅವರು ನಿಮ್ಮ ತರಬೇತಿ ಶಿಬಿರಗಳು ಪ್ರಯೋಜಕ್ಕೆ ಬಂದಿಲ್ಲ ಎಂದು ಹೇಳಿದರು.
ಈ ವೇಳೆ ಮಧ್ಯ ಪ್ರವೇಶಿಸಿದ ವಿಧಾನ ಸಭೆಯ ಸಭಾಧ್ಯಕ್ಷ ಜಿ.ಎಸ್. ಪಾಟೀಲ, ಜಿಲ್ಲೆಯಲ್ಲಿ ಸರ್ಕಾರಿ, ಅನುದಾನಿತ, ಅನುದಾನಿತ ಕಾಲೇಜುಗಳ ಪಟ್ಟಿ ಮಾಡಿ ಫಲಿತಾಂಶದಲ್ಲಿ ಅವುಗಳ ಸಾಧನೆಯ ವರದಿ ಸಲ್ಲಿಸುವಂತೆ ಸೂಚಿಸಿಸರು. ಆದರೆ, ಖಾಸಗಿ ವ್ಯಕ್ತಿಗಳು, ಯೋಜನೆಯೇತರರು ಕೊಳವೆ ಬಾವಿ ಹಾಕಿಸಿಕೊಳ್ಳುವರಿಗೆ ಟಿಸಿ ಅಳವಡಿಸಲು ತುರ್ತಾಗಿ ಅಂದಾಜು ಪಟ್ಟಿ ತಯಾರಿಸಿ ಟಿಸಿ ಹಾಕಿ ಕೊಡುತ್ತೀರಿ ಎಂದು ಶಾಸಕ ಚಂದ್ರು ಲಮಾಣಿ ಆರೋಪಿಸಿದರು.
ಈ ವೇಳೆ ಶಾಸಕ ಎಚ್.ಕೆ. ಪಾಟೀಲ ಮಧ್ಯಪ್ರವೇಶಸಿ, ಗಂಗಾ ಕಲ್ಯಾಣ ಯೋಜನೆ ಯಶಸ್ವಿ ಯೋಜನೆ ಆಗಿದೆ. ಈ ಫಲಾನುಭವಿಗಳಿಗೆ ಅನ್ಯಾಯ ಆಗಬಾರದು. ಎರಡು ಮೂರು ದಿನಗಳ ಒಳಗಾಗಿ ಎಲ್ಲರಿಗೂ ಟಿಸಿ ಹಾಕಿಸಿಕೊಡಬೇಕು ಎಂದು ನಿರ್ದೇಶನ ನೀಡಿದರು.ಗದಗ ನಗರದ ನೀರಿನ ಸಮಸ್ಯೆ ಬಗೆ ಹರಿಸಿ:ಗದಗ ನಗರಕ್ಕೆ ನೀರು ಪೂರೈಕೆ ಸಮಸ್ಯೆ ಕುರಿತು ಚರ್ಚೆ ಆಯಿತು. 8 ರಿಂದ 10 ದಿನಗಳಿಗೆ ನೀರು ಪೂರೈಸಲಾಗುತ್ತಿದೆ ಎಂದು ನಗರಸಭೆ ಪೌರಾಯುಕ್ತರು ಮಾಹಿತಿ ನೀಡಿದರು.
ಪ್ರತಿ ವಾರ್ಡಗಳಿಗೆ 15 ದಿನಕ್ಕಿಂತಲೂ ಅಧಿಕ ದಿನಗಳಿಗೆ ನೀರು ಪೂರೈಕೆ ಆಗುತ್ತಿದೆ ಎಂದು ಎಸ್. ವಿ. ಸಂಕನೂರು ಪ್ರತಿಕ್ರಿಯಿಸಿದರು. ಸಿಂಗಟಾಲೂರು ಬ್ಯಾರೇಜ್ ನಲ್ಲಿ ಪ್ರಸ್ತುತ 1.98 ಟಿಎಂಸಿ ನೀರಿದೆ. ಭದ್ರ ಡ್ಯಾಂ ನಿಂದ ಸಿಂಗಟಾಲೂರು ಬ್ಯಾರೇಜ್ ಗೆ ನೀರು ಬಿಡುಲು ಸರ್ಕಾರಕ್ಕೆ ಒತ್ತಾಯಿಸಲಾಗುವುದು ಎಂದು ಶಾಸಕ ಎಚ್.ಕೆ. ಪಾಟೀಲ ಹೇಳಿದರು. ನೀರಿನ ಟ್ಯಾಂಕರ್ ಪೂರೈಕೆ ಮಾಡಬೇಕು ಎಂದು ನಿರ್ದೇಶನ ನೀಡಿದರು.
ಸಭೆಯಲ್ಲಿ ಶಾಸಕ ಡಾ.ಚಂದ್ರು ಲಮಾಣಿ, ಎಸ್ ವಿ ಸಂಕನೂರ, ಬಿಬಿ ಅಸೂಟಿ, ಅಕ್ಬರ್ ಸಾಬ ಬಬರ್ಚಿ, ಜಿಲ್ಲಾಧಿಕಾರಿ ಸಿ ಎನ್ ಶ್ರೀಧರ, ಜಿಪಂ ಸಿಇಓ ಮುಕುಲ್ ಜೈನ್, ಎಸ್ಪಿ ಮಿಥುನ್ ಎಚ್ ಎನ್, ಡಿಸಿಎಪ್ ಸಂತೋಷ ಕುಮಾರ, ಎಡಿಸಿ ಡಾ. ದುರುಗೇಶ್ ಕೆ ಆರ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.