ಕನಕದಾಸರ ಸಂದೇಶ, ಮಾರ್ಗದರ್ಶನ ಇಂದಿಗೂ ಪ್ರಸ್ತುತ: ಶಾಸಕ ಎಚ್.ಕೆ. ಪಾಟೀಲ
ಗದಗ 27: ಸಾಮಾಜಿಕ ಬದುಕಿಗೆ ದಾರೀದೀಪವಾದ ಕನಕದಾಸರ ವಚನ, ಪದ್ಯಗಳು ಹಿ ಕನಕದಾಸರ ಜಯಂತಿ ಅಂಗವಾಗಿ ಭಾವಚಿತ್ರಕ್ಕೆ ಪುಷ್ಪಾರ್ಚನೆಗದಗ : ದಾಸಶ್ರೇಷ್ಠ ಭಕ್ತ ಕನಕದಾಸರ ಜಯಂತಿ ಅಂಗವಾಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಶುಕ್ರವಾರ ಗದಗ ನಗರದ ಹಾತಲಗೇರಿ ನಾಕಾದಲ್ಲಿರುವ ಭಕ್ತ ಕನಕದಾಸರ ವೃತ್ತದಲ್ಲಿ ಕನಕದಾಸರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡುವ ಮೂಲಕ ಗೌರವ ನಮನ ಸಲ್ಲಿಸಲಾಯಿತು.
ಶಾಸಕ ಎಚ್.ಕೆ. ಪಾಟೀಲ ಅವರು ಕನಕದಾಸರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ನೆರವೇರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಎಚ್.ಕೆ. ಪಾಟೀಲ ಅವರು, ಕನಕದಾಸರು ನಾಡಿಗೆ ನೀಡಿದ ಸಂದೇಶ ಹಾಗೂ ಮಾರ್ಗದರ್ಶನ ಅಪಾರವಾದುದು. ಅವರ ವಚನಗಳು, ಕೀರ್ತನೆಗಳು ಮತ್ತು ಪದ್ಯಗಳು ಸಮಾಜಕ್ಕೆ ಉತ್ತಮ ದಾರಿಯನ್ನು ತೋರಿಸಿವೆ. ಮನುಷ್ಯರು ತಮ್ಮ ಸಾಮಾಜಿಕ ಬದುಕನ್ನು ಹೇಗೆ ರೂಪಿಸಿಕೊಳ್ಳಬೇಕು ಎಂಬುದನ್ನು ತಮ್ಮ ಸಾಹಿತ್ಯ ಹಾಗೂ ಚಿಂತನೆಗಳ ಮೂಲಕ ತಿಳಿಸಿಕೊಟ್ಟ ಮಹಾಪುರುಷರು ದಾಸಶ್ರೇಷ್ಠ ಕನಕದಾಸರು ಎಂದು ಹೇಳಿದರು.
ವಿದ್ಯಾರ್ಥಿಗಳಿಂದ ಭಕ್ತಿಗೀತೆ ಗಾಯನ:ಕಾರ್ಯಕ್ರಮದಲ್ಲಿ ಗದಗದ ಕೆವಿಎಸ್ಆರ್ ಶಾಲೆಯ ವಿದ್ಯಾರ್ಥಿಗಳು ಕನಕದಾಸರ ಭಕ್ತಿಗೀತೆಗಳನ್ನು ಹಾಡುವ ಮೂಲಕ ನೆರೆದಿದ್ದ ಸಾರ್ವಜನಿಕರು ಹಾಗೂ ಗಣ್ಯರ ಮೆಚ್ಚುಗೆಗೆ ಪಾತ್ರರಾದರು.ಈ ಸಂದರ್ಭದಲ್ಲಿ ಮುಖಂಡರಾದ ಜಿಲ್ಲಾ ಪಂಚಾಯತಿಯ ಮಾಜಿ ಅಧ್ಯಕ್ಷ ವಾಸಣ್ಣ ಕುರಡಗಿ, ಪಕ್ಕಿರ್ಪ ಹೆಬಸೂರ, ರುದ್ರಣ್ಣ ಗುಳಗುಳಿ, ರವಿ ದಂಡಿನ, ಕೃಷ್ಣಗೌಡ ಎಚ್. ಪಾಟೀಲ, ಡಾ. ಜಿ.ಬಿ. ಬಿಡನಾಳ, ಬಿ.ಬಿ. ಅಸೂಟಿ, ಅಶೋಕ ಮಂದಾಲಿ,
ರಮೇಶ ಸಜ್ಜನರ, ಸಿದ್ದು ಪಾಟೀಲ, ಪ್ರಕಾಶ ಕರಿ, ನಿಂಗಪ್ಪ ಬಿಚ್ಚಗತ್ತಿ, ಡಾ. ಎನ್.ಎಚ್. ನಾಗನೂರ, ವೆಂಕಟೇಶ ಇಮರಾಪೂರ, ನಾಗರಾಜ ಮೆಣಸಗಿ, ಸೋಮನಗೌಡ ಪಾಟೀಲ, ಮುತ್ತು ಜಡಿ, ಹೇಮಂತ ಗಿಡ್ಡಹನಮಣ್ಣವರ, ಮಂಜುನಾಥ ಜಡಿ, ಸತೀಶ, ಆರ್.ಕೆ. ಗುಡಸಾಲಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ, ಅಪರ ಜಿಲ್ಲಾಧಿಕಾರಿ ಡಾ. ದುರಗೇಶ ಕೆ.ಆರ್., ಜಿಲ್ಲಾ ಪಂಚಾಯತಿ ಉಪಕಾರ್ಯದರ್ಶಿ ಸಿ.ಆರ್. ಮುಂಡರಗಿ, ವಸಂತ ಮಡ್ಲೂರ, ಮಹಾಂತೇಶ ಸಜ್ಜನರ, ಡಾ. ಬಸವರಾಜ ಬಳ್ಳಾರಿ, ರಾಜು ಸೋಪಡ್ಲ, ರಾಜಣ್ಣ ಕಂಟಿಗೊಣ್ಣವರ ಹಾಗೂ ರಾಜಾರಾಮ ಪವಾರ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಗಣ್ಯರು ಹಾಜರಿದ್ದರು.