ಕೊಪ್ಪಳ

ಸಂವಿಧಾನ ಉಳಿಸಿ ಆಂದೋಲನಕ್ಕೆ ಬೆಂಬಲ: ಕೊಪ್ಪಳದಲ್ಲಿ ಪ್ರಗತಿಪರ ಸಂಘಟನೆಗಳ ಪ್ರತಿಭಟನೆ

ಸಂವಿಧಾನ ಉಳಿಸಿ ಆಂದೋಲನಕ್ಕೆ ಬೆಂಬಲ: ಕೊಪ್ಪಳದಲ್ಲಿ ಪ್ರಗತಿಪರ ಸಂಘಟನೆಗಳ ಪ್ರತಿಭಟನೆ


                   ಕೊಪ್ಪಳ 27 : ಸಂವಿಧಾನ ದಿನಾಚರಣೆಯ ಅಂಗವಾಗಿ ರಾಷ್ಟ್ರವ್ಯಾಪಿ ನೀಡಲಾದ ಹೋರಾಟದ ಕರೆಗೆ ಬೆಂಬಲ ಸೂಚಿಸಿ, ಗುರುವಾರ ನಗರದ ಅಶೋಕ ವೃತ್ತದಲ್ಲಿ ಕೊಪ್ಪಳದ ಪ್ರಗತಿಪರ ಹಾಗೂ ಜನಪರ, ರೈತಪರ, ಕಾರ್ಮಿಕ ಸಂಘಟನೆಗಳ ಮುಖಂಡರು ಬೃಹತ್ ಪ್ರತಿಭಟನೆ ನಡೆಸಿದರು.   ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಜಿಲ್ಲಾ ಮುಖ್ಯ ಸಂಚಾಲಕ ಬಸವರಾಜ್ ಶೀಲವಂತರ್, "ಸಂವಿಧಾನದ ಆಶಯಗಳಾದ ಸಮಾನತೆ ಮತ್ತು ಸೌಹಾರ್ದತೆಯನ್ನು ಒಪ್ಪದ ಕೋಮುವಾದಿ ಶಕ್ತಿಗಳು, ಬಿಜೆಪಿ ಹಾಗೂ ಆರ್‌ಎಸ್‌ಎಸ್ ಸಂವಿಧಾನದ ಮೇಲೆ ನಿರಂತರ ದಾಳಿ ನಡೆಸುತ್ತಿವೆ.

               ಇಂತಹ ದಾಳಿಗಳು ಇಂದು-ನಿನ್ನೆಯದಲ್ಲ, ಸ್ವಾತಂತ್ರ್ಯ ಪೂರ್ವದಿಂದಲೂ ನಡೆದುಕೊಂಡು ಬಂದಿವೆ. ಇಂದಿನ ಸಂವಿಧಾನ ಸಮರಾ​‍್ಣ ದಿನದಂದು ದೇಶದ ಜನಪರ ಸಂಘಟನೆಗಳು, ಪ್ರಗತಿಪರರು ಹಾಗೂ ಎಡ ಚಿಂತಕರು ಒಗ್ಗೂಡಿ ‘ಸಂವಿಧಾನ ಉಳಿಸಿ’ ಆಂದೋಲನಕ್ಕೆ ಕರೆ ನೀಡಿದ್ದಾರೆ" ಎಂದು ಹೇಳಿದರು.   ಪಾಸ್ಟರ್ಸ್‌ ಅಸೋಸಿಯೇಷನ್ ಜಿಲ್ಲಾ ಅಧ್ಯಕ್ಷ ಚನ್ನಬಸಪ್ಪ ಅಪ್ಪಣ್ಣವರ್ ಮಾತನಾಡಿ, "ನಮ್ಮ ದೇಶದ ಜನರೇ ನಮಗೆ ನಾವೇ ಅರ​‍್ಿಸಿಕೊಂಡಿರುವ ಸಂವಿಧಾನವನ್ನು ಆಡಳಿತಶಾಹಿಗಳು ತಮ್ಮೊಂದಿಗೆ ಯಾವುದೇ ಸಂಬಂಧವಿಲ್ಲದಂತೆ ನಿರ್ಲಕ್ಷಿಸುತ್ತಿವೆ.                  ತಮಗೆ ಬೇಕಾದಂತೆ ಸಂವಿಧಾನವನ್ನು ತಿದ್ದುಪಡಿ ಮಾಡಬಹುದು ಎಂಬ ಭ್ರಮೆ ಕೆಲವರಿಗಿದೆ. ಆದರೆ, 140 ಕೋಟಿ ಜನರು ಒಪ್ಪಿಕೊಂಡಿರುವ ಸಂವಿಧಾನವನ್ನು ಬೆರಳೆಣಿಕೆಯಷ್ಟು ಮಂದಿ ತಿದ್ದುಪಡಿ ಮಾಡಲು ಹೊರಟರೆ ಅದು ಸಾಧ್ಯವಿಲ್ಲ. ನಾವು ಯಾವುದೇ ಸಂಕಷ್ಟದ ಪರಿಸ್ಥಿತಿಯಲ್ಲೂ ಸಂವಿಧಾನದ ಪರವಾಗಿ ದೃಢವಾಗಿ ನಿಲ್ಲುತ್ತೇವೆ ಮತ್ತು ನಮ್ಮ ಹೋರಾಟವನ್ನು ಮುಂದುವರಿಸುತ್ತೇವೆ" ಎಂದು ಸ್ಪಷ್ಟಪಡಿಸಿದರು.   ಜನಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಎಸ್‌.ಎ. ಗಫಾರ್ ಮಾತನಾಡಿ, "ಒಂದೆಡೆ ದೇಶದಲ್ಲಿ ಸಂವಿಧಾನ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸುತ್ತಾ, ಸಂವಿಧಾನವು ಸಮರ​‍್ಕವಾಗಿ ಜಾರಿಯಾಗಬೇಕೆಂದು ಒತ್ತಾಯಿಸುತ್ತಿದ್ದೇವೆ.                                   ಮತ್ತೊಂದೆಡೆ, ಸಂವಿಧಾನ ವಿರೋಧಿಯಾದ ಎಸ್‌ಐಆರ್ ಅನ್ನು ಸಂಪೂರ್ಣವಾಗಿ ರದ್ದುಗೊಳಿಸಬೇಕೆಂದು ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದೇವೆ. ಪ್ರತಿಯೊಬ್ಬ ಪ್ರಜೆಗೂ ಸಂವಿಧಾನದತ್ತ ಹಕ್ಕುಗಳು ತಲುಪುವಂತೆ ಕೇಂದ್ರ ಸರ್ಕಾರ ಕಾರ್ಯನಿರ್ವಹಿಸಬೇಕು. ತನ್ನ ತಪ್ಪುಗಳನ್ನು ತಿದ್ದಿಕೊಳ್ಳದಿದ್ದರೆ ಕೇಂದ್ರ ಸರ್ಕಾರಕ್ಕೆ ಉಳಿಗಾಲವಿಲ್ಲ; ದಲಿತ, ಹಿಂದುಳಿದ ಮತ್ತು ಅಲ್ಪಸಂಖ್ಯಾತ ಸೇರಿದಂತೆ ಶೋಷಿತ ಸಮುದಾಯಗಳು ಒಗ್ಗೂಡಿದರೆ ಸರ್ಕಾರ ಉಳಿಯುವುದಿಲ್ಲ" ಎಂದು ಎಚ್ಚರಿಕೆ ನೀಡಿದರು.   

                ಕಾರ್ಮಿಕ ಮತ್ತು ರೈತ ಮುಖಂಡರಾದ ಭಾರತೀಯ ಕಾರ್ಮಿಕ ಸಂಘಟನೆಗಳ ಒಕ್ಕೂಟದ ಗಂಗಾವತಿ ತಾಲೂಕಾ ಸಂಚಾಲಕ ಚಾಂದ್ ಪಾಷಾ, ಗಂಗಾವತಿ ಕಟ್ಟಡ ಕಾರ್ಮಿಕ ಸಂಘಟನೆಯ ಮುಖಂಡ ನಿರುಪಾದಿ ಭೋವಿ, ಎಂ. ಅಲ್ಲಾಭಕ್ಷಿ (ಗಂಗಾವತಿ), ಕರ್ನಾಟಕ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಬಸವರಾಜ್ ಪೂಜಾರ ನರೇಗಲ್, ಸಿದ್ದಾಪುರ ಮುಖಂಡ ನಿರುಪಾದಿ ಗುನ್ನಟ್ಟಿ, ಪಾಮಣ್ಣ ಕೆ. ಮಲ್ಲಾಪುರ,

                  ಕಟ್ಟಡ ಕಾರ್ಮಿಕ ಸಂಘಟನೆಯ ಮುಖಂಡ ಜಾಫರ್ ಕುರಿ. ಸಿಐಟಿಯು ಜಿಲ್ಲಾ ಮುಖಂಡ ಖಾಸೀಮ್ ಸರ್ದಾರ್, ಕೊಳಚೆ ನಿರ್ಮೂಲನಾ ವೇದಿಕೆಯ ಸಂಚಾಲಕ ಮಖಬೂಲ್ ರಾಯಚೂರು, ಮಹಾಂತೇಶ್ ಕೋತಬಾಳ, ಶಿವಪ್ಪ ಹಡಪದ್, ಸಿಐಟಿಯು ಜಿಲ್ಲಾ ಅಧ್ಯಕ್ಷ ಹನುಮೇಶ್ ಕಲಮಂಗಿ ಸೇರಿದಂತೆ ಹಲವು ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು. 


ಸುದ್ದಿ ಓದಿ