ಸಹಕಾರಿ ಸಚಿವ ಲಕ್ಷ್ಮಣ್ ಸವದಿಗೆ ಹಾಲಯ್ಯ ಹುಡೇಜಾಲಿರಿಂದ ಸನ್ಮಾನ
ಕೊಪ್ಪಳ 27 : ನಗರದಲ್ಲಿ ಗುರುವಾರ ದಂದು ಜರುಗಿದ ಹಿಟ್ನಾಳ ಕುಟುಂಬದ ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳಲು ಆಗಮಿಸಿದ ಕರ್ನಾಟಕ ಸರ್ಕಾರದ ಸಹಕಾರಿ ಇಲಾಖೆ ಸಚಿವ ಲಕ್ಷ್ಮಣ ಸವದಿ ಯವರಿಗೆ ಜಿಲ್ಲೆಯ ಹಿರಿಯ ರಂಗ ಕಲಾವಿದ ನಟ ಹಾಗೂ ಪ್ರಸಕ್ತ ಸಾಲಿನ ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ಹಾಲಯ್ಯ ಹುಡೆ ಜಾಲಿ ರವರು ಸನ್ಮಾನಿಸಿ ವಿಶ್ವವಿಖ್ಯಾತಿ ಕಲೆಗಳ ತವರೂರು ಕಿನ್ನಾಳ ಕಲೆಯ ನೆನಪಿನ ಕಾಣಿಕೆ (ಮೂಮೆಂಟಮ್) ಗಳನ್ನು ನೀಡಿ ಸನ್ಮಾನಿಸಿದರು,
ಸರಳ ಸಾಂಕೇತಿಕ ಸನ್ಮಾನ ಸಮಾರಂಭದ ನೇತೃತ್ವ ವಹಿಸಿದ್ದ ಸಹಕಾರಿ ದುರಿಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶೇಖರ ಗೌಡ ಮಾಲಿ ಪಾಟೀಲ್ ಪಾಲ್ಗೊಂಡಿದ್ದು ಇದೇ ವೇಳೆ ಕೆಪಿಸಿಸಿ ಮಹಿಳಾ ಘಟಕದ ಮಾಜಿ ರಾಜ್ಯ ಪ್ರಧಾನ ಕಾರ್ಯದರ್ಶಿ ಶಕುಂತಲಾ ಹುಡೆಜಾಲಿ, ಯುವ ಸಹಕಾರಿ ಧುರೀಣ ಗವಿಸಿದ್ದೇಶ್ ಹುಡೆ ಜಾಲಿ , ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಶರಣಪ್ಪ ಹ್ಯಾಪಿ ಮತ್ತು ರಾಜು ಶೆಟ್ಟರ್ , ಶಿವು, ಅಕ್ಷಯ್ ಕುಮಾರ್ ಸೇರಿದಂತೆ ಕಾರ್ಯಕರ್ತರು ಮತ್ತು ಅಭಿಮಾನಿಗಳು ಉಪಸ್ಥಿತರಿದ್ದರು,