ಬೆಳಗಾವಿ

ಕನಕದಾಸರು ಮತ್ತು ಪುರಂದರದಾಸರನ್ನು ಕರ್ನಾಟಕ ಕೀರ್ತನ ಸಾಹಿತ್ಯದ ಅಶ್ವಿನಿ ದೇವತೆಗಳೆಂದು ಬಣ್ಣಿಸಲಾಗಿದೆ: ರಮೇಶ ಅಳಗುಂಡಿ

ಕನಕದಾಸರು ಮತ್ತು ಪುರಂದರದಾಸರನ್ನು ಕರ್ನಾಟಕ ಕೀರ್ತನ ಸಾಹಿತ್ಯದ ಅಶ್ವಿನಿ ದೇವತೆಗಳೆಂದು ಬಣ್ಣಿಸಲಾಗಿದೆ: ರಮೇಶ ಅಳಗುಂಡಿ
Kanakadasa and Purandaradasa have been described as the 'Ashwini Devatas' (divine twins) of Karnatak

ಲೋಕದರ್ಶನ ವರದಿ 

            ಬೆಟಗೇರಿ 27 : ಕನಕದಾಸರು ಜಾತಿ ಪದ್ಧತಿ ಮತ್ತು ಸಾಮಾಜಿಕ ಅಸಮಾನತೆಯನ್ನು ವಿರೋಧಿಸಿ, ನಿಜವಾದ ಭಕ್ತಿ ಮತ್ತು ಮಾನವೀಯ ಮೌಲ್ಯಗಳಿಗೆ ಒತ್ತು ನೀಡಿದರು ಎಂದು ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ವಿವಿಡಿ ಸರ್ಕಾರಿ ಪ್ರೌಢ ಶಾಲೆಯ ಮುಖ್ಯೋಪಾಧ್ಯಯ ರಮೇಶ ಅಳಗುಂಡಿ ಹೇಳಿದರು.   

           ಗೋಕಾಕ ತಾಲೂಕಿನ ಬೆಟಗೇರಿ ವಿವಿಡಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ಶುಕ್ರವಾರ ನ.27ರಂದು ನಡೆದ ಕನಕದಾಸರ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಬಳಿಕ ಮಾತನಾಡಿ, ಕರ್ನಾಟಕದಲ್ಲಿ 15-16ನೆಯ ಶತಮಾನಗಳಲ್ಲಿ ಜನಪ್ರಿಯವಾದ ಭಕ್ತಿ ಮುಖ್ಯ ಹರಿದಾಸರಲ್ಲಿ ಕನಕದಾಸರು ಒಬ್ಬರು. ಕನಕದಾಸರು ಮತ್ತು ಪುರಂದರದಾಸರುರನ್ನು ಕರ್ನಾಟಕ ಕೀರ್ತನ ಸಾಹಿತ್ಯದ ಅಶ್ವಿನಿ ದೇವತೆಗಳೆಂದು ಬಣ್ಣಿಸಲಾಗಿದೆ ಎಂದರು.  

        ಕನಕದಾಸರ ಭಾವ ಚಿತ್ರಕ್ಕೆ ಪೂಜೆ, ಪುಷ​‍್ಾರೆ್ಪನ ನೆರವೇರಿಸಿದ ಬಳಿಕ ಶಾಲೆಯ ಮಕ್ಕಳಿಗೆ ಸಿಹಿ ವಿತರಿಸಲಾಯಿತು. ಸಹಶಿಕ್ಷಕ ಸದಾನಂದ ತೆರಣೆ ಮಾತನಾಡಿ. ಕನಕದಾಸರ ಬದುಕು ಮತ್ತು ಬರಹದ ಕುರಿತು ತಿಳಿಸಿದರು. ಶಾಲೆಯ ಎಸ್‌.ಡಿ.ಎಮ್‌.ಸಿ ಅಧ್ಯಕ್ಷ ರಾಮಣ್ಣ ನೀಲಣ್ಣವರ, ದುಂಡಪ್ಪ ದೇಯಣ್ಣವರ, ಹನುಮಂತ ಹಾಲಣ್ಣವರ, ಶುಭಾ.ಬಿ., ಈರಣ್ಣ ಪಟಗುಂದಿ, ಪ್ರಕಾಶ ಕುರಬೇಟ, ರಾಕೇಶ ನಡೋಣಿ,

               ಗಣಪತಿ ಭಾಗೋಜಿ, ಭಾಗ್ಯಶ್ರೀ ನಾಯಕ, ಮಲ್ಹಾರಿ ಪೋಳ, ಸಿರಾಜಅಹ್ಮದ ಜಿಡ್ಡಿಮನಿ, ನಾಗರಾಜ ಅರಳಿಮಟ್ಟಿ, ಮಂಜುನಾಥ ಸವತಿಕಾಯಿ, ಬಸವರಾಜ ಗೋಸಲೆ, ಸಿದ್ರಾಮೇಶ್ವರ ಕಮತ, ಭಿಮಶಿ ನರಸಪ್ಪಗೋಳ, ದೀಪಾ ದಾಸಂಗಳಿ, ಸ್ವಾತಿ ಬಡಿಗೇರ ಸೇರಿದಂತೆ ಶಾಲೆಯ ಶಿಕ್ಷಕರು, ಅತಿಥಿಶಿಕ್ಷಕರು, ಸಿಬ್ಬಂದಿ, ವಿದ್ಯಾರ್ಥಿಗಳು, ಇತರರು ಇದ್ದರು. 


ಸುದ್ದಿ ಓದಿ