ಹಂದಿಗುಂದ: ಭಕ್ತಶ್ರೇಷ್ಠ ಕನಕದಾಸರ ಜಯಂತಿ ಆಚರಣೆ
ಪಾಲಬಾವಿ 27 : ರಾಯಬಾಗ ತಾಲೂಕು ಹಂದಿಗುಂದ್ ಗ್ರಾಮ ಪಂಚಾಯತ್ ಕಾರ್ಯಾಲಯದಲ್ಲಿ ಭಕ್ತಶ್ರೇಷ್ಠ, ದಾಸಶ್ರೇಷ್ಠ ಕನಕದಾಸರ ಜಯಂತಿಯನ್ನು (ನ.27) ರಂದು ಶುಕ್ರವಾರ ಮುಂಜಾನೆ 8ಗಂಟೆಗೆ ಆಚರಿಸಲಾಯಿತು.
ಕ್ರಿಸ್ತಶಕ 15 -16ನೇ ಶತಮಾನದಲ್ಲಿ ಜನಿಸಿದ ಕನಕದಾಸರು ಕರ್ನಾಟಕದ ಶ್ರೇಷ್ಠ ಹರಿದಾಸ, ಕೀರ್ತನಕಾರ, ಕವಿ, ತತ್ವಜ್ಞಾನಿ ಸಂಗೀತಗಾರ ಮತ್ತು ಸಮಾಜ ಸುಧಾರಕ, ಸಮಾನತೆ ಸಂದೇಶ ಸಾರಿದವರು. ಕನ್ನಡ ಸಾಹಿತ್ಯವನ್ನು ಮೇರು ಪರ್ವತಕ್ಕೆರಿಸಿದ ಕೀರ್ತಿಯು ದಾಸ ಶ್ರೇಷ್ಠ ಕನಕದಾಸರಿಗೆ ಸಲ್ಲುತ್ತದೆ ಎಂದು ಗ್ರಾಪಂ ಪಿಡಿಓ ಶೋಭಾ ಪೂಜೇರಿ ಹೇಳಿದರು.
ಈ ಸಂದರ್ಭದಲ್ಲಿ ಹಾಲು ಸಿದ್ದೇಶ್ವರ ದೇವಸ್ಥಾನ ಅರ್ಚಕ ಶ್ರೀಮಂತ ಪೂಜೇರಿ ಭಕ್ತ ಕನಕದಾಸರ ಭಾವಚಿತ್ರಕ್ಕೆ ಪೂಜೆಸಲ್ಲಿಸಿದರು. ಗ್ರಾಪಂ ಪಿಡಿಒ ಶೋಭಾ ಪೂಜೇರಿ, ಗ್ರಾಪಂ ಕಾರ್ಯದರ್ಶಿ ಸಿದ್ಧಾರೂಢ ದಳವಾಯಿ, ಸಿಬ್ಬಂದಿಗಳಾದ ಬಸವರಾಜ ದೋಣೂರ ಸಿದ್ದಪ್ಪ ಅಂಗಡಿ, ಮಹಾದೇವ ಹೊಸಾಲಿ,
ಶಂಕರ ಹೊಸಾಲಿ, ಪ್ರವೀಣ ಬಂದಿ, ಅಶೋಕ ತಳವಾರ, ಸುವರ್ಣ ಹೂಗಾರ, ಗ್ರಾಮ ಸ್ವಚ್ಛಗಾರ ಸಿಬ್ಬಂದಿಗಳಾದ ಯಶವಂತ ಗಗ್ಗರಿ, ಶ್ರೀಶೈಲ ಅಜ್ಜಪ್ಪಗೋಳ, ಮಹಾಂತೇಶ ಯರಗುದ್ರಿ, ಲಕ್ಕವ್ವ ಪೂಜೇರಿ, ಶೋಭಾ ಪೂಜೇರಿ, ಜ್ಯೋತಿ ಗಗ್ಗರಿ, ಸವಿತಾ ಅಜ್ಜಪ್ಪಗೋಳ ಇದ್ದರು.