ಕನಕದಾಸರ ಚಿಂತನೆಗಳು ಸದಾ ಅಮರಪೂರ್ಣಿಮಾ ಟೋಪಕರ
ಮುನವಳ್ಳಿ 27 : “ಭಕ್ತಿಯ ಮೂಲಕ ಸಮಾಜದ ಅಸಮಾನತೆಗಳನ್ನು ಪ್ರಶ್ನಿಸಿ, ಕೀರ್ತನೆಗಳ ಮೂಲಕ ಸಮಾನತೆ, ಮಾನವೀಯತೆ ಮತ್ತು ಆತ್ಮಗೌರವದ ಮೌಲ್ಯಗಳನ್ನು ಜನಮನದಲ್ಲಿ ಬಿತ್ತಿದ ಸಂತ ಕನಕದಾಸರ ಚಿಂತನೆಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ಮುಖ್ಯೋಪಾಧ್ಯಾಯರಾದ ಪೂರ್ಣಿಮಾ ವಿನಾಯಕ ಟೋಪಕರ ತಿಳಿಸಿದರು. ಅವರು ಪಟ್ಟಣದ ಎಂ ಎಲ್ ಇ ಎಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ದಾಸ ಪರಂಪರೆಯ ಶ್ರೇಷ್ಠ ಕನಕದಾಸ ಜಯಂತಿ ಆಚರಣೆಯನ್ನು ಉದ್ದೇಶಿಸಿ ಮಾತನಾಡಿದರು.ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಸಾಹಿತಿ ಡಾ. ವ. ಬಿ. ಕಡಕೋಳ ಮಾತನಾಡಿ "ಕನಕದಾಸರ ತತ್ವಾದರ್ಶಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡು,
ಎಲ್ಲರಿಗೂ ಘನತೆ ಮತ್ತು ಗೌರವ ದೊರೆಯುವ ಸಮಸಮಾಜದ ನಿರ್ಮಾಣಕ್ಕೆ ನಾವೆಲ್ಲರೂ ಕೈಜೋಡಿಸೋಣ"ಎಂದು ತಿಳಿಸಿದರು.ಪ್ರಾಸ್ತಾವಿಕವಾಗಿ ಶಿಕ್ಷಕರಾದ ಎ. ವ್ಹಿ. ನರಗುಂದ ಆಚರಣೆಯ ಮಹತ್ವವನ್ನು ತಿಳಿಸಿದರು. ಶಿಕ್ಷಕರಾದ ಆರ್ ಜಿ ಮಲ್ಲಾಪುರ ಮಠ ಕನಕದಾಸರ ಜೀವನ ಕುರಿತು ತಿಳಿಸಿದರು ಗುರುಮಾತೆಯರಾದ ರಮ್ಯಾ ಮರಡಿಮಠ, ವಿದ್ಯಾ ಕಾಜಗಾರ, ಪ್ರಿಯಾಂಕಾ ಪಾಟೀಲ ಪ್ರಾರ್ಥನಾಗೀತೆ ಹೇಳಿದರು. ನಾಗರಾಜ್ ಹಿಟ್ಟಣಗಿ,ಬಿ ಎ ಮನಗೂಳಿ.ಸಿರೆನ್ನವರ. ಬಸವರಾಜ್ ಬಂಡಿ.ಜಾಫರ್ ಮುಲ್ಲಾ, ಗೀತಾ ಪ್ರಭುನವರ, ಅಟೆಂಡರ ರಮೇಶ್ ರಣ್ಣೋರೆ, ಬಸಣ್ಣ ದೊಡವಾಡ, ಪರಿಚಾಯಕಿರಾದ ಸಿದ್ಲಿಂಗಮ್ಮ, ಸುವರ್ಣ, ಸಾವಿತ್ರಿ, ಗಂಗಮ್ಮ ಮೊದಲಾದವರು ಉಪಸ್ಥಿತರಿದ್ದರು.ಬಸವರಾಜ್ ಬಂಡಿ ಸ್ವಾಗತಿಸಿದರು. ನಾಗರಾಜ್ ಹಿಟ್ಟಣಗಿ ನಿರೂಪಿಸಿದರು. ಕಿರಣ್ ನಾಯ್ಕರ ವಂದಿಸಿದರು