ತಳಕಲ್ನಲ್ಲಿ ನಿವೃತ್ತ ನೌಕರರ ಅಭಿನಂದನಾ ಸಮಾರಂಭ ನಿವೃತ್ತರ ಸೇವೆ, ಅನುಭವ ಸಮಾಜಕ್ಕೆ ಸದಾ ಮಾರ್ಗದರ್ಶಿ: ಮಹಾದೇವಪ್ಪ ಮೂಲಿಮನಿ
ಕುಕನೂರು 27: ನಿವೃತ್ತ ನೌಕರರು ತಮ್ಮ ಬದುಕಿನ ಅಮೂಲ್ಯ ವರ್ಷಗಳನ್ನು ಸಮಾಜದ ಸೇವೆಗೆ ಅರ್ಿಸಿದ್ದು, ಅವರ ಅನುಭವ ಮತ್ತು ಮಾರ್ಗದರ್ಶನ ಇಂದಿನ ಯುವಜನತೆಗೆ ಪ್ರೇರಣೆಯಾಗಬೇಕು ಎಂದು ಹಿರಿಯರಾದ ಮಹಾದೇವಪ್ಪ ಮೂಲಿಮನಿ ಹೇಳಿದರು.
ಅವರು ಕುಕನೂರು ತಾಲೂಕಿನ ತಳಕಲ್ ಗ್ರಾಮದ ಮುಂಡರಗಿ ಅನ್ನದಾನೀಶ್ವರ ಶಾಖಾಮಠದಲ್ಲಿ ಜಗದ್ಗುರು ಅನ್ನದಾನೀಶ್ವರ ಸೇವಾ ಸಮಿತಿ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ನಿವೃತ್ತ ನೌಕರರ ಅಭಿನಂದನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದವರನ್ನು ಗುರುತಿಸಿ ಗೌರವಿಸುವುದು ಮಠದ ಸಾಮಾಜಿಕ ಬದ್ಧತೆಯಾಗಿದೆ. ಮಠವೆಂದರೆ ಕೇವಲ ಧಾರ್ಮಿಕ ಚಟುವಟಿಕೆಗಳಿಗೆ ಸೀಮಿತವಾಗದೆ, ಸಮಾಜದ ಎಲ್ಲ ವರ್ಗದ ಜನರನ್ನು ಒಗ್ಗೂಡಿಸುವ ಹಾಗೂ ಹಿರಿಯರ ಸೇವೆ ಮತ್ತು ಸಾಧನೆಗಳನ್ನು ಗೌರವಿಸುವ ಕೇಂದ್ರವಾಗಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ನಿವೃತ್ತ ನೌಕರರಾದ ಎ.ಪಿ. ಮುದೋಳ ಮಾತನಾಡಿ, ಸರ್ಕಾರಿ ಸೇವೆಯಲ್ಲಿದ್ದಾಗ ಎದುರಿಸಿದ ಸವಾಲುಗಳು, ಕರ್ತವ್ಯ ನಿರ್ವಹಣೆಯ ಅನುಭವ ಹಾಗೂ ನಿವೃತ್ತಿಯ ನಂತರದ ಬದುಕಿನ ಕುರಿತು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ನಿವೃತ್ತಿಯ ನಂತರವೂ ವ್ಯಕ್ತಿ ಕ್ರಿಯಾಶೀಲವಾಗಿ ಬದುಕಬೇಕು.
ಕುಟುಂಬಕ್ಕೆ ಸಮಯ ನೀಡುವುದರ ಜೊತೆಗೆ ಸಮಾಜದ ಒಳಿತಿಗಾಗಿ ತಮ್ಮ ಅನುಭವ ಮತ್ತು ಜ್ಞಾನವನ್ನು ಬಳಸಿಕೊಳ್ಳಬೇಕು. ನಿವೃತ್ತಿ ಜೀವನವನ್ನು ಹೊಸ ಆಸಕ್ತಿ ಮತ್ತು ಉತ್ಸಾಹದಿಂದ ಮುನ್ನಡೆಸಬೇಕು ಎಂದು ಹೇಳಿದರು. ನಿವೃತ್ತ ಪ್ರಾಚಾರ್ಯರಾದ ಡಾ. ಫಕೀರ್ಪ ವಜ್ರಬಂಡಿ ಮಾತನಾಡಿ, ವೃತ್ತಿಜೀವನದಲ್ಲಿ ಶಿಸ್ತು, ಸಮಯಪ್ರಜ್ಞೆ,
ಪ್ರಾಮಾಣಿಕತೆ ಹಾಗೂ ನಿರಂತರ ಕಲಿಕೆ ಅತ್ಯಂತ ಮುಖ್ಯ. ಉದ್ಯೋಗದ ಅವಧಿಯಲ್ಲಿ ಗಳಿಸಿದ ಅನುಭವಗಳು ನಿವೃತ್ತಿಯ ನಂತರವೂ ವ್ಯಕ್ತಿಯ ಬದುಕಿಗೆ ದಾರೀದೀಪವಾಗುತ್ತವೆ. ಶಿಕ್ಷಕ ವೃತ್ತಿ ಸೇರಿದಂತೆ ಪ್ರತಿಯೊಂದು ವೃತ್ತಿಯೂ ಸಮಾಜ ನಿರ್ಮಾಣದಲ್ಲಿ ತನ್ನದೇ ಆದ ಮಹತ್ವ ಹೊಂದಿದೆ.
ನಿವೃತ್ತರಾದವರು ತಮ್ಮ ಅನುಭವವನ್ನು ಮುಂದಿನ ಪೀಳಿಗೆಗೆ ಹಂಚುವ ಮೂಲಕ ಸಮಾಜಕ್ಕೆ ಮಾರ್ಗದರ್ಶನ ನೀಡಬೇಕು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಗ್ರಾಮದ 18 ಜನ ನಿವೃತ್ತ ನೌಕರರನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಪೂಜ್ಯ ಮಹಾದೇವ ಸ್ವಾಮೀಜಿ, ಶಾಂತ, ನಿಂಗಮ್ಮ, ಕೊಟ್ರ್ಪ ಗಡಿಗಿ,
ಜಗದೀಶ ಕರ್ಕಿಹಳ್ಳಿ, ಶಿವಲಿಂಗಪ್ಪ ಪಟ್ಟೆದ, ಯಲ್ಲಪ್ಪ ನಡುಲಮನಿ, ಸಂಗಪ್ಪ ದೇವಕಿ, ನಿಂಗಪ್ಪ ಮೇಟಿ, ನಿಂಗಪ್ಪ ಹೆಳವಾರ, ಶಂಕ್ರ್ಪ ಮೇಟಿ, ಭರಮಪ್ಪ ಡಬ್ಬಿ, ಶಂಕ್ರ್ಪ ಬೀಮರೆಡ್ಡಿ, ಸಂಗನಗೌಡ್ರ ಪಾಟೀಲ, ಶಂಕರಗೌಡ್ರ, ಮಲ್ಲಿಕಾಸಾಬ್ ತಳಬಾಳ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.