ಕುಕನೂರ್

ಬಸವಣ್ಣನವರ ವ್ಯಕ್ತಿತ್ವಕ್ಕೆ ಅಪಮಾನ ಸಲ್ಲದು; ವಚನ ಸಾಹಿತ್ಯದ ಘನತೆ ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿ: ಪೂಜ್ಯ ಮಹಾದೇವ ಸ್ವಾಮೀಜಿ

ಬಸವಣ್ಣನವರ ವ್ಯಕ್ತಿತ್ವಕ್ಕೆ ಅಪಮಾನ ಸಲ್ಲದು; ವಚನ ಸಾಹಿತ್ಯದ ಘನತೆ ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿ: ಪೂಜ್ಯ ಮಹಾದೇವ ಸ್ವಾಮೀಜಿ
Basavanna’s personality must not be insulted; it is the responsibility of us all to uphold the digni

            ಕುಕನೂರ 22:  ಬಸವಣ್ಣನವರ ವ್ಯಕ್ತಿತ್ವಕ್ಕೆ ಅಪಮಾನ ಸಲ್ಲದು; ವಚನ ಸಾಹಿತ್ಯದ ಘನತೆ ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿ ಕುಕನೂರಿನ ಪೂಜ್ಯ ಮಹಾದೇವ ಸ್ವಾಮೀಜಿ ಪತ್ರಿಕಾ ಹೇಳಿಕೆ. 12ನೇ ಶತಮಾನದಲ್ಲಿ ಜಗತ್ತಿಗೆ ಸಮಾನತೆ, ಕಾಯಕ, ದಾಸೋಹ, ಮಾನವೀಯತೆ ಹಾಗೂ ಸಾಮಾಜಿಕ ನ್ಯಾಯದ ಮಹತ್ವವನ್ನು ಸಾರಿದ ಮಹಾನ್ ಮಾನವತಾವಾದಿ, ವಿಶ್ವಗುರು ಬಸವಣ್ಣನವರು ನಮ್ಮ ನಾಡಿನ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಪರಂಪರೆಯ ಅಮೂಲ್ಯ ರತ್ನವಾಗಿದ್ದಾರೆ.

           ಅವರ ವಚನಗಳು ಕೇವಲ ಒಂದು ಧರ್ಮ ಅಥವಾ ಸಮುದಾಯಕ್ಕೆ ಸೀಮಿತವಾಗಿರದೆ ಇಡೀ ಮಾನವಕುಲಕ್ಕೆ ದಾರೀದೀಪವಾಗಿವೆ.ಇತ್ತೀಚೆಗೆ ಲೇಖಕ ರವಿ ಹಂಜ್ ಅವರ ’ಬಸವ ಮಂಟಪ’ ಕೃತಿಗೆ ಸಂಬಂಧಿಸಿದಂತೆ ಉಂಟಾಗಿರುವ ವಿವಾದ ನಮ್ಮೆಲ್ಲರ ಗಮನ ಸೆಳೆದಿದೆ. ಬಸವಣ್ಣನವರ ಜೀವನ, ವ್ಯಕ್ತಿತ್ವ, ತತ್ವಾದರ್ಶಗಳು ಹಾಗೂ ಶರಣ ಪರಂಪರೆಯ ಕುರಿತು ಬರೆಯುವಾಗ ಲೇಖಕರು ಅತ್ಯಂತ ಜವಾಬ್ದಾರಿ ಮತ್ತು ಸಂಯಮದಿಂದ ನಡೆದುಕೊಳ್ಳಬೇಕು.  

            ಸಂಶೋಧನೆ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಸಮಾಜದ ಮಹಾನ್ ವ್ಯಕ್ತಿಗಳ ಘನತೆ, ಗೌರವ ಹಾಗೂ ಕೋಟ್ಯಂತರ ಜನರ ಭಾವನೆಗಳಿಗೆ ಧಕ್ಕೆ ತರುವಂತಹ ವಿಚಾರಗಳನ್ನು ಸಮರ್ಥಿಸಲು ಸಾಧ್ಯವಿಲ್ಲ.ಬಸವಣ್ಣನವರು ಜಾತಿ, ಮತ, ವರ್ಗಗಳ ಬೇಧವನ್ನು ಮೀರಿ ಮನುಷ್ಯರೆಲ್ಲರೂ ಸಮಾನರು ಎಂಬ ಸಂದೇಶ ಸಾರಿದವರು.

             ಅನುಭವ ಮಂಟಪದ ಮೂಲಕ ವಿಚಾರ ವಿನಿಮಯಕ್ಕೆ ವೇದಿಕೆ ಕಲ್ಪಿಸಿದವರು. ಕಾಯಕವೇ ಕೈಲಾಸ, ದಾಸೋಹವೇ ಧರ್ಮ ಎಂಬ ಉದಾತ್ತ ತತ್ವಗಳನ್ನು ಜಗತ್ತಿಗೆ ಪರಿಚಯಿಸಿದವರು. ಅಂಥ ಮಹಾನ್ ಶರಣರ ಕುರಿತು ಯಾವುದೇ ಕೃತಿ ರಚಿಸುವಾಗ ವಚನ ಸಾಹಿತ್ಯ, ಐತಿಹಾಸಿಕ ದಾಖಲೆಗಳು ಮತ್ತು ಸಂಶೋಧನಾ ಆಧಾರಗಳಿಗೆ ಮಹತ್ವ ನೀಡಬೇಕು. 


ಸುದ್ದಿ ಓದಿ