ಕೊಪ್ಪಳ

ಮಾದಿನೂರಿನಲ್ಲಿ ಕೋತಿಗಳ ಕಾಟ: ಅರಣ್ಯ ಇಲಾಖೆ ನಿಗಾವಹಿಸಲಿ

ಮಾದಿನೂರಿನಲ್ಲಿ ಕೋತಿಗಳ ಕಾಟ: ಅರಣ್ಯ ಇಲಾಖೆ ನಿಗಾವಹಿಸಲಿ


          ಕೊಪ್ಪಳ 27:  ಕೊಪ್ಪಳ ತಾಲೂಕಿನ ಮಾದಿನೂರು ಗ್ರಾಮದಲ್ಲಿ ಕೋತಿಗಳ ಹಾವಳಿ ಹೆಚ್ಚಾಗಿದ್ದು. ಇದರಲ್ಲಿ ಒಂದು ಕೋತಿಗೆ ಹುಚ್ಚು ಹಿಡಿದಂತೆ ಕಿರುಚುತ್ತ ಓಡಾಡುತ್ತಿದ್ದು. ಇತ್ತೀಚಿಗೆ ಎರಡನೇ ಬಾರಿ ರಮೇಶ್ ಶಿವಸಂಗಪ್ಪ ಗೋನಾಳ್ ಎಂಬುವರಿಗೆ ಮಂಗವು ಬಲವಾಗಿ ಕಚ್ಚಿದ್ದು ಬಹಳಷ್ಟು ಗಾಯಗಳು ಆಗಿದ್ದು. ಇದರಿಂದ ಮಾದಿನೂರು ಗ್ರಾಮದ ಸಾರ್ವಜನಿಕರಲ್ಲಿ  ಆತಂಕವು ಉಂಟಾಗಿದೆ. ಜನರನ್ನು ಕಚ್ಚುತ್ತಾ ಇರುವುದರಿಂದ ಮಹಿಳೆ ಮತ್ತು ಮಕ್ಕಳು ಭಯಭೀತರಾಗಿದ್ದಾರೆ. 

           ಅರಣ್ಯ ಇಲಾಖೆ ಈ ಕೋತಿಯನ್ನು ಬಂಧಿಸಿ ಹಿಡಿದು ಸ್ಥಳಾಂತರ ಮಾಡಿ ಜನರಿಗೆ ಇರುವ ಭೀತಿಯನ್ನು ತೊಲಗಿಸಬೇಕಾಗಿದೆ. ಕಾರಣ ಕೊಪ್ಪಳ ಜಿಲ್ಲೆಯ ಅರಣ್ಯ ಇಲಾಖೆ ಮತ್ತು ಸಿಬ್ಬಂದಿ ವರ್ಗ ತುರ್ತು ಕ್ರಮ ಕೈಗೊಳ್ಳಬೇಕಾಗಿದೆ ಎಂದುಮಾದಿನೂರು ಗ್ರಾಮದ ಸಾರ್ವಜನಿಕರು ಆಗ್ರಹಿಸಿದ್ದಾರೆ.   ಇದಲ್ಲದೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ತಾಲೂಕ ಪಂಚಾಯತ್ ಮತ್ತು ಜಿಲ್ಲಾ ಪಂಚಾಯತ್ ಅಧಿಕಾರಿಗಳು ಹುಚ್ಚು ಹಿಡಿದಂತೆ.

               ಕಾಣುತ್ತಿರುವ ಕೋತಿಯು ಜನರನ್ನು ಕಚ್ಚುತ್ತಿರುವುದಿಂದ ಜನರಲ್ಲಿ ಆಗಿರುವ ಭಯ ಭೀತಿಯನ್ನು ದೂರ ಮಾಡಲು ಅರಣ್ಯ ಇಲಾಖೆ ಗಳು ಮಾದನೂರು ಗ್ರಾಮದ ಸಾರ್ವಜನಿಕರಾದ ಸೋಮಣ್ಣ ಆಡೂರು, ಬಸವ ರೆಡ್ಡಿ ಗೋನಾಳ್‌. ಈರಣ್ಣ ಆಡೂರು, ಹನುಮಂತಪ್ಪ ಹವಣ್ಣಿ ರಾಮಣ್ಣ  ಗಡ್ಡದ ಬಸಣ್ಣ ಗಡ್ಡದ ಮೊದಲಾದವರು ಆಗ್ರಹಿಸಿದ್ದಾರೆ. 


ಸುದ್ದಿ ಓದಿ