ದುಪದಾಳ ಸರ್ಕಾರಿ ಶಾಲೆಯಲ್ಲಿ ಸಂತ ಕನಕದಾಸರ ಜಯಂತಿ ಆಚರಣೆ
ಘಟಪ್ರಭಾ 27 ; ಸಮೀಪದ ದೂಪದಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಉನ್ನತಿಕರಿಸಿದ ಪ್ರೌಢಶಾಲೆಯಲ್ಲಿ ಶ್ರೇಷ್ಠ ಸಂತ ಕನಕದಾಸರ ಜಯಂತಿ ವಿಜೃಂಭಣೆಯಿಂದ ಆಚರಿಸಣೆ ಮಾಡಲಾಯಿತು ಕಾರ್ಯಕ್ರಮ ಉದ್ದೇಶಿಸಿ ಕರವೇ ಜಿಲ್ಲಾಧ್ಯಕ್ಷರು ರೈತ ಘಟಕ ರೆಹಮಾನ್ ಮೊಕಾಶಿ ಕರವೇ ತಾಲೂಕು ಅದ್ಯಕ್ಷ ಶೆಟ್ಟೆಪ್ಪಾ ಗಾಡಿವಡ್ಡರ ಎಸ್ ಡಿ ಎಮ್ ಸಿ ಉಪಾಧ್ಯಕ್ಷ ರವಿ ನಾವಿ ಮಾತನಾಡಿ ಕುಲ ಕುಲ ಎಂದು ಹೊಡೆದಾಡದಿರಿ ಹುಚ್ಚಪ್ಪಗಳಿರಾ ಕುಲದ ನೆಲೆ ಬಲ್ಲಿರೆನು? ಬಿಸುವ ಗಾಳಿಗೆ ಕುಲವಿಲ್ಲ ಹರಿಯುವ ನೀರಿಗೆ ಕುಲ ಇಲ್ಲ ಸೂರ್ಯ ನಿಗೆ ಕುಲ ಇಲ್ಲ ನಿವೇಕೆ ಕುಲ ಎಂದು ಹೊಡದಾಡುವಿರಿ ಎಲ್ಲರೂ ಕೂಡಿ ಬಾಳೋಣ ಎಂದು ತಮ್ಮ ಭಾಷಣದಲ್ಲಿ ಹೇಳಿದರು.
ಈ ಸಂಧರ್ಭದಲ್ಲಿ ಎಸ್ ಡಿ ಎಮ್ ಸಿ ಅದ್ಯಕ್ಷ ಮುತ್ತೆಪ್ಪ ಮಲ್ಲಾಪೂರ ಕರೆಪ್ಪ ಧರ್ಮಟ್ಟಿ,ಲಾಜೀಂ ಮೊಕಾಶಿ,ರಾಘವೇಂದ್ರ ಧರ್ಮಟ್ಟಿ,ಮುಖ್ಯ ಗುರುಮಾತೆ ಪಾಟೀಲ ಟೀಚರ್, ಗೀತಾ ಹಂಚಿನಮನಿ, ನಿರ್ಮಲಾ ಭಾಗಿ, ಪ್ರಸಾದ ಟೀಚರ್, ಗೀತಾ ರಾಥೋಡ್, ಮುತ್ತಪ್ಪ ರೆಡ್ಡಿ ಸೇರಿದಂತೆ ಹಲವಾರು ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು