ಮಹಾರಾಣಾ ಶಿಕ್ಷಣ ಸಂಸ್ಥೆಯಲ್ಲಿ ಕನಕದಾಸರ ಜಯಂತಿ ಆಚರಣೆ
ಲೋಕದರ್ಶನ ವರದಿ
ಬೆಟಗೇರಿ 27 : ಇಲ್ಲಿಯ ಮಹಾರಾಣಾ ಪ್ರತಾಪಸಿಂಹ ಶಿಕ್ಷಣ ಸಂಸ್ಥೆಯಲ್ಲಿ ಇಂದು 27 ರ ಶುಕ್ರವಾರ ಕನಕದಾಸರ ಜಯಂತಿ ಆಚರಿಸಲಾಯಿತು. ಆದರ ಅಂಗವಾಗಿ ಕನಕ ದಾಸರ ಭಾವಚಿತ್ರಕ್ಕೆ ಸಂಸ್ಥೆಯ ಸಂಸ್ಥಾಪಕ ಗಣೇಶಸಿಂಗ್ ಬ್ಯಾಳಿ ಪೂಜೆ ಸಲ್ಲಿಸಿ ಕನಕದಾಸರ ಮತ್ತು ಅವರ ಕೀರ್ತನೆಗಳನ್ನು ಕುರಿತು ಮಾತನಾಡಿದರು.
ಈ ಸಂದರ್ಭದಲ್ಲಿ ಪ್ರಾಚಾರ್ಯರಾದ ಎಸ್.ಎಂ. ಉಳ್ಳಾಗಡ್ಡಿ ಸೇರಿದಂತೆ ಸಮಸ್ತ ಸಿಬ್ಬಂದಿ ಹಾಗೂ ವಿದ್ಯಾರ್ಥಿ ವೃಂದದವರು ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ಡಿ.ಎಸ್. ನಾಯಕ ಸ್ವಾಗತಿಸಿ ಕೊನೆಯಲ್ಲಿ ಐ.ಎಸ್. ಅಂಗಡಿ ವಂದಿಸಿದರು.