ವಿಜಯಪುರ

ಜನತಾದಳ ಜ್ಯಾತ್ಯಾತೀತ್ ವಿಜಯಪುರ ಕಾರ್ಯಾಲಯದಲ್ಲಿ ಕನಕದಾಸರ ಜಯಂತಿ ಆಚರಣೆ

ಜನತಾದಳ ಜ್ಯಾತ್ಯಾತೀತ್ ವಿಜಯಪುರ ಕಾರ್ಯಾಲಯದಲ್ಲಿ ಕನಕದಾಸರ ಜಯಂತಿ ಆಚರಣೆ


         ವಿಜಯಪುರ 27  : ಇಂದು ದಿನಾಂಕ 27/11/2026 ರಂದು ಬೆಳಗ್ಗೆ ಜಿಲ್ಲಾ ಜನತಾದಳ ಜ್ಯಾತ್ಯಾತೀತ್ ವಿಜಯಪುರ ಕಾರ್ಯಾಲಯದಲ್ಲಿ ದಾಸ್ ಶ್ರೇಷ್ಠರಾದಂತಹ  ಕನಕದಾಸರ ಜಯಂತಿಯನ್ನು ಆಚರಿಸಲಾಯಿತು. 

             ಇದೆ ಸಂದರ್ಭದಲ್ಲಿ  ರಾಜು ಹಿಪ್ಪರಗಿ ಮಾತನಾಡಿ, ಕನಕದಾಸ ಜಯಂತಿಯು ಸಂತ ಹಾಗೂ ಮಹಾಕವಿಯಾದ ಕನಕದಾಸರ ಜನ್ಮ ದಿನವಾಗಿದೆ. ಕನಕದಾಸರು ಕರ್ನಾಟಕದ ಶ್ರೇಷ್ಠ ಸಮಾಜ ಸುಧಾರಕರಲ್ಲಿ ಒಬ್ಬರಾಗಿದ್ದರು. ತಮ್ಮ ಕೀರ್ತನೆ, ಸಂಗೀತಗಳ ಮೂಲಕ ಮನೆಮಾತಾಗಿದ್ದಾರೆ.

            ಪ್ರತೀ ವರ್ಷವೂ ಕನಕದಾಸ ಜಯಂತಿಯನ್ನು ಆಚರಿಸುವಂತೆ ಈ ವರ್ಷವೂ ಕನಕದಾಸ ಜಯಂತಿಯನ್ನು ಆಚರಿಸಲಾಯಿತು ಕನಕದಾಸ ಜಯಂತಿ ಜಯಂತಿಯು 526ನೇ ಕನಕದಾಸ ಜಯಂತಿಯಾಗಿದೆ. ಹರಿದಾಸ ಸಾಹಿತ್ಯ ಪರಂಪರೆಯೊಂದಿಗೆ ಸಂಬಂಧವನ್ನು ಹೊಂದಿದ ಕನಕದಾಸರು ಶ್ರೀಕೃಷ್ಣ ಹಾಗೂ ವಿಷ್ಣುವಿನ ಪರಮ ಭಕ್ತರಾಗಿದ್ದರು.

              ಅವರು ಅಂದು ರಚಿಸಿದಂತಹ ಸ್ತುತೀಗೀತೆಗಳನ್ನು ಜನರು ಇಂದಿಗೂ ತಮ್ಮ ಜೀವನದಲ್ಲಿ ಪಾಲಿಸಿಕೊಂಡು ಬರುತ್ತಿದ್ದಾರೆ. ಕನಕದಾಸರು ತಮ್ಮ ಬಾಲ್ಯದಿಂದಲೇ ಅನಿಷ್ಟ ಜಾತಿ ಪದ್ಧತಿ ಮತ್ತು ಅಸ್ಪೃಶ್ಯತೆಯ ಕಠೋರ ಪರಿಣಾಮಗಳನ್ನು ಅನುಭವಿಸಬೇಕಾಯಿತು.

                ಅವರು ತಮ್ಮ ಕವಿತೆಗಳ ಮೂಲಕ ಈ ಸಾಮಾಜಿಕ ಪಿಡುಗುಗಳ ವಿರುದ್ಧ ಹೋರಾಡಿದರು. ತಮ್ಮ ಕೃತಿಗಳಲ್ಲಿ ಬಾಹ್ಯ ಆಚರಣೆಗಳ ನಿರರ್ಥಕತೆಯನ್ನು ಎತ್ತಿ ತೋರಿಸಿದ ಅವರು, ಜೀವನದಲ್ಲಿ ನೈತಿಕ ಮೌಲ್ಯಗಳನ್ನು ಬೆಳೆಸಿಕೊಳ್ಳುವ ಅಗತ್ಯತೆಗಳಿಗೆ ವಿಶೇಷ ಮಹತ್ವವನ್ನು ನೀಡಿದರು. 

             ಈ ಸಂದರ್ಭ ಜೆಡಿಎಸ್ ವಕ್ತಾರರು ಶ್ರೀ ಎಸ್ ಎಸ್ ಖಾದ್ರಿ ಇನಾಮದಾರ್ ಮಾತನಾಡಿ, ಕನಕದಾಸರು ಸುಮಾರು 200 ರಿಂದ 240 ಕೃತಿಗಳನ್ನು ರಚಿಸಿದ್ದಾರೆ ಎಂದು ಹೇಳಲಾಗುತ್ತದೆ. ಇವುಗಳಲ್ಲದೆ, ಅವರು ಐದು ಸುದೀರ್ಘ ಕೃತಿಗಳನ್ನು ಸಹ ರಚಿಸಿದ್ದಾರೆ.

               ಅವರ ಸಾಹಿತ್ಯವು ಜಾತಿ ಅಹಂಕಾರ ಮತ್ತು ಅರ್ಥಹೀನ ಆಚರಣೆಗಳನ್ನು ಪ್ರಶ್ನಿಸುತ್ತದೆ ಹಾಗೂ ನಿಷ್ಕಪಟ ಭಕ್ತಿಗೆ ಅಗ್ರಸ್ಥಾನ ನೀಡುತ್ತದೆ. ಇದೇ ಕಾರಣಕ್ಕಾಗಿ ಅವರನ್ನು ಒಬ್ಬ ಸಂತ ಮತ್ತು ಸಮಾಜ ಸುಧಾರಕರೆಂದು ಕರೆಯಲಾಗುತ್ತದೆ ಎಂದು ಹೇಳಿದರು. 


ಸುದ್ದಿ ಓದಿ