ರಾಜ್ಯಮಟ್ಟದ ಯುವ ಸಂಸತ್ತು ಗಾಯಿತ್ರಿ ಭಾವಿಕಟ್ಟಿ 7ನೇ ಸ್ಥಾನ
ಲೋಕದರ್ಶನ ವರದಿ
ಹೂವಿನಹಡಗಲಿ 27 : ಮೈಸೂರಿನಲ್ಲಿ ನಡೆದ ರಾಜ್ಯಮಟ್ಟದ ಯುವಸಂಸತ್ತು ಸ್ಪರ್ಧೆಯಲ್ಲಿ ರಾಜ್ಯದ 31 ಜಿಲ್ಲೆಗಳ 224 ಪ್ರತಿನಿಧಿಗಳ ನಡುವೆ ತೀವ್ರ ಪೈಪೋಟಿ ನೀಡಿ, ಟಾಪ್ ಹತ್ತರ ಸ್ಥಾನಗಳಲ್ಲಿ ಜಿಲ್ಲೆಗೆ ಏಳನೇ ಸ್ಥಾನವನ್ನು ಗಾಯತ್ರಿ ಬಾವಿಕಟ್ಟಿ ಪಡೆದಿದ್ದಾರೆ.ತಾಲೂಕಿನ ಹೊಳಗುಂದಿಯ ಜೆ.ಎಸ್.ಎಸ್. ಶಿಕ್ಷಣ ಮಹಾವಿದ್ಯಾಲಯದ ವಿದ್ಯಾರ್ಥಿನಿ ಕು. ಗಾಯಿತ್ರಿ ಭಾವಿಕಟ್ಟಿ ಅವರು ಜಿಲ್ಲೆಗೆ ಹಾಗೂ ಕಾಲೇಜಿಗೆ ಕೀರ್ತಿ ತಂದಿದ್ದಾರೆ.
ಸಂಸದೀಯ ಕಲಾಪಗಳ ವಿಷಯ ಮಂಡನೆ ಹಾಗೂ ಚರ್ಚೆಯಲ್ಲಿ ಅತ್ಯುತ್ತಮ ವಾಕ್ಚಾತುರ್ಯ ಪ್ರದರ್ಶಿಸಿ ಗಮನ ಸೆಳೆದ ಇವರು, ರಾಜ್ಯಮಟ್ಟದಲ್ಲಿ ಜಿಲ್ಲೆಯ ಗೌರವವನ್ನು ಎತ್ತಿಹಿಡಿದಿದ್ದಾರೆ.ವಿದ್ಯಾರ್ಥಿನಿಯ ಈ ಅಮೋಘ ಸಾಧನೆಗೆ ಕಾಲೇಜಿನ ಪ್ರಾಂಶುಪಾಲ ಡಾ. ಹೆಚ್. ಪಿ. ರಮೇಶ್, ಯುವ ಸಂಸತ್ತು ಸಂಚಾಲಕ ಮಾರ್ಗದರ್ಶಕ ಭಾಸ್ಕರ್ ನಂದಿ ಹಾಗೂ ಉಪನ್ಯಾಸಕರಾದ ಕೆ ಭೋಜರಾಜ, ನೆಪೋಲಿಯನ್, ಡಾ ಎಂ ಪಿ ಎಂ ಮಂಜುನಾಥ ಅಶೋಕ್ ಈಡಿಗರ, ನಾಗರಾಜ್ ಎ ಕೆ ಇತರರು ಅಭಿನಂದಿಸಿದ್ದಾರೆ.