ಹೂವಿನ ಹಡಗಲಿ

ಧರ್ಮಸ್ಥಳ ಸಂಸ್ಥೆಯಿಂದ ಬಡ ಮಹಿಳೆಗೆ ಮನೆ ಹಸ್ತಾಂತರ

ಧರ್ಮಸ್ಥಳ ಸಂಸ್ಥೆಯಿಂದ ಬಡ ಮಹಿಳೆಗೆ ಮನೆ ಹಸ್ತಾಂತರ

ಲೋಕದರ್ಶನ ವರದಿ  

          ಹೂವಿನಹಡಗಲಿ   ನ.25-  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ  ವತಿಯಿಂದ ನಿರ್ಗತಿಕರು ಮತ್ತು ಅಸಹಾಯಕ ಕುಟುಂಬಗಳಿಗಾಗಿ ’ವಾತ್ಸಲ್ಯ’ ಕಾರ್ಯಕ್ರಮದಡಿ ತಾಲೂಕಿನ ಹೊಳಗುಂದಿ ಗ್ರಾಮದ ನಿಜಲಿಂಗಪ್ಪ ನಗರದಲ್ಲಿ  ಬಡ ಮಹಿಳೆಗೆ 1.50 ಲಕ್ಷ ವೆಚ್ಚದಲ್ಲಿ ಉಚಿತವಾಗಿ ಸುಸಜ್ಜಿತ ನೂತನ ಮನೆಯನ್ನು  ಸಂಸ್ಥೆಯ ಪ್ರಾದೇಶಿಕ ನಿರ್ದೇಶಕ  ಚಂದ್ರಶೇಖರ , ಜಿಲ್ಲಾ ನಿರ್ದೇಶಕ ಸತೀಶ್ ಶೆಟ್ಟಿ  ಅವರು ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರ 79ನೇ ಹುಟ್ಟು ಹಬ್ಬದ ನಿಮಿತ್ತ ಬುಧವಾರ  ಹಸ್ತಾಂತರಿಸಿದರು.

             ಬಳಿಕ ಮಾತನಾಡಿದ  ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ದಂಪತಿ ಆರ್ಥಿಕ ಹಿಂದುಳಿದ ಬಡ ನಿರ್ಗತಿಕರಿಗೆ ಮನೆ ನಿರ್ಮಿಸಿಕೊಡಲಾಗುತ್ತದೆ ಜತೆಗೆ ಧೈರ್ಯ ತುಂಬುವ ಕೆಲಸ  ಮಾಡುತ್ತಿದ್ದು, ಬಡವರಿಗೆ ಆಸರೆಯಾಗಿದ್ದಾರೆ’ ಎಂದರು. ಇದೇ ವೇಳೆ  ಗ್ರಾಮದ ಮುಖಂಡರಾದ ಕೆ.ಎಸ್‌. ಶಾಂತನಗೌಡ, ಕರಿಬಸಪ್ಪ, ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರಾದ ಸಂತೋಷ . ಜೈನ್, ಕೋಡಿಹಳ್ಳಿ ಕೊಟ್ರೇಶ್ , ಶಿವರಾಜ್, ಸುಭಾಷ್ ವರಕನಹಳ್ಳಿ  ಭರತೇಶ್ ಬಸ್ತಿ, ಚಂದ್ರ​‍್ಪ ತಳಕಲ್ , ಸಂಸ್ಥೆಯ ಯೋಜನಾಧಿಕಾರಿ ಸುಬ್ರಮಣ್ಯ ,ಸಂಸ್ಥೆಯ ಸಿಬ್ಬಂದಿ,ಗ್ರಾ.ಪಂ.ಮಾಜಿ ಅದ್ಯಕ್ಷ ಧನರಾಜ,ಮಾಜಿ ಸದಸ್ಯ ಸ್ವರೂಪಾನಂದ ಇದ್ದರು.

               ಆಹಾರ ಕಿಟ್ ವಿತರಣೆ : ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರ 79ನೇ ಹುಟ್ಟು ಹಬ್ಬದ ನಿಮಿತ್ತ ಬುಧವಾರ ಪಟ್ಟಣದ ಸಂಕಲ್ಪ ಸಂಸ್ಥೆ ಹಾಗೂ ಶ್ರೀ ಎಂ.ಪಿ ಪ್ರಕಾಶ ಸಮಾಜ  ಮುಖಿ ಟ್ರಸ್ಟ್‌ ವತಿಯಿಂದ ನಡೆಸುತ್ತಿರುವ ಬುದ್ಧಿಮಂದ ಮಕ್ಕಳ ಶಾಲೆಯಲ್ಲಿ ಕೇಕ್ ಕಟ್ ಮಾಡಿಸುವುದರ ಮುಖಾಂತರ ಮಕ್ಕಳಿಗೆ ಒಂದು ತಿಂಗಳ ಆಹಾರದ ಪದಾರ್ಥಗಳನ್ನು ಸಂಸ್ಥೆಯ ವತಿಯಿಂದ ನೀಡಲಾಯಿತು,

             ಕಿರಾಣಿ ವರ್ತಕರ ಸಂಘದ ಅಧ್ಯಕ್ಷರಾದ ಎಸ್‌.ಎಂ.ಎನ್‌.  ಅಶೋಕ ಹಾಗೂ ಸಂಕಲ್ಪ ಸಂಸ್ಥೆಯ  ಮುಖ್ಯಸ್ಥರಾದ ಶ್ರೀಮತಿ ಮಂಜುಳಾ ಅವರು ಸಂಸ್ಥೆಯ ಪದಾಧಿಕಾರಿಗಳು,  ಯೋಜನಾಧಿಕಾರಿ ಮಂಜುನಾಥ್  ಇದ್ದರು. ಹಣ್ಣು ಹಂಪಲ ವಿತರಣೆ :  ಪಟ್ಟಣದ ಕೃಪಾಶ್ರಯ ಅನಾಥಾಶ್ರಮದಲ್ಲಿ ವೃದ್ಧರಿಗೆ ಊಟ ಹಾಗೂ ಹಣ್ಣು ಹಂಪಲುಗಳನ್ನು ವಿತರಿಸಲಾಯಿತು. ಸಂಸ್ಥೆಯ ಮುಖ್ಯಸ್ಥರಾದ  ಹಲಿಗೆ ಸುರೇಶ್ ಇದ್ದರು. 


ಸುದ್ದಿ ಓದಿ