ಬೈಲಹೊಂಗಲ

ಡಾ. ವೀರೇಂದ್ರ ಹೆಗ್ಗಡೆಯವರ ಜನ್ಮದಿನದ ಅಂಗವಾಗಿ ನಾಗನೂರು ಸರ್ಕಾರಿ ಆಸ್ಪತ್ರೆಯಲ್ಲಿ ಹಣ್ಣು ಹಂಪಲು ವಿತರಣೆ

ಡಾ. ವೀರೇಂದ್ರ ಹೆಗ್ಗಡೆಯವರ ಜನ್ಮದಿನದ ಅಂಗವಾಗಿ ನಾಗನೂರು ಸರ್ಕಾರಿ ಆಸ್ಪತ್ರೆಯಲ್ಲಿ ಹಣ್ಣು ಹಂಪಲು ವಿತರಣೆ
Distribution of fruits at the Naganuru Government Hospital on the occasion of Dr. Veerendra Heggade’


            ಬೈಲಹೊಂಗಲ 25 : ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ.ಡಿ.ವೀರೇಂದ್ರ ಹೆಗ್ಗಡೆಯವರ 79ನೇ ಜನ್ಮದಿನದ ಅಂಗವಾಗಿ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ  ಬೈಲವಾಡ ವಲಯದ ನಾಗನೂರು ಸರಕಾರಿ ಆಸ್ಪತ್ರೆಯಲ್ಲಿ ಒಳ ರೋಗಿಗಳಿಗೆ ಹಣ್ಣು ಹಂಪಲು ವಿತರಿಸುವ ಮೂಲಕ ಅರ್ಥಪೂರ್ಣವಾಗಿ ಜನ್ಮದಿನವನ್ನು ಆಚರಿಸಲಾಯಿತು. 

               ಈ ಸಂದರ್ಭದಲ್ಲಿ  ಬಾಗೇವಾಡಿ ಯೋಜನಾಧಿಕಾರಿ ಮಾತನಾಡಿ, ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ  ಡಾ.ವೀರೇಂದ್ರ ಹೆಗಡೆಯವರು ಸಮಸ್ತ ಮನುಕುಲದ ಒಳಿತಿಗಾಗಿ ಸದೃಢ ಸಮಾಜಕ್ಕಾಗಿ ಸಲ್ಲಿಸಿದ ಅನೇಕ ಧೀಮಂತ ಸಮಾಜ ಸೇವೆಗಳ ದ್ಯೋತಕವಾಗಿ ದಿನಾಂಕ 25 ರಂದು ಹೆಗ್ಗಡೆಯವರ ಜನ್ಮದಿನದ ಪ್ರಯುಕ್ತ ವಿಶೇಷವಾಗಿ ಸೇವಾ ದಿನ ಆಚರಣೆ ಮಾಡಲಾಯಿತು.                                     ವೀರೇಂದ್ರ ಹೆಗ್ಗಡೆಯವರು ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಹಾಗೂ ಗ್ರಾಮೀಣಾಭಿವೃದ್ಧಿ ಕ್ಷೇತ್ರಗಳಲ್ಲಿ ಸಲ್ಲಿಸುತ್ತಿರುವ ಸೇವೆ ಎಲ್ಲರಿಗೂ ಪ್ರೇರಣಾದಾಯಕವಾಗಿದೆ. ಅವರ ಜನ್ಮದಿನದ ಸ್ಮರಣಾರ್ಥ ಸಮಾಜದ ನಿರ್ಗತಿಕರು, ಹಿರಿಯ ನಾಗರಿಕರು ಹಾಗೂ ಅಶಕ್ತರೊಂದಿಗೆ ಸಂತೋಷ ಹಂಚಿಕೊಳ್ಳುವ ಉದ್ದೇಶದಿಂದ ಈ ಸೇವಾ ಕಾರ್ಯವನ್ನು ಕರ್ನಾಟಕ ರಾಜ್ಯದ ಎಲ್ಲಾ ಜಿಲ್ಲೆ, ಎಲ್ಲಾ ತಾಲೂಕುಗಳಲ್ಲಿ, ವಿಶೇಷ ವಿಕಲಚೇತನ, ಅನಾಥಶ್ರಮ,

                 ವೃದ್ದಾಶ್ರಮ, ಸರಕಾರಿ ಆಸ್ಪತ್ರೆ  ಗಳಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. ನಾಗನೂರು ಸರಕಾರಿ ಆಸ್ಪತ್ರೆಯಲ್ಲಿರುವ ಒಳರೋಗಿಗಳಿಗೆ ಹಣ್ಣು ಹಂಪಲು ವಿತರಿಸಿ, ಅವರ ಯೋಗಕ್ಷೇಮ ವಿಚಾರಿಸಲಾಯಿತು. ಕಾರ್ಯಕ್ರಮದಲ್ಲಿ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಹಿರೇ ಬಾಗೇವಾಡಿ ಯೋಜನಾಧಿಕಾರಿಗಳು,

                ಬೈಲವಾಡ ವಲಯದ ಮೇಲ್ವಿಚಾರಕರು, ಕೃಷಿ ಮೇಲ್ವಿಚಾರಕರು,ಡಾ. ಬಸವಂತ ಕುಂದರನಾಡ , ಹಾಗೂ ದಂತ ವೈದ್ಯರಾದ ಸಾಗರ , ನಾಗನೂರು ಗ್ರಾಮ ಪಂಚಾಯಿತಿ ಮಾಜಿ ಸದಸ್ಯೆ ಬಸವ್ವ ಶಿರಸಂಗಿ, ಸಿದ್ದರಾಮ ಸುಂಕದ ಹಾಗೂ  ಸೇವಾ ಪ್ರತಿನಿಧಿಯವರು  ಉಪಸ್ಥಿತರಿದ್ದರು. 


ಸುದ್ದಿ ಓದಿ