ರಾಯಬಾಗ

ಸಂವಿಧಾನ ಜಾಗೃತಿ ಸಮಾವೇಶಕ್ಕೆ ರಾಜ್ಯಮಟ್ಟದ ಮುಖಂಡರು ಭಾಗಿ

ಸಂವಿಧಾನ ಜಾಗೃತಿ ಸಮಾವೇಶಕ್ಕೆ ರಾಜ್ಯಮಟ್ಟದ ಮುಖಂಡರು ಭಾಗಿ

             ರಾಯಬಾಗ 26: ಸಂವಿಧಾನ ಸಮರಾ​‍್ಣ ದಿನದ ಅಂಗವಾಗಿ ದಲಿತ ಸಂಘರ್ಷ ಸಮಿತಿ ಭೀಮಮಾರ್ಗ ಸಂಘಟನೆಯಿಂದ ನ.29 ರಂದು ಭಾನುವಾರ ಮುಂ.10.30 ಗಂಟೆಗೆ ಪಟ್ಟಣದ ಡಾ.ಬಾಬು ಜಗಜೀವನರಾಂ ಸಭಾಂಗಣದಲ್ಲಿ ಚಿಕ್ಕೋಡಿ ಜಿಲ್ಲಾ ಮಟ್ಟದ ಸಂವಿಧಾನ ಜಾಗೃತಿ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಚಿಕ್ಕೋಡಿ ಜಿಲ್ಲಾ ಸಂಚಾಲಕ ಪರಶುರಾಮ ಟೋನಪೆ ತಿಳಿಸಿದರು. ಗುರುವಾರ ಪಟ್ಟಣದ ಲೋಕೋಪಯೋಗಿ ಇಲಾಖೆ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು,

           ಸಮಾವೇಶದಲ್ಲಿ ರಾಜ್ಯ ಸಂಚಾಲಕ ಡಾ.ಬಿ.ಎನ್‌.ವೆಂಕಟೇಶ, ಕೋರ ಕಮಿಟಿ ಅಧ್ಯಕ್ಷ ಸಿದ್ಧಾರ್ಥ ಸಿಂಗೆ ಹಾಗೂ ರಾಜ್ಯ ಸಂಘಟನಾ ಸಂಚಾಲಕರು, ರಾಜ್ಯ ಸಮಿತಿ ಸದಸ್ಯರು, ರಾಜ್ಯ ಮಹಿಳಾ ಒಕ್ಕೂಟದ ಸದಸ್ಯರು, ಜಿಲ್ಲಾ ಮತ್ತು ತಾಲೂಕು ಪದಾಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು. ಸುದ್ದಿಗೊಷ್ಠಿಯಲ್ಲಿ ಸಿದ್ದಾರ್ಥ ಸಿಂಗೆ, ಸಂಜೀವ ಕಾಂಬಳೆ, ಕೃಷ್ಣಾ ಗಸ್ತಿ, ಲವು ಕಾಂಬಳೆ, ಸಂಗಮೇಶ ಕಾಂಬಳೆ, ಜಯಶ್ರೀ ಛಲವಾದಿ, ಕಾಮಣ್ಣ ಕಾಂಬಳೆ, ಮಿಥುನ ಭಜಂತ್ರಿ, ಭಗವಂತ ಕಾಂಬಳೆ ಇದ್ದರು. 


ಸುದ್ದಿ ಓದಿ