ರಾಯಬಾಗ

ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಕ್ರೀಡೆ ಸಹಕಾರಿ: ಡಾ. ಕಂಬಳೆ

ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಕ್ರೀಡೆ ಸಹಕಾರಿ: ಡಾ. ಕಂಬಳೆ


               ರಾಯಬಾಗ 26: ಅಭಾಜಿಯವರು (ವಿ.ಎಲ್‌.ಪಾಟೀಲ) ವಿದ್ಯಾರ್ಥಿ ಜೀವನದಲ್ಲಿ ಒಬ್ಬ ಒಳ್ಳೆಯ ಕ್ರೀಡಾಪಟುವಾಗಿದ್ದರು,  ಅವರ ಸಾಧನೆ ಹಾದಿಯಲ್ಲಿ ಕ್ರೀಡಾಪಟುಗಳು ಮುನ್ನಡೆಯಬೇಕೆಂದು ಶಿಕ್ಷಣ ಪ್ರಸಾರಕ ಮಂಡಳದ ಅಧ್ಯಕ್ಷ ತ್ರಿಕಾಲ ಪಾಟೀಲ ಕರೆಕೊಟ್ಟರು. ಬುಧವಾರ ಪಟ್ಟಣದ ರಾ.ವಿ.ಸಂಯುಕ್ತ ಪದವಿಪೂರ್ವ ಕಾಲೇಜ ಆವರಣದಲ್ಲಿ ಉಪನಿರ್ದೇಶಕರು ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ಚಿಕ್ಕೋಡಿ ಇವರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ 2026-27ನೇ ಸಾಲಿನ ಚಿಕ್ಕೋಡಿ ಶೈಕ್ಷಣಿಕ ಜಿಲ್ಲಾ ಮಟ್ಟದ ಅಥ್ಲೆಟಿಕ್ಸ್‌ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದ ಅವರು,

                  ವಿದ್ಯಾರ್ಥಿಗಳಲ್ಲಿ ಶಿಸ್ತು, ಸಮಯಪ್ರಜ್ಞೆ ಮತ್ತು ನಾಯಕತ್ವ ಗುಣವನ್ನು ಕ್ರೀಡೆಯಿಂದ ಬರುತ್ತದೆ ಎಂದು ಹೇಳಿದರು. ಎಸ್‌.ಪಿ.ಎಮ್ ಕಾರ್ಯದರ್ಶಿ ಎಸ್‌. ಎಸ್‌. ಶಿಂಗಾಡಿ  ಮಾತನಾಡಿ, ಅಭಾಜಿಯವರ ಕ್ರೀಡಾ ಸಾಧನೆಯನ್ನು ನೆನಪಿಸುತ್ತಾ, ಕ್ರೀಡೆ ಉತ್ತಮ ಜೀವನ ರೂಪಿಸುವಲ್ಲಿ ಮಹತ್ವದ ಪಾತ್ರವಹಿಸುತ್ತದೆ ಎಂದು ತಿಳಿಸಿದರು.  ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಾಚಾರ್ಯ ಡಾ. ಕೆ. ಎಸ್‌. ಕಾಂಬಳೆ ರವರು ಮಾತನಾಡಿ,  ಕ್ರೀಡೆಗಳು ನಮ್ಮ ದೈಹಿಕ ಆರೋಗ್ಯ, ಮಾನಸಿಕ ನೆಮ್ಮದಿ ಮತ್ತು ವ್ಯಕ್ತಿತ್ವ ವಿಕಸನಕ್ಕೆ ದಾರಿ ಮಾಡಿಕೊಡುತ್ತದೆ.

             ಕ್ರೀಡೆಯಿಂದ ಒತ್ತಡ ಹಾಗೂ ಆತಂಕವನ್ನು ಕಡಿಮೆ ಮಾಡಿ ಮನಸ್ಸನ್ನು ಶಾಂತಿವಾಗಿ ಮತ್ತು ಗಮನ ಕೇಂದ್ರಿಕರಿಸಲು ಸಹಾಯಕವಾಗುತ್ತದೆ ಎಂದರು. ಅಂತರರಾಷ್ಟ್ರೀಯ ಯೋಗ ಪಟು ಸಚೀನ ಯಾದವ, ಉಪನ್ಯಾಸಕರಾದ ಪಿ. ಎಂ. ಭೆಂಡೆ, ಎಸ್‌. ಎ. ಬಾಗಿ, ಎಸ್‌. ಎಸ್‌. ಚೌಗುಲೆ, ದೈಹಿಕ ಶಿಕ್ಷಕ ಎಂ. ಎಲ್‌. ಸಿಂಗೆ, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ಕ್ರೀಡಾವಿದ್ಯಾರ್ಥಿಗಳು ಇದ್ದರು. 


ಸುದ್ದಿ ಓದಿ