ರಾಯಬಾಗ

ರಾಯಬಾಗ-ದಿಗ್ಗೇವಾಡಿ ರಸ್ತೆ ಸುಧಾರಣೆ ಕಾಮಗಾರಿಗೆ ಶಾಸಕ ಡಿ.ಎಮ್‌.ಐಹೊಳೆಯವರಿಂದ ಚಾಲನೆ

ರಾಯಬಾಗ-ದಿಗ್ಗೇವಾಡಿ ರಸ್ತೆ ಸುಧಾರಣೆ ಕಾಮಗಾರಿಗೆ ಶಾಸಕ ಡಿ.ಎಮ್‌.ಐಹೊಳೆಯವರಿಂದ ಚಾಲನೆ

             ರಾಯಬಾಗ 25 : ರಾಜ್ಯ ಸರ್ಕಾರ ಸರಿಯಾದ ಅನುದಾನ ನೀಡದೇ ಇರುವುದರಿಂದ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳು ಕುಂಠಿತಗೊಂಡಿವೆ ಎಂದು ಶಾಸಕ ಡಿ.ಎಮ್‌.ಐಹೊಳೆ ಹೇಳಿದರು.ಬುಧವಾರ ಪಟ್ಟಣದ ದಿಗ್ಗೇವಾಡಿ ರಸ್ತೆಯಲ್ಲಿ ಲೋಕೋಪಯೋಗಿ ಇಲಾಖೆಯಿಂದ ಮಂಜೂರಾದ 1 ಕೋಟಿ ರೂ. ಅನುದಾನದಲ್ಲಿ ರಾಯಬಾಗ-ದಿಗ್ಗೇವಾಡಿ ರಸ್ತೆ ಸುಧಾರಣೆ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು,

            ಬಿಜೆಪಿ ಸರ್ಕಾರ ಅಧಿಕಾರದಲ್ಲಿ ಇದ್ದಾಗ ಸಾಕಷ್ಟು ಅನುದಾನ ತಂದು ರಾಯಬಾಗ ಮತಕ್ಷೇತ್ರದಲ್ಲಿ ಮೂಲಭೂತ ಸೌಕರ್ಯದೊಂದಿಗೆ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ಕೈಗೊಳ್ಳಲಾಗಿತ್ತು ಎಂದರು. ಎಇಇ ಆರ್‌. ಬಿ.ಮನುವಡ್ಡರ, ಸದಾನಂದ ಹಳಿಂಗಳಿ, ಮಹೇಶ ಕರಮಡಿ, ದತ್ತಾ ಜಾಧವ, ಭಾರತಿ ಲೋಹಾರ, ರೀತೇಶ ಅವಳೆ, ಪ್ರೇಮ ಸಾನೆ, ಜಿಯಾವುಲ್ಲ ಮುಲ್ಲಾ, ಸುಭಾಷ ಕಾಂಬಳೆ ಸೇರಿ ಅನೇಕರು ಇದ್ದರು. 


ಸುದ್ದಿ ಓದಿ