ಹೂವಿನ ಹಡಗಲಿ

ಸೊಪ್ಪಿನ ಕಾಳಮ್ಮ ಕಾಲೇಜು ಸಿಇಟಿ ತರಬೇತಿಗೆ ಆಯ್ಕೆ

ಸೊಪ್ಪಿನ ಕಾಳಮ್ಮ ಕಾಲೇಜು ಸಿಇಟಿ ತರಬೇತಿಗೆ ಆಯ್ಕೆ

ಲೋಕದರ್ಶನ ವರದಿ 

            ಹೂವಿನಹಡಗಲಿ 25 : ಪದವಿಪೂರ್ವ ಶಿಕ್ಷಣ ಇಲಾಖೆ ರಾಜ್ಯದ 200 ಸರ್ಕಾರಿ ಪದವಿಪೂರ್ವ ಕಾಲೇಜುಗಳಲ್ಲಿ ಸಿಇಟಿ ಇಂಟಿಗ್ರೇಟೆಡ್ ತರಗತಿ ಆರಂಭಿಸುತ್ತಿದ್ದು, ಪಟ್ಟಣದ ಸೊಪ್ಪಿನ ಕಾಳಮ್ಮ ಬಾಲಕಿಯರ ಸಪಪೂ ಕಾಲೇಜು ತರಬೇತಿಗೆ ಆಯ್ಕೆಯಾಗಿದೆ ಎಂದು ಪದವಿಪೂರ್ವ ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕ ಎ.ಎಚ್‌.ಮಹೇಂದ್ರ ಹೇಳಿದರು.ಪಟ್ಟಣದ ಎಸ್ ಕೆಜಿ ಸಪಪೂ ಕಾಲೇಜಿಗೆ ಶುಕ್ರವಾರ ಭೇಟಿ ನೀಡಿ,  

             ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಅವರು, ಕಳೆದ ವರ್ಷಗಳಲ್ಲಿ ಆನ್ ಲೈನ್ ನಲ್ಲಿ ನೀಡುತ್ತಿದ್ದ ಸಿಇಟಿ ತರಬೇತಿಯನ್ನು ಈ ವರ್ಷದಿಂದ ಭೌತಿಕ ತರಗತಿಗಳ ಮೂಲಕ ಪರಿಣಾಮಕಾರಿ ತರಬೇತಿ ನೀಡಲು ಇಲಾಖೆ ನಿರ್ಧರಿಸಿದೆ. ಈ ಅವಕಾಶವನ್ನು ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಂಡು ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವ ಆತ್ಮವಿಶ್ವಾಸ, ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.

             ದ್ವಿತೀಯ ಪಿಯುಸಿ ಫಲಿತಾಂಶ ಸುಧಾರಣೆಗೆ ಒತ್ತು ನೀಡಲಾಗಿದೆ. ಮುಂಬರುವ ಆಂತರಿಕ ಪರೀಕ್ಷೆ, ವಾರ್ಷಿಕ ಪರೀಕ್ಷೆಗೆ ಸಂಬಂಧಿಸಿದ ಪ್ರಶ್ನೆಪತ್ರಿಕೆ ಡೌನ್‌ಲೋಡ್ ಮಾಡಿಕೊಳ್ಳುವ ವ್ಯವಸ್ಥೆ, ತಾಂತ್ರಿಕ ಸಿದ್ಧತೆ ಕುರಿತು ಮಾಹಿತಿ ನೀಡಿದರು.ತಾಲ್ಲೂಕು ನೋಡಲ್ ಪ್ರಾಚಾರ್ಯ ಕೋರಿ ಹಾಲೇಶ್, ಕಾಲೇಜಿನ ಪ್ರಾಚಾರ್ಯ ಎ.ಕೊಟ್ರಗೌಡ ಇದ್ದರು. 


ಸುದ್ದಿ ಓದಿ