ಮುದ್ದೇಬಿಹಾಳದಲ್ಲಿ ಸಂತ ಕನಕದಾಸರ ಜಯಂತ್ಯೋತ್ಸವ ಆಚರಣೆ
ಮುದ್ದೇಬಿಹಾಳ 27 : ಪಟ್ಟಣದ ಸಂತ ಕನಕದಾಸ ಶಾಲೆಯಲ್ಲಿ ಸಂತ ಕನಕದಾಸರ ಜಯಂತ್ಯೋತ್ಸವವನ್ನು ಆಚರಿಲಾಯಿತು. ಅದ್ಯಕ್ಷತೆ ವಹಿಸಿ ಮಾತನಾಡಿದ ಮುದ್ದೇಬಿಹಾಳ ತಾಲ್ಲೂಕ ಕುರುಬರ ಸಂಘದ ಅಧ್ಯಕ್ಷರಾದ ಎಮ್ ಎನ್ ಮದರಿ ಮಾತನಾಡಿ ಕನಕದಾಸರು ಕನ್ನಡದ ಶ್ರೇಷ್ಠ ಹರಿದಾಸರು, ಕವಿಗಳು ಮತ್ತು ಸಮಾಜ ಸುಧಾರಕರು. ಅವರ ಮೂಲ ಹೆಸರು ತಿಮ್ಮಪ್ಪ ನಾಯಕ. ಅವರು ಕಾಗಿನೆಲೆಯ ಆದಿಕೇಶವರಾಯ ಎಂಬ ಅಂಕಿತನಾಮದಿಂದ ಅನೇಕ ಅರ್ಥಪೂರ್ಣ ಕೀರ್ತನೆಗಳನ್ನು ರಚಿಸಿದ್ದಾರೆ.
ಕನ್ನಡ ಸಾಹಿತ್ಯಕ್ಕೆ ಅವರ ಕೊಡುಗೆ ಅಪಾರ. ಮೋಹನತರಂಗಿಣಿ, ನಳಚರಿತ್ರೆ, ರಾಮಧಾನ್ಯ ಚರಿತೆ, ಹರಿಭಕ್ತಿಸಾರ ಮತ್ತು ನೃಸಿಂಹಸ್ತವ ಅವರ ಪ್ರಮುಖ ಕಾವ್ಯಕೃತಿಗಳು. "ಕುಲ ಕುಲವೆಂದು ಹೊಡೆದಾಡದಿರಿ ಕುಲದ ನೆಲೆಯನ್ನೆನಾದರು ಬಲ್ಲಿರಾ ಎಂಬ ಅವರ ಕೀರ್ತನೆ ಸಮಾಜದ ಅಸಮಾನತೆಯ ವಿರುದ್ಧ ಬಲವಾದ ಧ್ವನಿ ಎತ್ತಿದ್ದಾರೆ ಅವರ ದಾರಿಯಲ್ಲಿ ನಾವೆರಲ್ಲರೂ ಸಾಗೋಣ ಎಂದರು ವಕೀಲರ ಸಂಘದ ಅದ್ಯಕ್ಷರಾದ ಶಶಿಕಾಂತ ಮಾಲಗತ್ತಿ ಮಾತನಾಡಿ ಕನಕದಾಸರ ಬದುಕು ಮತ್ತು ಬರಹಗಳು ನಮಗೆ ಸಮಾನತೆ, ಮಾನವೀಯತೆ ಮತ್ತು ಶುದ್ಧಭಕ್ತಿಯನ್ನು ಕಲಿಸುತ್ತವೆ.
ಜಾತಿ-ಮತ ಭೇದ ಮರೆತು ಎಲ್ಲರೂ ಒಂದೇ ಎಂಬ ಸಂದೇಶವನ್ನು ಪಾಲಿಸುವುದೇ ನಾವು ಅವರಿಗೆ ನೀಡುವ ನಿಜವಾದ ಗೌರವ ಎಂದು ಹೇಳಿದರು ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪಡೆದ ಎಸ್ ಎಮ್ ನೆರಬೆಂಚಿ , ಸಿ ಕೆ ಶಿವಯೋಗಿ ಮಠ ,ಎಮ್. ಪಿ ವಾಳದವರ ಹಾಗೂ ಎಮ್ ಎಚ್ ಕ್ವಾರಿ ವಕೀಲರು ಮಾತನಾಡಿದರು. ಇದೇ ಸಂದರ್ಭದಲ್ಲಿ ಜಿಲ್ಲಾ ಪ್ರಶಸ್ತಿ ಪುರಸ್ಕೃತರಿಗೆ ಸನ್ಮಾನಿಸಿ ಗೌರವಿಸಿದರು. ಕಾರ್ಯಕ್ರಮದಲ್ಲಿ ಎಲ್ ಎಸ್ ಮೇಟಿ ,ವಕೀಲರ ಸಂಘದ ಕಾರ್ಯದರ್ಶಿಗಳಾದ ಪಿ ಬಿ ಗೌಡರ ,ಮಾಜಿ ಅದ್ಯಕ್ಷರಾದ ಎಮ್.ಎಚ್ ಕ್ವಾರಿ ವಕೀಲರು, ಎಚ್.ವಾಯ್ ಪಾಟೀಲವಕೀಲರು , ಮಾಜಿ ಕಾರ್ಯದರ್ಶಿ ಬಿ. ವಾಯ್ ಮೇಟಿ ,ಬಿ. ಪಿ ಮ್ಯಾಗೇರಿ ವಕೀಲರು,
ಶಾಲೆಯ ಕಾರ್ಯದರ್ಶಿ ಬಿ ಎಸ್ ಮೇಟಿ ,ನಾಗಪ್ಪ ರೂಡಗಿ,ಬಿ ಎಲ್ ಬಿಳೇಭಾವಿ , ಎಚ್ ಟಿ ಪೂಜಾರಿ ,ಬಸವರಾಜ ಬಾಗೇವಾಡಿ, ಮುತ್ತಣ್ಣ ರಾವಜಪ್ಪ ಮದರಿ ,ಪರಶುರಾಮ ನಾಗರಬೆಟ್ಟ, ಹಣಮಂತ ದೇವರಹಳ್ಳಿ ,ಎಮ್ ಎಮ್ ಪೂಜಾರಿ ,ಶಿವು ಮೇಟಿ, ಪರುಶುರಾಮ ಅಂದೇಲಿ, ಜೆಟ್ಟೆಪ್ಪ , ಸಂತೋಷ ಬಿಳೇಭಾವಿ, ಸಾಬಣ್ಣ ನಡಗೇರಿ ಉಪಸ್ಥಿತಿ ಇದ್ದರುಸ್ವಾಗತ ಪ್ರಾಥಮಿಕ ಶಾಲಾ ಮುಖ್ಯಗುರು ಎಮ್ ಎನ್ ಯರಝರಿ ನಿರೂಪಣೆ ಗೋಪಾಲ ಹೂಗಾರ ವಂದನಾರೆ್ಣ ಪ್ರೌಡ ಶಾಲಾ ಮುಖ್ಯ ಗುರುಗಳಾದ ಬಿ ಎಸ್ ಪಣೇದಕಟ್ಟಿ ನೆರವೆರಿಸಿದರು