ಮುದ್ದೆಬಿಹಾಲ್

ಬಸವಣ್ಣನವರ ವಿರುದ್ಧ ಅವಹೇಳನಕಾರಿ ಲೇಖನ ಖಂಡಿಸಿ ಪ್ರತಿಭಟನೆ ರವಿ ಹಂಜ್ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ಸಿಎಂಗೆ ಮನವಿ

ಬಸವಣ್ಣನವರ ವಿರುದ್ಧ ಅವಹೇಳನಕಾರಿ ಲೇಖನ ಖಂಡಿಸಿ ಪ್ರತಿಭಟನೆ  ರವಿ ಹಂಜ್ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ಸಿಎಂಗೆ ಮನವಿ
Protest held against a derogatory article about Basavanna; memorandum submitted to the CM demanding

            ಮುದ್ದೇಬಿಹಾಳ 24:  ಬಸವ ಮಂಟಪ ಪುಸ್ತಕದಲ್ಲಿ ವಿಶ್ವಗುರು ಬಸವಣ್ಣನವರನ್ನು ಹಿಂಸಾಚಾರ, ಕೊಲೆಗಡುಕರು ಎಂಬಂತೆ ಪ್ರಸ್ತಾಪಿಸಿರುವುದು ಖಂಡನೀಯ. ದೇಶದಲ್ಲಿ ಸಾಮಾಜಿಕ ಬದಲಾವಣೆಯ ಕಿಚ್ಚು ಹೊತ್ತಿಸಿ,ಸಮ ಸಮಾಜದ ಕನಸು ಕಂಡವರು  ಜಗತ್ತೆ ಇಡಿ ಮನುಕುಲವೆ ಅವರನ್ನು ಮೆಚ್ಚದೆ ಜಗತ್ತಿಗೆ ಸಮಾನತೆಯ ಸಂದೇಶ ಸಾರಿದ ಬಸವಣ್ಣನವರು ವಿಶ್ವಕ್ಕೆ ಗುರು ಎಂದು ಕರೆಸಿಕೊಂಡವರು ಎಂದು ಮಾಜಿ ಎಪಿಎಂಸಿ ಉಪಾಧ್ಯಕ್ಷ ವಾಯ್‌. ಎಚ್‌. ವಿಜಯಕರ್ ಹೇಳಿದರು.ಪಟ್ಟಣದಲ್ಲಿ ಮಂಗಳವಾರ ಕಸಪ ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಬಸವಣ್ಣನವರ ವಿರುದ್ಧ ಅವಹೇಳನಕಾರಿ ಲೇಖನ ಬರೆದ ರವಿ ಹಂಜ್ ವಿರುದ್ಧ ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

             ಲಿಂಗಾಯತ ಸಮಾಜದ ಎಮ್  ಎಮ್  ಕಲಬುರಗಿ ಅವರ ಹತ್ಯೆಯಂತಹ ಘಟನೆಗಳು ನಡೆದಾಗಲೂ ವೀರಶೈವ ಪರಂಪರೆ ಹಾಗೂ ಬಸವಾದಿ ಶರಣರು ಶಾಂತಿ ಮತ್ತು ಸಹನೆಗೆ ಆದ್ಯತೆ ನೀಡುತ್ತ ಬಂದಿದ್ದಾರೆ. ಆದರೆ ಬಸವಣ್ಣನವರ ಕುರಿತು ಅವಹೇಳನಕಾರಿ ಬರಹ ಬರೆದಿರುವ  ರವಿ ಹಂಜ್ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಂಡು ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದರು.ಸಾಹಿತಿ ರಹಿಮಾನಸಾಬ್ ಬಿದರಕುಂದಿ ಮಾತನಾಡಿ, ಜಗಜ್ಯೋತಿ ಬಸವಣ್ಣನವರ ಕುರಿತು ಹಂಜ್ ಎಂಬ ವ್ಯಕ್ತಿ ಪಿತೂರಿಯ ರೀತಿಯಲ್ಲಿ ಅವಹೇಳನಕಾರಿ ಲೇಖನ ಬರೆದಿದ್ದಾರೆ.                              ಬಸವಣ್ಣನವರ ವಿರುದ್ಧ ಇಂತಹ ಅಪಪ್ರಚಾರ 12ನೇ ಶತಮಾನದಿಂದಲೂ ನಡೆಯುತ್ತ ಬಂದಿದೆ. ಸಮಾಜದಲ್ಲಿನ ಮೇಲು-ಕೀಳು, ಜಾತಿ ಭೇದಗಳನ್ನು ತೊಲಗಿಸಿ ಸಮಾನತೆಯ ಸಮಾಜ ನಿರ್ಮಿಸುವ ಅಗತ್ಯವಿರುವ ಈ ಸಂದರ್ಭದಲ್ಲಿ ಬಸವಣ್ಣನವರ ಕುರಿತು ಅವಹೇಳನಕಾರಿ ಬರಹ ಪ್ರಕಟಿಸಿರುವುದು ನೋವುಂಟು ಮಾಡಿದೆ. ಇಂತಹ ಕೃತ್ಯ ಎಸಗಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗಿದೆ ಎಂದು ಹೇಳಿದರು. ದಲಿತ ಮುಖಂಡ ಹರೀಶ ನಾಟಿಕಾರ  ಮಾತನಾಡಿ ಬುಧ್ದ ಬಸವ ಅಂಬೇಡ್ಕರವರ ಬಗ್ಗೆ  ಯಾರೆಯಾಗಲಿ ಅವಹೇಳನ ಕಾರಿಯಾಗಿ ಮಾತನಾಡಿದರೆ ನಾವು ಸಹಿಸುವದಿಲ್ಲ. 

             ರವಿ ಹಂಜ್ ಅವನಿಗೆ ಕಠಿಣ ಶಿಕ್ಷೆಯಾಗಬೇಕು ಇರದೆ ಇದ್ದರೆ ನಮ್ಮ ಹೋರಾಟ ನಿರಂತರವಾಗಿ ಇರುತ್ತದೆ ಎಂದು ಎಚ್ಚರಸಿದರುಕಾಮರಾಜ ಬಿರಾದಾರ  ಅವರು ಮಾತನಾಡಿ  ರವಿ ಹಂಜ್ ಎಂಬ  ವ್ಯಕ್ತಿ  ನಮ್ಮದೇಶಕ್ಕೆ  ಬರುವದನ್ನು  ಬ್ಯಾನ ಮಾಡಬೇಕು ಈದೇಶದಲ್ಲಿ ಯಾರು ಸಾಹಿತಿಗಳಿದ್ದರೊ ಯಾರು ಬರಹಗಾರರು ಇದ್ದರೊ ಅಂತವರ ಹೆಸರು ಇಂದಿಗೂ  ಅವರ ಲೇಖನ ಜೀವಂತವಾಗಿವೆ ಎಂದರುಸಮಾಜ ಸೇವಕಿ ಕಾಶಿಬಾಯಿ ರಾಂಪುರ, ಸಾಹಿತಿ ಬಿ. ಎಂ. ಹಿರೇಮಠ ಹಾಗೂ ಕಾಮರಾಜ ಬಿರಾದಾರ ಮಾತನಾಡಿದರು.

             ಈ ಸಂದರ್ಬದಲ್ಲಿ  ಪ್ರಭುರಾಜ ಕಲಬುರ್ಗಿ  ಕಾಮರಾಜ ಬಿರಾದಾರ ಕಾಶಿಬಾಯಿ ರಾಂಪೂರ  ವಾಯ್ ಎಚ್ ವಿಜಯಕರ  ಎಚ್ ಆರ್ ಬಾಗವಾನ  ಹರೀಶ ನಾಟೀಕಾರ  ಸಂತೋಷ  ಬಾದರಬಂಡಿ ರಾಜುಗೌಡ ತುಂಬಗಿ  ಸೇರಿದಂತೆ ಹಲವಾರ ಜನ ಸೇರಿದ್ದರುಪಟ್ಟಣದ ಬಸವೇಶ್ವರ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ಆರಂಭಗೊಂಡು ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು. 


ಸುದ್ದಿ ಓದಿ