ಕಿನ್ನಾಳ ಗ್ರಾಮದಲ್ಲಿ ಭಕ್ತ ಕನಕದಾಸರವರ ಜಯಂತ್ಯೋತ್ಸವ ಆಚರಣೆ
ಕೊಪ್ಪಳ 27 : ತಾಲೂಕಿನ ಕಿನ್ನಾಳ ಗ್ರಾಮದಲ್ಲಿ ಶುಕ್ರವಾರದಂದು ನಾಡಿನ ಮಹಾನ್ ಭಕ್ತ ಕವಿ ದರ್ಶನಿಕ ಭಕ್ತ ಕನಕದಾಸರವರ 539ನೇ ಜಯಂತ್ಯೋತ್ಸವ ಕಾರ್ಯಕ್ರಮದ ಪ್ರಯುಕ್ತ ಕನಕದಾಸ ವೃತ್ತದಲ್ಲಿರುವ ಕನಕದಾಸರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಗೌರಾರೆ್ಣ ಮಾಡಿ ಆಚರಿಸಲಾಯಿತು. ತಮ್ಮ ಕೀರ್ತನೆಗಳ ಮೂಲಕ ಭಕ್ತಿ ಸಮಾನತೆ ಮಾನವೀಯತೆ ಸತ್ಯ ಮತ್ತು ಸಾಮಾಜಿಕ ನ್ಯಾಯದ ಸಂದೇಶವನ್ನು ಜನರಿಗೆ ಸಾರಿದ ಮಹಾನ್ ಕವಿ ಭಕ್ತ ಕನಕದಾಸ್ ರವರ ಜಯಂತಿ ದಿನದಂದು ಪರಸ್ಪರ ಎಲ್ಲರೂ ಸಂಭ್ರಮಾಚರಣೆ ಮಾಡಿ ಶುಭಾಶಯ ಗಳನ್ನು ವಿನಿಮಯ ಮಾಡಿಕೊಂಡರು,
ಈ ಸಂದರ್ಭದಲ್ಲಿ ಕನಕದಾಸ ಯುವಕ ಮಂಡಳಿಯ ಅಧ್ಯಕ್ಷರು ಹಾಗೂ ಈ ಭಾಗದ ಪ್ರಮುಖ ನಾಯಕರಾದ ಅಮರೇಶ್ ಉಪಲಾಪುರ, ಸಂಘದ ಕಾರ್ಯದರ್ಶಿ ಕೆ ಮಲ್ಲಿಕಾರ್ಜುನ ಹಾಗೂ ಯುವ ಮುಖಂಡ ಮಂಜುನಾಥ ಅಂಗಡಿ, ತಿಪ್ಪೇಶ್ ಮುರುನೀ ,
ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಹಾಗೂ ಸಮಾಜದ ನಾಯಕ ಹನುಮೇಶ ಕೋವಿ ಮತ್ತು ಮಂಜುನಾಥ್ ಹಾಗೂ ಕ್ರಾಂತೀವೀರ ಸಂಗೊಳ್ಳಿ ರಾಯಣ್ಣ ಸಂಘದ ಅಧ್ಯಕ್ಷರಾದ ಕೆ ರವಿಕುಮಾರ್ ಸೇರಿದಂತೆ ಗ್ರಾಮ ಪಂಚಾಯಿತಿ ಅಧಿಕಾರಿಗಳು ,
ಪ್ರಾಥಮಿಕ ಕೃಷಿ ಸೇವಾ ಸಹಕಾರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಸಮಾಜದ ಮುಖಂಡರು ,ವಿವಿಧ ಸಂಘಟನೆಗಳ ಮುಖ್ಯಸ್ಥರು ಕಾರ್ಯಕರ್ತರು ಮತ್ತು ಅಭಿಮಾನಿಗಳು ಪಾಲ್ಗೊಂಡಿದ್ದರು,