ಗದಗ

ಜಾನುವಾರುಗಳಿಗೆ ಉತ್ತಮ ಚಿಕಿತ್ಸೆ ಪೂರೈಸುವುದು ಅಗತ್ಯ ಶಾಸಕ- ಡಾ.ಚಂದ್ರು ಲಮಾಣಿ

ಜಾನುವಾರುಗಳಿಗೆ ಉತ್ತಮ ಚಿಕಿತ್ಸೆ ಪೂರೈಸುವುದು ಅಗತ್ಯ ಶಾಸಕ- ಡಾ.ಚಂದ್ರು ಲಮಾಣಿ

           ಲಕ್ಷ್ಮೇಶ್ವರ " 27: ಗ್ರಾಮೀಣ ಭಾಗದ ರೈತರ ಆರ್ಥಿಕ ಸ್ಥಿತಿಯನ್ನು ಸುಧಾರಿಸುವಲ್ಲಿ ಕೃಷಿಯಷ್ಟೇ ಜಾನುವಾರುಗಳ ಸಾಕಾಣಿಕೆ ಪ್ರಮುಖ ಪಾತ್ರ ವಹಿಸುತ್ತದೆ. ಜಾನುವಾರುಗಳ ಆರೋಗ್ಯ ರಕ್ಷಣೆ ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದ್ದು ಎಲ್ಲಾ ಪಶು ವೈದ್ಯರು ಜಾನುವಾರುಗಳಿಗೆ ಉತ್ತಮ ಚಿಕಿತ್ಸೆ ನೀಡುವುದು ಅವಶ್ಯವಾಗಿದೆ ಎಂದು ಶಾಸಕ ಡಾ ಚಂದ್ರು ಲಮಾಣಿ ಹೇಳಿದರು.

            ಪಟ್ಟಣದ ಹೊಸ ಬಸ್ ನಿಲ್ದಾಣದ ಹತ್ತಿರ ಇರುವ ಪಶು ಆಸ್ಪತ್ರೆಯಲ್ಲಿ ಪಶುಪಾಲನಾ ಮತ್ತು ವೈದ್ಯಕೀಯ ಸೇವಾ ಇಲಾಖೆಯಿಂದ ಸನ್ 2022- 23 ನೇ ಸಾಲಿನ ಆರ್ ಐ.ಡಿ.ಎಫ್‌. 28. ಯೋಜನೆಡಿಯ ಸುಮಾರು 50.13 ಲಕ್ಷ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಲಾದ ಸುಸಜ್ಜಿತ ಪಶು ಚಿಕಿತ್ಸಾಲಯವನ್ನು ಉದ್ಘಾಟಿಸಿ ಗೋಮಾತೆಗೆ ಮತ್ತು ಕನಕದಾಸರ ಭಾವಚಿತ್ರಕ್ಕೆ ಪೂಜಿಸಲ್ಲಿಸಿ.

           ಮಾತನಾಡಿದ ಅವರು ಜಾನುವಾರುಗಳಿಗೆ ಅನಾರೋಗ್ಯ ಕಾಡಿದರೆ ಸ್ಥಳೀಯವಾಗಿಯೇ ಅತ್ಯಾಧುನಿಕ ಚಿಕಿತ್ಸೆ ಮತ್ತು ಓಷಧಿಗಳು ಲಭ್ಯವಾಗಲಿವೆ ಎಲ್ಲಾ ರೈತರು ಇದರ ಸದುಪಯೋಗವನ್ನು ಪಡೆದುಕೊಂಡು ಉತ್ತಮ ಹೈನುಗಾರಿಕೆಗೆ ಹಾಲು ಉತ್ಪಾದನೆ ಅಂತ ಚಟುವಟಿಕೆಗಳ ಮೂಲಕ ತಮ್ಮ ಉತ್ತಮ ಭವಿಷ್ಯವನ್ನು ರೂಪಿಸಿಕೊಂಡು ಆರ್ಥಿಕವಾಗಿ ಸಬಲರಾಗಬೇಕು.

            ರಾಸುಗಳಿಗೆ ಕಾಲಕಾಲಕ್ಕೆ ಲಸಿಕೆ ಮತ್ತು ಸೂಕ್ತ ಚಿಕಿತ್ಸೆ ದೊರೆತರೆ ಹಾಲಿನ ಉತ್ಪಾದನೆಯೂ ಹೆಚ್ಚಾಗಲಿದೆ.ಸರ್ಕಾರಿ ಯೋಜನೆಗಳಾದ ಪಶುಭಾಗ್ಯ, ಜಾನುವಾರು ವಿಮೆ ಹಾಗೂ ಸಹಾಯಧನ ಯೋಜನೆಗಳನ್ನು ರೈತರು ಸದುಪಯೋಗ ಪಡಿಸಿಕೊಳ್ಳಬೇಕು . ಆಸ್ಪತ್ರೆಗೆ ಅಗತ್ಯವಿರುವ ಪಶುವೈದ್ಯರನ್ನು ಮತ್ತು ಸಿಬ್ಬಂದಿಗಳು ನೇಮಕಾತಿ ಅವಶ್ಯವಾಗಿದ್ದು ಇದರ ಬಗ್ಗೆ ಈಗಾಗಲೇ ಸರ್ಕಾರದ ಗಮನಕ್ಕೆ ತಂದಿದ್ದೇನೆ.

             ಈಗಿರುವ ವೈದ್ಯರು ರೈತರಿಗೆ ಯಾವುದೇ ತೊಂದರೆ ಯಾಗದಂತೆ ಸೇವೆ ನೀಡ ಬೇಕು ಎಂದರು.ಕಾರ್ಯಕ್ರಮದಲ್ಲಿ ಪಶು ವೈದ್ಯಾಧಿಕಾರಿಗಳಾದ ಡಾ ಎನ್ ಎಚ ಓಲೇಕಾರ ನಿಂಗಪ್ಪ ಬನ್ನಿ ಶಿವಯೋಗಿ ಅಂಕಲ ಕೋಟಿ ಗಂಗಾಧರ ಮೆಣಸಿನಕಾಯಿ ದುಂಡೇಶ ಕೋಟಿಗಿ ವಿಜಯ ಕುಂಬಾರ ಪ್ರವೀಣ್ ಬೋಮಲೆ ಭೀಮಣ್ಣ ಯಂಗಾಡಿ ಸಂತೋಷ ಲಮಾಣಿಸ್ಥಳೀಯ ಗ್ರಾಮ ಪಂಚಾಯತಿ ಅಧ್ಯಕ್ಷರು, ಸದಸ್ಯರು ಹಾಗೂ ನೂರಾರು ರೈತರು ಉಪಸ್ಥಿತರಿದ್ದರು. 


ಸುದ್ದಿ ಓದಿ