ದಾಸ ಸಾಹಿತ್ಯದಲ್ಲಿ ಕನಕದಾಸರಿಗೆೆ ಶ್ರೇಷ್ಠ ಸ್ಥಾನವಿದೆ :ಮಹಾದೇವ ಕೋಣಿ
ಲೋಕದರ್ಶನ ವರದಿ
ಬೆಟಗೇರಿ 27 :ಕನಕದಾಸರು ರಚಿಸಿದ ಕೃತಿಗಳು ಇಂದಿಗೂ ಸಹ ಜನಸಾಮಾನ್ಯರ ನಾಲಿಗೆಯ ಮೇಲೆ ನಲಿದಾಡುತ್ತಿವೆ ಎಂದು ಗೋಕಾಕ ತಾಲೂಕಿನ ಬೆಟಗೇರಿ ವಿವಿದೋದ್ಧೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಾಹಕ ಮಹಾದೇವ ಕೋಣಿ ಹೇಳಿದರು.
ಗೋಕಾಕ ತಾಲೂಕಿನ ಬೆಟಗೇರಿ ವಿವಿದೋದ್ಧೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘದಲ್ಲಿ ನ.27ರಂದು ನಡೆದ ಕನಕದಾಸರ ಜಯಂತಿ ಆಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಕನಕದಾಸರು ಮತ್ತು ಪುರದಂರದಾಸರು ಕನ್ನಡ ಸಾರಸ್ವತ ಲೋಕದ ಎರಡು ಕಣ್ಣುಗಳಿದ್ದಂತೆ, ದಾಸ ಸಾಹಿತ್ಯದಲ್ಲಿ ಕನಕದಾಸರಿಗೆೆ ಶ್ರೇಷ್ಠ ಸ್ಥಾನವಿದೆ ಎಂದರು.
ಕನಕದಾಸರ ಭಾವ ಚಿತ್ರಕ್ಕೆ ಪೂಜೆ, ಪುಷ್ಾರೆ್ಪನ ನೆರವೇರಿಸಿದ ಬಳಿಕ ಸಿಹಿ ವಿತರಿಸಲಾಯಿತು. ಮುತ್ತೆಪ್ಪ ದೇಯಣ್ಣವರ, ಚನ್ನಬಸು ಭಾಗೋಜಿ, ಮಲ್ಲಪ್ಪ ಪೇದನ್ನವರ, ನಾಗರಾಜ ಕೋಣಿ, ಸಂಜಯ ಪಣದಿ, ಸಂಘದ ಆಡಳಿತ ಮಂಡಳಿ ಸದಸ್ಯರು, ಗಣ್ಯರು, ಯುವಕರು, ಸ್ಥಳೀಯರು, ಇತರರು ಇದ್ದರು.