ಬಳ್ಳಾರಿ

ನಿಮ್ಮ ಹೋರಾಟಕ್ಕೆ ನಮ್ಮ ನೈತಿಕ ಬೆಂಬಲವಿದೆ: ಫೆವಾರ್ಡ-ಕೆ ಸಂಸ್ಥೆಯ ಪುಷ್ಪ ಚಂದ್ರಶೇಖರ್

ನಿಮ್ಮ ಹೋರಾಟಕ್ಕೆ ನಮ್ಮ ನೈತಿಕ ಬೆಂಬಲವಿದೆ:  ಫೆವಾರ್ಡ-ಕೆ ಸಂಸ್ಥೆಯ ಪುಷ್ಪ ಚಂದ್ರಶೇಖರ್

             ಬಳ್ಳಾರಿ 27: ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಕಳೆದ ಹತ್ತು ದಿನಗಳಿಂದ ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಅನಿರ್ದಿಷ್ಟಾವಧಿ ಹೋರಾಟ ನಡೆಸುತ್ತಿರುವ ಆಶಾ ಕಾರ್ಯಕರ್ತೆಯರಿಗೆ ಫೆವಾರ್ಡ-ಕೆ ಮಹಿಳಾ ವೇದಿಕೆಯ ಸದಸ್ಯರು ಭೇಟಿ ನೀಡಿ ನೈತಿಕ ಬೆಂಬಲ ವ್ಯಕ್ತಪಡಿಸಿದರು.

              ಈ ಸಂದರ್ಭದಲ್ಲಿ ಫೆವಾರ್ಡ-ಕೆ ರಾಜ್ಯಾಧ್ಯಕ್ಷ ಮಹೇಶೇಂದ್ರ ಗುರು, ನಿಕಟಪೂರ್ವ ಅಧ್ಯಕ್ಷ ಆಂಜನೇಯ ರೆಡ್ಡಿ ಹಾಗೂ ಮಹಿಳಾ ವೇದಿಕೆಯ ರಾಜ್ಯ ಸಂಚಾಲಕರು ಮತ್ತು ಫೆವಾರ್ಡ-ಕೆ ಸ್ಟೇಟ್ ಬೋರ್ಡ್‌ ಸದಸ್ಯರಾದ ಕೆ. ಪುಷ್ಪ ಚಂದ್ರಶೇಖರ್ ಅವರು ಪ್ರತಿಭಟನಾನಿರತ ಆಶಾ ಕಾರ್ಯಕರ್ತೆಯರನ್ನು ಉದ್ದೇಶಿಸಿ ಮಾತನಾಡಿ, ನಿಮ್ಮ ನ್ಯಾಯಯುತ ಹೋರಾಟದಲ್ಲಿ ನಾವು ನಿಮ್ಮೊಂದಿಗಿದ್ದೇವೆ.

              ನಿಮ್ಮ ಬೇಡಿಕೆಗಳ ಈಡೇರಿಕೆಗೆ ನಮ್ಮ ಸಂಪೂರ್ಣ ನೈತಿಕ ಬೆಂಬಲವಿದೆ ಎಂದು ಭರವಸೆ ನೀಡಿದರು.ಇದೇ ಸಂದರ್ಭದಲ್ಲಿ ಹೋರಾಟ ನಿರತ ಆಶಾ ಕಾರ್ಯಕರ್ತೆಯರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸುಮಾರು 3,000 ಸ್ಯಾನಿಟರಿ ಪ್ಯಾಡ್ಗಳನ್ನು ವಿತರಿಸುವ ಮೂಲಕ ಮಾನವೀಯ ಕಾಳಜಿ ಮೆರೆದರು.

                ಕಾರ್ಯಕ್ರಮದಲ್ಲಿ ಫೆವಾರ್ಡ-ಕೆ ಉಪಾಧ್ಯಕ್ಷರಾದ ಪ್ರೇಮ ಎ.ಎಸ್‌., ಸಹ ಸಂಚಾಲಕರಾದ ಅನಿತಾ ಕೆ.ಎನ್‌., ಮಂಡ್ಯ ಜಿಲ್ಲಾ ಫೆವಾರ್ಡ-ಕೆ ಪ್ರತಿನಿಧಿಗಳಾದ ರಾಣಿ ಚಂದ್ರಶೇಖರ್ ಮತ್ತು ನಳಿನಿ, ಬೆಂಗಳೂರು ನಗರ ಜಿಲ್ಲಾ ಪ್ರತಿನಿಧಿ ಡಾ. ಸೀಮಾ, ಚಿತ್ರದುರ್ಗ ಜಿಲ್ಲಾ ಪ್ರತಿನಿಧಿಗಳಾದ ಅನ್ನಪೂರ್ಣ ಮತ್ತು ಸಮೀರ ಹಾಗೂ ಕಾರ್ಯಾಲಯದ ಕಾರ್ಯಕ್ರಮ ಅಧಿಕಾರಿ ಕೃಷ್ಣಮೂರ್ತಿ ಎಂ.ಎಸ್‌. ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. 


ಸುದ್ದಿ ಓದಿ