ಕೊಪ್ಪಳ

ಯಶಸ್ವಿನಿ ಯೋಜನೆ: ಕಣ್ಣಿನ ಚಿಕಿತ್ಸೆಯ ಕ್ಲೇಮ್ ಮೊತ್ತವನ್ನು ರೂ. 40,000ಕ್ಕೆ ಹೆಚ್ಚಿಸಲು ಸಹಕಾರ ಸಚಿವರಿಗೆ ಮನವಿ

ಯಶಸ್ವಿನಿ ಯೋಜನೆ: ಕಣ್ಣಿನ ಚಿಕಿತ್ಸೆಯ ಕ್ಲೇಮ್ ಮೊತ್ತವನ್ನು ರೂ. 40,000ಕ್ಕೆ ಹೆಚ್ಚಿಸಲು ಸಹಕಾರ ಸಚಿವರಿಗೆ ಮನವಿ
Yashaswini Scheme: Appeal to the Minister for Cooperation to increase the claim amount for eye treat

              ಕೊಪ್ಪಳ, ನ. 27: ಸಹಕಾರ ಸಂಘಗಳ ಸದಸ್ಯರಿಗೆ ವರದಾನವಾಗಿರುವ ಸರ್ಕಾರದ ’ಯಶಸ್ವಿನಿ’ ಆರೋಗ್ಯ ಯೋಜನೆಯಡಿ ಕಣ್ಣಿನ ಚಿಕಿತ್ಸೆಗೆ ನೀಡಲಾಗುತ್ತಿರುವ ವಿಮಾ ಕ್ಲೇಮ್ ಮೊತ್ತವನ್ನು ರೂ. 35,000 ದಿಂದ ರೂ. 40,000 ಕ್ಕೆ ಹೆಚ್ಚಿಸುವಂತೆ ಕೊಪ್ಪಳ ಜಿಲ್ಲಾ ಸಹಕಾರ ಯೂನಿಯನ್ ನಿಯಮಿತದ ಉಪಾಧ್ಯಕ್ಷ ಹಾಲಯ್ಯ ತಂದೆ ವೀರಭದ್ರಯ್ಯ ಹುಡೇಜಾಲಿ ಅವರು ರಾಜ್ಯ ಸಹಕಾರ ಸಚಿವ ಲಕ್ಷ್ಮಣ ಎಸ್‌. ಸವದಿ ಅವರಿಗೆ ಮನವಿ ಸಲ್ಲಿಸಿದ್ದಾರೆ.

               ನವೆಂಬರ್ 26, 2026ರಂದು ಈ ಕುರಿತು ಮನವಿ ಪತ್ರ ಸಲ್ಲಿಸಿರುವ ಅವರು, ಗ್ರಾಮೀಣ ಭಾಗದ ರೈತರು ಮತ್ತು ಬಡ ಕುಟುಂಬಗಳಿಗೆ ಯಶಸ್ವಿನಿ ಯೋಜನೆಯು ಅತ್ಯಂತ ಉಪಯುಕ್ತವಾಗಿದೆ ಎಂದು ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ. ಪ್ರಸ್ತುತ ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ಕಣ್ಣಿನ ತೊಂದರೆ ಮತ್ತು ಚಿಕಿತ್ಸೆಗೆ ಯಶಸ್ವಿನಿ ಯೋಜನೆಯಡಿ ಕೇವಲ ರೂ. 7,000 ಮಾತ್ರ ಕ್ಲೇಮ್ ಆಗುತ್ತಿದೆ.  

                 2010-11ರಲ್ಲಿ ನಡೆಸಿದ ಸಮೀಕ್ಷೆಯ ಆಧಾರದ ಮೇಲೆ ಈ ದರ ನಿಗದಿಪಡಿಸಲಾಗಿತ್ತು. ಆದರೆ, ಪ್ರಸ್ತುತ ಖಾಸಗಿ ಆಸ್ಪತ್ರೆಗಳಲ್ಲಿ ಒಂದು ಕಣ್ಣಿನ ಚಿಕಿತ್ಸೆಗೆ ಕನಿಷ್ಠ ರೂ. 35,000 ರಿಂದ ರೂ. 40,000 ವರೆಗೆ ವೆಚ್ಚವಾಗುತ್ತಿದೆ. ಹೆಚ್ಚುವರಿ ವೆಚ್ಚವನ್ನು ಭರಿಸಲು ಸಾಧ್ಯವಾಗದೇ ಸಹಕಾರ ಸಂಘಗಳ ಸದಸ್ಯರು ಕಣ್ಣಿನ ಚಿಕಿತ್ಸೆ ಮಾಡಿಸಿಕೊಳ್ಳಲು ಹಿಂದೇಟು ಹಾಕುವಂತಾಗಿದೆ.

              ಆದ್ದರಿಂದ, ಬಡ ರೈತರು ಮತ್ತು ಸಹಕಾರ ಸಂಘಗಳ ಸದಸ್ಯರ ಹಿತದೃಷ್ಟಿಯಿಂದ ಕಣ್ಣಿನ ಚಿಕಿತ್ಸೆಯ ಕ್ಲೇಮ್ ಮೊತ್ತವನ್ನು ರೂ. 35,000 ದಿಂದ ರೂ 40,000 ಕ್ಕೆ ನಿಗದಿಪಡಿಸಿ ಅನುಕೂಲ ಮಾಡಿಕೊಡಬೇಕೆಂದು ಗಿಣಿಗೇರಾ ಮೂಲದ ಹಾಲಯ್ಯ ಹುಡೇಜಾಲಿ ಅವರು ಸಚಿವರಲ್ಲಿ ಕಳಕಳಿಯಿಂದ ವಿನಂತಿಸಿದ್ದಾರೆ.

                 ಈ ಸಂದರ್ಭದಲ್ಲಿ ಸಹಕಾರ ಯೂನಿಯನ ಜಿಲ್ಲಾಧ್ಯಕ್ಷ ಶೇಖರ್ ಗೌಡ ಮಾಲಿ ಪಾಟೀಲ್ ರವರು ಸಹ ಉಪಸ್ಥಿತರಿದ್ದು ಸಚಿವರಿಗೆ ಮನವರಿಕೆ ಮಾಡಿ ಶೀಘ್ರ ಬೇಡಿಕೆ ಈಡೇರಿಸಲು ಮನವಿ ಮಾಡಿಕೊಂಡರು, ನಿರ್ದೇಶಕರಾದ ಶರಣಪ್ಪ ಹ್ಯಾಟಿ, ರಾಜು ಶೆಟ್ಟರ್, ಅಲ್ಲದೆ ಗವಿಸಿ ದ್ದೇಶ ಹೊಡೆಜಾಲಿ ಅನೇಕರು ಪಾಲ್ಗೊಂಡಿದ್ದರು, 


ಸುದ್ದಿ ಓದಿ