ಶಿಗ್ಗಾವ್

ಸಮಾಜದಲ್ಲಿರುವ ಅಂಕುಡೊಂಕುಗಳನ್ನು ತಿದ್ದಲು ಇಂತಹ ವೇದಿಕೆ ಕಾರ್ಯಕ್ರಮ ಸಹಕಾರಿ : ಇಂಧೂದರ ಮುತ್ತಳ್ಳಿ

ಸಮಾಜದಲ್ಲಿರುವ ಅಂಕುಡೊಂಕುಗಳನ್ನು ತಿದ್ದಲು ಇಂತಹ ವೇದಿಕೆ ಕಾರ್ಯಕ್ರಮ ಸಹಕಾರಿ : ಇಂಧೂದರ ಮುತ್ತಳ್ಳಿ

 ಲೋಕದರ್ಶನ ವರದಿ 

               ಶಿಗ್ಗಾವಿ 27:  ಸಮಾಜದಲ್ಲಿರುವ ಅಂಕುಡೊಂಕುಗಳನ್ನು ತಿದ್ದಲು ಇಂತಹ ವೇದಿಕೆ ಕಾರ್ಯಕ್ರಮಗಳು ಸಹಕಾರಿ ಆಗಲಿವೆ ಎಂದು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಇಂಧೂದರ ಮುತ್ತಳ್ಳಿ ಹೇಳಿದರು.  ತಾಲೂಕಿನ ಬಾಡ ಗ್ರಾಮದಲ್ಲಿ ತಾಲೂಕ ಆಡಳಿತ, ಪುರಸಭೆ ಬಂಕಾಪೂರ ಹಾಗೂ ಗ್ರಾಮ ಪಂಚಾಯತಿ ಬಾಡ ಸಹಯೋಗದಲ್ಲಿ ನಡೆದ ಭಕ್ತ ಕನಕದಾಸ ಜಯಂತೋತ್ಸವ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು

           ಜಾತಿಯ ಗೋಡೆಯನ್ನು ಒಡೆದು ಕನಕನ ಕಿಂಡಿಯನ್ನು ನಮ್ಮ ಮನಸ್ಸಿನಲ್ಲಿ ತೆರೆದರೆ ಅದುವೇ ಕನಕದಾಸ ಜಯಂತಿ ಅಲ್ಲದೇ ಭಕ್ತನಲ್ಲಿ ಮಾನವೀಯ ಮೌಲ್ಯಗಳು ಇದ್ದರೆ ಅದುವೇ ನಿಜವಾದ ಭಕ್ತಿ ದಾಸರ ವಾಣಿಗಳು ನಮ್ಮ ಬದುಕಿಗೆ ಸ್ಪೂರ್ತಿಯಾಗುತ್ತವೆ ಎಂದರು. ತಾಲೂಕ ಕುರುಬ ಸಮಾಜದ ಅಧ್ಯಕ್ಷ ಚಂದ್ರಶೇಖರಮಾಯಣ್ಣವರ ಮಾತನಾಡಿ ಮೌಲ್ಯಗಳು ಕುಸಿತು ಕಂಡಾಗ ಕನ್ನಡ ನಾಡಿನ ಸಾಹಿತ್ಯವನ್ನು ಶ್ರೀಮಂತಗೋಳಿಸಿದ ಕೀರ್ತಿ ಕನಕದಾಸರಗೆ ಸಲ್ಲಿಸುತ್ತದೆ ಹಾಗೂ ದಾಸರು ಎಲ್ಲ ಸಮಾಜದ ಒಳಿತಿಗಾಗಿ ಅನೇಕ ಕೀರ್ತನಗಳ ಮೂಲಕ ಜನರಲ್ಲಿ ಜಾಗೃತಿಯನ್ನು ಮೂಡಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದರು. 

               ಉಪನ್ಯಾಸವನ್ನು ಗುರುದೇವ ಬಿಂಳುಡಗಿ ಸವಿಸ್ತಾರವಾಗಿ ನೇರವೇರಿಸಿದರು. ಗುರುನಾಥ ಹುಬ್ಬಳ್ಳಿ ಮಗಳಿ ಕಲಾ ತಂಡದವರಿಂದ ದಾಸರ ಭಕ್ತಿಯ ಸೇವೆ ನೇರವೇರಿತು.ಭಾಕ್ಸ ಸುದ್ದಿ: ಕನಕದಾಸ ಜಯಂತಿ ನಿಮಿತ್ತ ನಡೆದ ತಾಲೂಕ ಮಟ್ಟದ ಪ್ರಭಂದ ಸ್ಪರ್ಧೆಯಲ್ಲಿ ಚಾಕಾಪೂರ ಏಕಲವ್ಯ ಆಂಗ್ಲ ಮಾಧ್ಯಮ ಶಾಲೆಯ ಕು ಅಭಿಜ್ಞಾ ದೈವಜ್ಞ ಪ್ರಥಮ, ದ್ವಿತೀಯ ಸ್ಥಾನ ಪೂಜಾ ಬಡ್ನಿ, ತೃತೀಯ ಸ್ಥಾನ ಪೂನಂ ದರಣೆಪ್ಪನವರ ಭಾಜನರಾಗಿದ್ದಾರೆ.   

                   ಈ ಸಂದರ್ಭದಲ್ಲಿ ತಹಶಿಲ್ದಾರ ಟಿ.ಬಿ.ವಾಲ್ಮೀಕಿ, ಪುರಸಭೆ ಅಧ್ಯಕ್ಷೆ ಮಮತಾ ಮ್ಯಾಗಿ, ಇಓ ಮಂಜುನಾಥ ಸಾಳಂಕಿ, ಬಿಇಓ ಎಂ.ಬಿ.ಅಂಬಿಗೇರ, ಪುರಸಭೆ ಮುಖ್ಯಾಧಿಕಾರಿ ಮಲ್ಲೇಶ, ಪಿ.ಡಿ.ಓ ನಾಗರಾಜ, ನೋಡಲ್ ಅಧಿಕಾರಿ ಬಸಯ್ಯ ಹಿರೇಮಠ, ಸಂತೋಷ ಚಾಕಲಬ್ಬಿ,ಪಕ್ಕೀರ​‍್ಪ ಕುರುಬರ, ರವಿ ಬಿಶೆಟ್ಟಿ, ಶಂಕರ ಗಂಗಣ್ಣವರ, ಲಲಿತಾ ಜಂಬಗಿ ಸೇರಿದಂತೆ ಸಮಾಜದ ಮುಖಂಡರು ಹಾಗೂ ಅಧಿಕಾರಿಗಳು ಮತ್ತು ಶಾಲೆಯ ಶಿಕ್ಷಕರು, ಮಕ್ಕಳು ಉಪಸ್ಥಿತರಿದ್ದರು. ಶಿಕ್ಷಕರಾದ ಹೆಚ್‌.ಹೆಚ್‌.ರಟ್ಟೀಹಳ್ಳಿ, ಉಮೇಶ, ಮಂಜುನಾಥ ಕಾರ್ಯಕ್ರಮ ನಿರ್ವಹಿಸಿದರು. 


ಸುದ್ದಿ ಓದಿ