ಕೇಂದ್ರ ಸಚಿವ ಪ್ರಲ್ಹಾದ ಜೋಶಿ 64ನೇ ಜನ್ಮದಿನದ ಅಂಗವಾಗಿ ವಿವಿಧ ಜನಪರ, ಸಮಾಜಮುಖಿ ಕಾರ್ಯಕ್ರಮ : ನರಹರಿ ಕಟ್ಟಿ
ಶಿಗ್ಗಾವಿ 25 : ಸರಳತೆ, ದಕ್ಷ ಆಡಳಿತ ಮತ್ತು ಜನಪರ ಕಾಳಜಿಗೆ ಹೆಸರಾಗಿರುವ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ಜನ್ಮದಿನವನ್ನು ಕೇವಲ ಸಂಭ್ರಮಕ್ಕೆ ಸೀಮಿತಗೊಳಿಸದೆ, ಸಮಾಜಕ್ಕೆ ಉಪಯುಕ್ತವಾಗುವ ರೀತಿಯಲ್ಲಿ ಆಚರಿಸಲು ನಿರ್ಧರಿಸಲಾಗಿದೆ ಎಂದು ಜಿಲ್ಲಾ ಕಾರ್ಯದರ್ಶಿ ನರಹರಿ ಕಟ್ಟಿ ಹೇಳಿದರು.
ಪಟ್ಟಣದಲ್ಲಿ ವರದಿಗಾರರೊಂದಿಗೆ ಮಾತನಾಡಿದ ಅವರು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ 64ನೇ ಜನ್ಮದಿನದ ಅಂಗವಾಗಿ ಅವರ ಅಭಿಮಾನಿಗಳು ಹಾಗೂ ಭಾಜಪ ಕಾರ್ಯಕರ್ತರು ದಿ 27 ಶುಕ್ರವಾರದಂದು ಧಾರವಾಡ ಲೋಕಸಭಾ ಕ್ಷೇತ್ರದಾದ್ಯಂತ ವಿವಿಧ ಜನಪರ ಮತ್ತು ಸಮಾಜಮುಖಿ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ ಎಂದರು.
ಶಿಗ್ಗಾವಿಯಲ್ಲಿ ಪ್ರಲ್ಲಾದ ಜೋಶಿ ಅಭಿಮಾನಿ ಬಳಗದ ನೇತೃತ್ವದಲ್ಲಿ ಸರಕಾರಿ ಆಸ್ಪತ್ರೆಯಲ್ಲಿರುವ ಒಳ ರೋಗಿಗಳಿಗಳಿಗೆ ಬೆಡ್ಶೀಟ್ ವಿತರಿಸುವುದು. ಅಂಬೇಡ್ಕರ್ ಭವನದಲ್ಲಿ ನೇತ್ರ ತಪಾಸಣಾ ಶಿಬಿರವನ್ನು ಧಾರವಾಡ ಜಿಲ್ಲಾ ಅಂಧತ್ವ ನಿವಾರಣಾ ಸಂಸ್ಥೆ, ಧಾರವಾಡ, ಹಾಗೂ ಶ್ರೀ ಗುರು ಮಹಿಪತಿರಾಜ ನೇತ್ರ ಸೇವಾಸಂಸ್ಥೆ, ಮತ್ತು ಎಂ.ಎಂ. ಜೋಶಿ ನೇತ್ರ ವಿಜ್ಞಾನ ಸಂಸ್ಥೆ ಸಹಯೋಗದಲ್ಲಿ ನುರಿತ ವೈದ್ಯರುಗಳಿಂದ ಬೃಹತ್ ಉಚಿತ ನೇತ್ರ ತಪಾಸಣಾ ಹಾಗೂ ಶಸ್ತ್ರಚಿಕಿತ್ಸಾ ಶಿಬಿರವನ್ನು ಏರಿ್ಡಸಲಾಗಿದೆ.
ಅಲ್ಲದೇಸರಕಾರಿ ಪ್ರೌಢ ಶಾಲೆ ದತ್ತು ಮತ್ತು ಉನ್ನತೀಕರಣ: ಶೈಕ್ಷಣಿಕ ಪ್ರಗತಿಗೆ ಪೂರಕವಾಗಿ, ತಡಸ ಜಿಲ್ಲಾ ಪಂಚಾಯತಿ ವ್ಯಾಪ್ತಿಯ ನೀರಲಗಿ ಗ್ರಾಮದ ಸರಕಾರಿ ಪ್ರೌಢ ಶಾಲೆಯನ್ನು ದತ್ತು ಸ್ವೀಕರಿಸಿ, ಶಾಲೆಯ ಮೂಲಭೂತ ಸೌಕರ್ಯಗಳನ್ನು ಉನ್ನತೀಕರಣಗೊಳಿಸುವ ಮಹತ್ವದ ಕಾರ್ಯಕ್ರಮಕ್ಕೆ ಚಾಲನೆ ನೀಡುವುದು.
ಈ ಸಂದರ್ಭದಲ್ಲಿ ಭಾಜಪ ಅಧ್ಯಕ್ಷ ವಿಶ್ವನಾಥ ಹರವಿ, ಜಿಲ್ಲಾ ಉಪಾಧ್ಯಕ್ಷ ಶಿವಾನಂದ ಮ್ಯಾಗೇರಿ, ರೇಣುಕನಗೌಡ ಪಾಟೀಲ,ಅನಿಲ ಸಾತಣ್ಣನವರ,ಶಿವಯೋಗಿ ಹುಲಸೋಗಿ, ಪ್ರಶಾಂತ ಬಡ್ಡಿ, ರವಿ ಬಿಶೆಟ್ಟಿ, ಸಚಿನ್ ಮಡಿವಾಳರ, ಉಮೇಶ ಅಂಗಡಿ, ಸಂತೋಷ ಕಟ್ಟಿಮನಿ, ಮಲ್ಲೇಶಪ್ಪ ಹರಿಜನ,
ಮಂಜುನಾಥ ಬ್ಯಾಹಟ್ಟಿ,ಸಂತೋಷ ದೊಡ್ಡಮನಿ, ಯಶೋಧಾ ಪಾಟೀಲ,ದೇವಣ್ಣ ಸೊರಟೂರ ಮುಂತಾದವರು ಉಪಸ್ಥಿತರಿದ್ದರು.ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಶಿಬಿರಗಳ ಸದುಪಯೋಗ ಪಡೆದುಕೊಳ್ಳಬೇಕೆಂದು ಪ್ರಲ್ಲಾದ ಜೋಶಿ ಅಭಿಮಾನಿ ಬಳಗದ ವತಿಯಿಂದ ಕೋರಲಾಗಿದೆ.