ಶಿಗ್ಗಾವ್

ಲೇಖಕ ರವಿ ಹಂಜ್ ವಿರುದ್ಧ ಕ್ರಮಕ್ಕೆ ಆಗ್ರಹ

ಲೇಖಕ ರವಿ ಹಂಜ್ ವಿರುದ್ಧ ಕ್ರಮಕ್ಕೆ ಆಗ್ರಹ

             ಶಿಗ್ಗಾವಿ 22 : ವಿಶ್ವಗುರು ಬಸವಣ್ಣನವರ ಕುರಿತು ಲೇಖಕ ರವಿ ಹಂಜ್ ಅವರು ರಚಿಸಿರುವ ಬಸವ ಮಂಟಪ ಕೃತಿಯಲ್ಲಿ ಅವಹೇಳನಕಾರಿ ಅಂಶಗಳನ್ನು ಉಲ್ಲೇಖಿಸಿರುವುದನ್ನು ಖಂಡಿಸಿ, ಲೇಖಕರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಶಿಗ್ಗಾವಿಯಲ್ಲಿ ವಿವಿಧ ಬಸವಪರ ಸಂಘಟನೆಗಳು ವಿರಕ್ತಮಠದ ಸಂಗನಬಸವ ಶ್ರೀಗಳ ನೇತೃತ್ವದಲ್ಲಿ ತಹಸೀಲ್ದಾರ ಕಚೇರಿ ಅಧಿಕಾರಿಗಳ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದರು. 

         ''ಬಸವಣ್ಣನವರು ಸಮಾನತೆ, ಕಾಯಕ, ದಾಸೋಹ ಹಾಗೂ ಮಾನವೀಯ ಮೌಲ್ಯಗಳನ್ನು ಪ್ರತಿಪಾದಿಸಿದ ಮಹಾನ್ ಶರಣರು. ಇಂತಹ ಮಹಾನ್ ವ್ಯಕ್ತಿತ್ವದ ಕುರಿತು ಕೃತಿಯಲ್ಲಿ ಅವಹೇಳನಕಾರಿ ಅಂಶಗಳನ್ನು ಪ್ರಕಟಿಸಿರುವುದು ಬಸವಾಭಿಮಾನಿಗಳ ಭಾವನೆಗಳಿಗೆ ಧಕ್ಕೆ ತಂದಿದೆ. ಕೃತಿಯಲ್ಲಿನ ಆಕ್ಷೇಪಾರ್ಹ ಅಂಶಗಳನ್ನು ಪರೀಶೀಲಿಸಿ, ಸಂಬಂಧಿಸಿದ ಲೇಖಕರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದೆ. 

             ಶಾಸಕ ಯಾಸೀರ ಅಹ್ಮದಖಾನ ಪಠಾಣ ಮಾತನಾಡಿ ವಿಶ್ವಗುರು ಬಸವಣ್ಣನವರ ಕುರಿತು ಅಪಪ್ರಚಾರ ಮಾಡಿರುವುದು ಖಂಡನೀಯ, ಲೇಖಕರ ವಿರುದ್ಧ ಕೇವಲ ಎಫ್‌ಐಆರ್ ದಾಖಲಿಸಿದರೆ ಸಾಲದು, ಅವರನ್ನು ದೇಶದಿಂದ ಗಡೀಪಾರು ಮಾಡಬೇಕು ಎಂದು ಆಗ್ರಹಿಸಿದರು.   ಈ ಸಂದರ್ಭದಲ್ಲಿ ವೀರಶೈವ ಮಹಾಸಭಾ ತಾಲೂಕ ಅಧ್ಯಕ್ಷ ಬಸವರಾಜ ರಾಗಿ, ಶಿವಾನಂದ ಬಾಗೂರ, ಸಿ.ವ್ಹಿ.ಮತ್ತಿಗಟ್ಟಿ, ಸಿದ್ದಣ್ಣಾ ಮೊರಬದ, ಗುಡ್ಡಪ್ಪ ಜಲದಿ, ಪಕ್ಕೀರ​‍್ಪ ಕುಂದೂರ,

             ಬಸಲಿಂಗಪ್ಪ ನರಗುಂದ, ವಸಂತಾ ಬಾಗೂರ, ಬಸವರಾಜ ರಾಗಿ, ಅಶೋಕ ಕಾಳೆ, ಉಮೇಶ ಗೌಳಿ, ರಮೇಶ ವನಹಳ್ಳಿ, ವಸಂತ ಬಡ್ಡಿ, ಮಂಜುನಾಥ ಮಣ್ಣಣ್ಣವರ, ಮಹಾಂತೇಶ ಯಲಿಗಾರ, ಈರಣ್ಣಾ ಚಿಗಳ್ಳಿ, ಗೌಸಖಾನ ಮುನಶಿ, ಜಿ.ಜಿ.ಪಾಟೀಲ, ಶಂಬು ನೇರ್ತಿ, ಅಣ್ಣಪ್ಪ ಲಮಾಣಿ, ಸೇರಿದಂತೆ ಅನೇಕ ಬಸವಾಭಿಮಾನಿಗಳು ಉಪಸ್ಥಿತರಿದ್ದರು. 


ಸುದ್ದಿ ಓದಿ