ಮಕ್ಕಳ ಪ್ರತಿಭೆಯನ್ನ ಹೊರತರುವ ಕಾರ್ಯಕ್ರಮ ಪ್ರತಿಭಾ ಕಾರಂಜಿ : ಬೇವಿನಮರದ
ಲೋಕದರ್ಶನ ವರದಿ
ಶಿಗ್ಗಾವಿ 23: ಗ್ರಾಮೀಣ ಹಾಗೂ ನಗರ ಪ್ರದೇಶಗಳ ಮಕ್ಕಳ ಪ್ರತಿಭೆಯನ್ನ ಹೊರತರುವ ಕಾರ್ಯಕ್ರಮ ಪ್ರತಿಭಾ ಕಾರಂಜಿಯಾಗಿದೆ ಎಂದು ಗಡಿ ಅಭಿವೃದ್ದಿ ಪ್ರಾಧಿಕಾರದ ಅದ್ಯಕ್ಷ ಸೋಮಣ್ಣ ಬೇವಿನಮರದ ಹೇಳಿದರು. ಪಟ್ಟಣದ ಜೆಎಂಜೆ ಶಾಲೆಯಲ್ಲಿ ಹಮ್ಮಿಕೊಂಡ 2026-27 ನೇ ಸಾಲಿನ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ ತಾಲೂಕಾ ಮಟ್ಟದ ಪ್ರತಿಭಾ ಕಾರಂಜಿ, ಕಲೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಕ್ಕಳ ಜವಾಬ್ದಾರಿಯನ್ನ ಶಿಕ್ಷಕರಿಗೆ ಅಷ್ಟೇ ಬಿಡದೇ ಪಾಲಕರೂ ತೆಗೆದುಕೊಳ್ಳಬೇಕು.
ಅಂದಾಗ ಮಕ್ಕಳು ಮುಖ್ಯವಾಹಿನಿಗೆ ಬರಲು ಅನುಕೂಲವಾಗುತ್ತದೆ ಎಂದರು. ಕ್ಷೇತ್ರ ಶಿಕ್ಷಣಾಧಿಕಾರಿ ಎಂ ಬಿ ಅಂಬಿಗೇರ ಪ್ರಾಸ್ತಾವಿಕವಾಗಿ ಮಾತನಾಡಿ, ಮಕ್ಕಳ ಪ್ರತಿಭೆಯನ್ನ ಓರೆ ಹಚ್ಚುವ ಕಾರ್ಯಕ್ರಮ ಇದಾಗಿದ್ದು ನಿರ್ಣಾಯಕರು ನಿಸ್ಪಕ್ಷಪಾತವಾಗಿ ತೀರ್ು ನೀಡಬೇಕು, ಮಕ್ಕಳ ಸುರಕ್ಷತೆಯ ಜೊತೆಗೆ ಶಿಕ್ಷಣವೂ ಮುಖ್ಯ ಹೀಗಾಗಿ ಶಿಕ್ಷಣಕ್ಕಿಂತ ಸುರಕ್ಷತೆಗೂ ಹೆಚ್ಚು ಆದ್ಯತೆ ನೀಡಬೇಕು ಎಂದರು. ಗ್ಯಾರಂಟಿ ಅಧ್ಯಕ್ಷ ಎಸ್ ಎಫ್ ಮಣಕಟ್ಟಿ ಮಾತನಾಡಿದರು.
ಜೆಎಂಜೆ ಶಾಲೆಯ ಪ್ರಾಚಾರ್ಯೆ ಸಿಸ್ಟರ್ ಅನ್ನಿ ಜಾರ್ಜ್,ಗುಡ್ಡಪ್ಪ ಜಲದಿ, ಕ್ಷೇತ್ರ ಸಮನ್ವಯಾಧಿಕಾರಿ ಗೀತಾಂಜಲಿ ತೆಪ್ಪದ, ನಾಗರಾಜ ದ್ಯಾಮನಕೊಪ್ಪ, ಅರುಣ್ ಹುಡೇದಗೌಡ್ರ, ಡಿ ಎ ಹಿರೇಮಠ, ಸಂಜೀವ ಪೂಜಾರ, ಅಲಿ ನದಾಫ್, ನರಸಿಂಹ ಕೋಮಾರ, ಪ್ರಕಾಶ ಕರಿಶಿವಣ್ಣವರ, ಪ್ರತಾಪ ನಾಯಕ್, ಪ್ರವೀಣ ಸಾಗರ, ಶಿವುಕುಮಾರ ಹಾವೇರಿ, ಎಸ್ ಎನ್ ಮುಗಳಿ, ರಾಜಶೇಖರ ಹೆಸರೂರ, ನ್ಯೂಎಲ್ ಅಧಿಕಾರಿ ಉಮೇಶ ಎಸ್ ಆರ್, ಎಚ್ ಎಚ್ ರಟ್ಟಿಹಳ್ಳಿ, ನಾಗಪ್ಪ ಬೆಂತೂರ ಸೇರಿದಂತೆ ತಾಲೂಕಿನ ಎಲ್ಲ ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು.