ಶಿಗ್ಗಾವ್

ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹುಟ್ಟುಹಬ್ಬ: ಅನ್ನದಾನ, ಉಚಿತ ನೇತ್ರ ತಪಾಸಣಾ ಶಿಬಿರ,ಶಾಲೆ ದತ್ತು ಸ್ವೀಕಾರ ಘೋಷಣೆ

ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹುಟ್ಟುಹಬ್ಬ: ಅನ್ನದಾನ, ಉಚಿತ ನೇತ್ರ ತಪಾಸಣಾ ಶಿಬಿರ,ಶಾಲೆ ದತ್ತು ಸ್ವೀಕಾರ ಘೋಷಣೆ
Union Minister Pralhad Joshi's Birthday: Food distribution, free eye check-up camp, and announcement

ಲೋಕದರ್ಶನ ವರದಿ 

            ಶಿಗ್ಗಾವಿ 27:  ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರ ಹುಟ್ಟುಹಬ್ಬದ ಅಂಗವಾಗಿ ಅಭಿಮಾನಿ ಬಳಗ ಹಾಗೂ ಎಂ.ಎಂ. ಜೋಶಿ ನೇತ್ರ ವಿಜ್ಞಾನ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿ ಒಳರೋಗಿಗಳಿಗೆ ಹಣ್ಣು-ಹಂಪಲುಗಳನ್ನು ವಿತರಿಸಲಾಯಿತು ಹಾಗೂ ಅನ್ನದಾನ ನೆರವೇರಿಸಲಾಯಿತು. ಅಲ್ಲದೆ, ಶಿಗ್ಗಾವಿ ನಗರದ ಡಾ. ಬಿ.ಆರ್‌. ಅಂಬೇಡ್ಕರ್ ಭವನದಲ್ಲಿ ಬೃಹತ್ ಉಚಿತ ನೇತ್ರ ತಪಾಸಣೆ ಹಾಗೂ ಶಸ್ತ್ರಚಿಕಿತ್ಸಾ ಶಿಬಿರವನ್ನುಪಟ್ಟಣದ ಸಂಗನಬಸವ ಮಹಾಸ್ವಾಮಿಗಳು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಆಶೀರ್ವದಿಸಿದರು.

            ನೂರಾರು ಸಾರ್ವಜನಿಕರು ಭಾಗವಹಿಸಿ ಶಿಬಿರದ ಸದುಪಯೋಗ ಪಡೆದುಕೊಂಡರು.  ಪ್ರಾಸ್ತಾವಿಕವಾಗಿ ಬಿಜೆಪಿ ಹಾವೇರಿ ಜಿಲ್ಲಾ ಕಾರ್ಯದರ್ಶಿ ನರಹರಿ ವಾದಿರಾಜ ಕಟ್ಟಿ ಮಾತನಾಡಿ ಜನನಾಯಕರ ಹುಟ್ಟುಹಬ್ಬವನ್ನು ಕೇವಲ ಸಂಭ್ರಮಾಚರಣೆಗೆ ಸೀಮಿತಗೊಳಿಸದೆ, ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನೆರವಾಗುವಂತಹ ಸೇವಾ ಕಾರ್ಯಗಳ ಮೂಲಕ ಆಚರಿಸುವುದೇ ನಿಜವಾದ ಗೌರವ. ಪ್ರಲ್ಹಾದ ಜೋಶಿಯವರ ಜನಪರ ಕಾಳಜಿ ಮತ್ತು ಸೇವಾ ಮನೋಭಾವವೇ ನಮಗೆಲ್ಲರಿಗೂ ಸ್ಫೂರ್ತಿಯಾಗಿದ್ದು, ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಗುಣಮಟ್ಟದ ಕಣ್ಣಿನ ಚಿಕಿತ್ಸೆ ಮತ್ತು ಶಸ್ತ್ರಚಿಕಿತ್ಸೆ ಉಚಿತವಾಗಿ ದೊರೆಯಬೇಕೆಂಬ ಸದುದ್ದೇಶದಿಂದ ಈ ಶಿಬಿರ ಆಯೋಜಿಸಲಾಗಿದೆ ಎಂದರು. 

                ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಶಿವಾನಂದ ಮ್ಯಾಗೇರಿ ಮಾತನಾಡಿ ಐದು ಬಾರಿ ಸಂಸದರಾಗಿ ಹಾಗೂ ಎರಡು ಬಾರಿ ಕೇಂದ್ರ ಸಚಿವರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀ ಪ್ರಲ್ಹಾದ ಜೋಶಿಯವರು ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಅಭೂತಪೂರ್ವ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡು, ಇಡೀ ದೇಶಕ್ಕೆ ಮಾದರಿ ಕ್ಷೇತ್ರವನ್ನಾಗಿ ರೂಪಿಸಿದ್ದಾರೆ. ಮುಂದಿನ ದಿನಗಳಲ್ಲಿಯೂ ಅವರಿಂದ ಇನ್ನೂ ಅನೇಕ ಜನಪರ ಕಾರ್ಯಗಳು ನಡೆಯಲಿವೆ ಎಂದು ಶ್ಲಾಘಿಸಿದರು.    

ತಾಲೂಕು ಉಪಾಧ್ಯಕ್ಷ ಮಲ್ಲೇಶಪ್ಪ ಹರಿಜನ ಮಾತನಾಡಿದರು. 

                    ಮುಂದಿನ ಸಾಮಾಜಿಕ ಕಾರ್ಯಕ್ರಮಗಳ ವಿವಿರಣೆ* :ವ್ಯಾಪಕ ನೇತ್ರ ಶಿಬಿರಗಳು: ತಾಲೂಕಿನ ನಾಲ್ಕು ಜಿಲ್ಲಾ ಪಂಚಾಯಿತಿ ವ್ಯಾಪ್ತಿಗಳಾದ ದುಂಡಸಿ, ಹುಲಗೂರು, ಕುಂದೂರು ಹಾಗೂ ತಡಸ ಗ್ರಾಮಗಳ ಜೊತೆಗೆ ಶಿಗ್ಗಾವಿ ಮತ್ತು ಬಂಕಾಪುರ ಪುರಸಭೆ ವ್ಯಾಪ್ತಿಯಲ್ಲಿ ಶಿಬಿರ ಏರಿ​‍್ಡಸುವುದು. 

ಶಾಲೆ ದತ್ತು ಸ್ವೀಕಾರ : ತಡಸ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ನೀರಲಗಿ ಪ್ರೌಢಶಾಲೆಯನ್ನು ದತ್ತು ಸ್ವೀಕರಿಸಿ, ಶಾಲೆಯ ಸವಾಂರ್ಗೀಣ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿಚ್ಪ

                ಈ ಸಂದರ್ಭದಲ್ಲಿ ಶಿಗ್ಗಾವಿ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ. ರಾಜೇಶ್ವರಿ ಚನ್ನಪ್ಪಗೌಡ ಹಿರಿಯರಾದ ಕರಿಯಪ್ಪ ಕಟ್ಟಿಮನಿ, ಜಯಣ್ಣ ಹೆಸರೂರಮಾಜಿ ಪುರಸಭೆ ಸದಸ್ಯ ಭರಮಜ್ಜ ನವಲಗುಂದ, ಹನುಮಂತಪ್ಪ ಮಾದರ, ಮಂಜುನಾಥ ಮಿರ್ಜಿ, ಸಂತೋಷ ದೊಡ್ಮನಿ, ಅಣ್ಣಪ್ಪ ಬಡ್ಡಿ, ಸಂತೋಷ ಕಟ್ಟಿಮನಿ, ರಂಗನಾಥ ಗಾಯಕವಾಡ, ಪ್ರಶಾಂತ ಬಡ್ಡಿ, ಬಸನಗೌಡ ಮೇಲಿನಮನಿ, ಬಸವರಾಜ ಕೇಸರಿ, ಮುತ್ತು ಯಲಿಗಾರ ಸೇರಿದಂತೆ ಪಕ್ಷದ ಮುಖಂಡರು,ಕಾರ್ಯಕರ್ತರು, ಸಾರ್ವಜನಿಕರು, ಅಭಿಮಾನಿಗಳು ಉಪಸ್ಥಿತರಿದ್ದರು. 


ಸುದ್ದಿ ಓದಿ