ಕನ್ನಡದ ಭವ್ಯ ಪರಂಪರೆಯನ್ನು ಮಕ್ಕಳಿಗೆ ತಿಳಿಸುವುದು ಇಂದಿನ ಅಗತ್ಯ.
ಲೋಕದರ್ಶನ ವರದಿ
ಧಾರವಾಡ 27 : ಇಂದಿನ ಮಕ್ಕಳಿಗೆ ಕನ್ನಡ ನಾಡು-ನುಡಿ ನೆಲ, ಜಲ, ಸಂಸ್ಕೃತಿ ಹಾಗೂ ಪರಂಪರೆಗಳನ್ನು ತಿಳಿಸಿ ಕೊಡುವುದುಅತಿಅವಶ್ಯಕವಾಗಿದೆ. ಮಕ್ಕಳು ಆಂಗ್ಲ ಭಾಷೆಯ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸಿದರೂಕೂಡ ಮಾತೃಭಾಷೆಯಾದಕನ್ನಡವನ್ನು ಪ್ರೀತಿಸಬೇಕು ಮತ್ತುಗೌರವಿಸಬೇಕು ಹಾಗೂ ಕನ್ನಡ ಭಾಷೆಯನ್ನು ನಮ್ಮ ಹೆಮ್ಮೆಯಾಗಿಸಿಕೊಳ್ಳಬೇಕೆಂದು ವಿಶ್ರಾಂತ ಪ್ರಾಧ್ಯಾಪಕ, ಸಾಹಿತಿಡಾ.ಸಂಗಮನಾಥ ಲೋಕಾಪುರ ಹೇಳಿದರು.
ಅವರುಕರ್ನಾಟಕ ವಿದ್ಯಾವರ್ಧಕ ಸಂಘದ ಮಹಿಳಾ ಮತ್ತು ಮಕ್ಕಳ ಮಂಟಪವುಇಲ್ಲಿಯ ಶಾಂತಿ ಸದನಆಂಗ್ಲ ಮಾಧ್ಯಮ ಶಾಲೆಯಲ್ಲಿಕನ್ನಡಜಾಗೃತಿಕಾರ್ಯಕ್ರಮದಅಡಿಯಲ್ಲಿ ಆಯೋಜಿಸಿದ್ದ ಕನ್ನಡ ನಾಡು ನುಡಿ ಪರಂಪರೆಕುರಿತು ವಿವಿಧ ಸ್ಪರ್ಧೆ ಹಾಗೂ ಉಪನ್ಯಾಸಕಾರ್ಯಕ್ರಮದ ಮುಖ್ಯಅತಿಥಿಯಾಗಿ ಮಾತನಾಡಿದರು.
ಕ.ವಿ.ವ.ಸಂಘದ ಸಹಕಾರ್ಯದರ್ಶಿ ಕುಂಬಿ ಶಾಲೆ ನಡೆದು ಬಂದದಾರಿಯ ಬಗ್ಗೆ ತಿಳಿಸಿದರು.ಡಾ ವಿ ಶಾರದಾಅವರುಕನ್ನಡ ಹಾಗೂ ಇಂಗ್ಲಿಷ್ ಭಾಷೆಗಳ ಬಳಕೆಯ ನಡುವೆ ಸಮನ್ವಯ ಸಾಧಿಸಬೇಕೆಂದರು.
ಶಾಲೆಯ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಫಿಲೋಮಿನಾ ಮೆನೇಜಸ್ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ಕರ್ನಾಟಕ ವಿದ್ಯಾವರ್ಧಕ ಸಂಘವು ತಮ್ಮ ಶಾಲೆಯ ವಿದ್ಯಾರ್ಥಿಗಳಲ್ಲಿನ ್ರತಿಭೆಯನ್ನುತೋರಿ್ಪಡಸಲು ಅವಕಾಶ ಕಲ್ಪಿಸಿದ್ದಕ್ಕಾಗಿ ಮಹಿಳಾ ಮತ್ತು ಮಕ್ಕಳ ಮಂಟಪಕ್ಕೆಕೃತಜ್ಞತೆ ಸಲ್ಲಿಸಿದರು.
ಶಾಲಾ ಮಕ್ಕಳಿಗಾಗಿ ನಾಡು ನುಡಿ ಪರಂಪರೆಕುರಿತು ಭಾಷಣ ಸ್ಪರ್ಧೆಕನ್ನಡ ನಾಡಿನಜನಪದ ಕಲೆಗಳ ಕುರಿತುಚಿತ್ರಕಲಾ ಸ್ಪರ್ಧೆ ಹಾಗೂ ಕನ್ನಡ ಶಬ್ದಗಳ ಬಳಕೆ ಸ್ರ್ಧೆಯನ್ನುಏರಿ್ಪಡಸಲಾಗಿತ್ತು.ಈ ಸ್ಪರ್ಧೆಗಳಲ್ಲಿ 50ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸಿದ್ದರು.ಕಾರ್ಯಕ್ರಮದ ಕೊನೆಗೆ ವಿಜೇತರಿಗೆ ಬಹುಮಾನ ವಿತರಿಸಲಾಯಿತು.