ಧಾರವಾಡ - ಹುಬ್ಬಳ್ಳಿ

ಮರೇವಾಡ ಬಸವಣ್ಣ ದೇವರ ಕಾರ್ತೀಕ ದೀಪೋತ್ಸವ

ಮರೇವಾಡ ಬಸವಣ್ಣ ದೇವರ ಕಾರ್ತೀಕ ದೀಪೋತ್ಸವ

ಲೋಕದರ್ಶನ ವರದಿ

             ಧಾರವಾಡ 28 : ತಾಲೂಕಿನ ಮರೇವಾಡ ಗ್ರಾಮದ ಜಾಗೃತ ಶ್ರೀಬಸವಣ್ಣ(ನಂದೀಶ್ವರ) ದೇವರ ಸನ್ನಿಧಾನದಲ್ಲಿ ವಾರ್ಷಿಕ ಕಾರ್ತೀಕ ದೀಪೋತ್ಸವ ಸೋಮವಾರ (ನ.30 ರಂದು) ಸಂಜೆ 5 ಗಂಟೆಗೆ ಶ್ರೀಬಸವಣ್ಣ ದೇವಸ್ಥಾನ ಪ್ರಸಾದ ಮಂಡಳಿ ಹಾಗೂ ದೇವಸ್ಥಾನದ ಆಡಳಿತ ಮಂಡಳಿಯ ಸಂಯುಕ್ತ ಆಶ್ರಯದಲ್ಲಿ ಜರುಗಲಿದೆ. ಅಮ್ಮಿನಬಾವಿ ಸಂಸ್ಥಾನ ಪಂಚಗೃಹ ಹಿರೇಮಠದ ಶ್ರೀಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯದಲ್ಲಿ ಧಾರವಾಡ ಮುರುಘಾಮಠದ ಶ್ರೀಮಲ್ಲಿಕಾರ್ಜುನ ಸ್ವಾಮೀಜಿ ದೀಪೋತ್ಸವ ಉದ್ಘಾಟಿಸುವರು.

            ಶಿರಕೋಳ ಹಿರೇಮಠದ ಶ್ರೀಗುರುಸಿದ್ಧೇಶ್ವರ ಶಿವಾಚಾರ್ಯ ಸ್ವಾಮೀಜಿ, ಸುಳ್ಳದ ಪಂಚಗೃಹ ಹಿರೇಮಠದ ಶ್ರೀಶಿವಸಿದ್ಧರಾಮೇಶ್ವರ ಶಿವಾಚಾರ್ಯ ಸ್ವಾಮೀಜಿ ಹಾಗೂ ಮೊರಬ ಜಡಿಮಠದ ಶ್ರೀಮಹೇಶ್ವರ ಶಿವಾಚಾರ್ಯ ಸ್ವಾಮೀಜಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ಮರೇವಾಡದ ಶೇಖರಯ್ಯ ಹಿರೇಮಠ ಹಾಗೂ ಅಂಕಲಯ್ಯ ಯರಗಂಬಳಿಮಠ ಅವರು ಕಾರ್ತೀಕ ದೀಪೋತ್ಸವದ ಪೂಜಾ ಕೈಂಕರ್ಯಗಳನ್ನು ನೆರವೇರಿಸುವರು. ಸಾಂಸ್ಕೃತಿಕ ಕಾರ್ಯಕ್ರಮ : ಸಮಾರಂಭದ ಅಂಗವಾಗಿ ವಿವಿಧ ಹಿಂದುಸ್ಥಾನಿ ಗಾಯಕರು,

               ಜಾನಪದ ಕಲಾವಿದರು ಹಾಗೂ ಶಾಲಾ ಮಕ್ಕಳಿಂದ ಭಕ್ತಿ ಸಂಗೀತ, ಜಾನಪದ ಗೀತಗಾಯನ, ಹಾಸ್ಯ ರಸಮಂಜರಿ ಸೇರಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಮರೇವಾಡ ಗ್ರಾಮದಲ್ಲಿರುವ 8 ವಿವಿಧ ದೇವಸ್ಥಾನಗಳ ಟ್ರಸ್ಟ್‌ ಕಮೀಟಿಗಳ ಹಾಗೂ ಹಲವಾರು ಯುವಕ ಮಂಡಗಳ ಪದಾಧಿಕಾರಿಗಳು ಪಾಲ್ಗೊಳ್ಳುವರು. ಹತ್ತಿರದ ಅಮ್ಮಿನಬಾವಿ, ತಿಮ್ಮಾಪೂರ ಮತ್ತು ಕರಡಿಗುಡ್ಡ ಗ್ರಾಮಗಳ ಭಕ್ತರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಪ್ರಕಟಣೆಯಲ್ಲಿ ಕೋರಲಾಗಿದೆ.

ಸುದ್ದಿ ಓದಿ